ಬೆಂಗಳೂರು: ಮುಂದಿನ ವಾರದಿಂದ ಭಕ್ತರಿಗೆ ದೇವರು ದರ್ಶನ ಕರುಣಿಸುವ ಸಾಧ್ಯತೆ ಇದೆ. ಸಾಮಾಜಿಕ ಅಂತರ, ಮಾಸ್ಕ್ ಬಳಕೆ ಕಡ್ಡಾಯ ಮಾಡಲಾಗುತ್ತಿದ್ದು ತೀರ್ಥ, ಪ್ರಸಾದಗಳಿಗೆ ಬ್ರೇಕ್ ಬೀಳುವ ಸಾದ್ಯತೆ ಇದೆ. ಒಂದು ವೇಳೆ ಸರಕಾರ ಅವಕಾಶ ನೀಡಿದರೇ ದೇವಸ್ಥಾನಗಳಲ್ಲಿ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳನ್ನು ಈಗಾಗಲೇ ಇಲಾಖೆ ಸಿದ್ಧಪಡಿಸಿದೆ ಎಂದು ಹೇಳಲಾಗಿದೆ.

ತಿರುಪತಿಯ ತಿಮ್ಮಪ್ಪನ ದೇವಸ್ಥಾನ ಸಹ ಸಜ್ಜಾಗುತ್ತಿರುವ ವರದಿಗಳಿವೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸರತಿ ಸಾಲಿನಲ್ಲಿ ಬರುವವರಿಗೆ ಕಟಕಟೆಗಳನ್ನು ಹಾಕಲಾಗುತ್ತಿದೆ ಎಂದು ವರದಿಯಾಗಿದೆ. ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ಮಾರ್ಚ್‌ 25ರಿಂದಲೇ ದೇವಸ್ಥಾನಗಳನ್ನು ಬಂದ್ ಮಾಡಲಾಗಿತ್ತು. ಆದರೆ ನಿತ್ಯ ದೇವರ ಪೂಜಾ ವಿಧಿ ನೆರವೇರಿಸಲು ಅರ್ಚಕರಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿತ್ತು.

ದೇವಸ್ಥಾನಗಳನ್ನೆ ನಂಬಿಕೊಂಡ ಅದೆಷ್ಟೋ ಕುಟುಂಬಳಿಗೆ ತೀವ್ರ ತೊಂದರೆಯಾಗಿತ್ತು. ಇದರಿಂದ ದೇವಸ್ಥಾನಗಳನ್ನು ಪುನಃ ಆರಂಭಿಸಬೇಕು ಎನ್ನುವ ಬಗ್ಗೆ ಸಾಕಷ್ಟು ಒತ್ತಡಗಳಿದ್ದವು. ಈ ಕಾರಣದಿಂದ ಸರ್ಕಾರ ಕೆಲವು ನಿರ್ಭಂಧನೆಗಳನ್ನು ವಿಧಿಸಿ ದೇವಸ್ಥಾನ ಪುನಃ ತೆಗೆಯಲು ತೀರ್ಮಾನ ತೆಗೆದುಕೊಳ್ಳಲು ಮುಂದಾಗಿದೆ ಎನ್ನಲಾಗಿದೆ.

ಮೂರನೇ ಹಂತದ ಲಾಕ್‌ಡೌನ್ ಇದೇ 17ಕ್ಕೆ ಕೊನೆಗೊಳ್ಳಲಿದೆ. ಒಂದು ವೇಳೆ ವಿಸ್ತರಣೆಯಾದರೂ ಬಹುತೇಕ ಎಲ್ಲ ಸಾರ್ವಜನಿಕ ಚಟುವಟಿಕೆಗಳಿಗೆ ರಿಯಾಯಿತಿ ನೀಡುವ ಸಾಧ್ಯತೆ ಇದೆ. ಆದರೆ ಶಿಘ್ರ ಘಂಟಾನಾದ ಕೇಳಬಹುದು ಎನ್ನುವ ನಿರೀಕ್ಷೆ ಮಾತ್ರ ಜನರಲ್ಲಿ ಮೂಡಿದೆ.

Leave a Reply

Your email address will not be published. Required fields are marked *

You May Also Like

ಲಾಕ್ ಡೌನ್ ಬಗ್ಗೆ ಆದೇಶ ಹೊರಡಿಸಿದ ಸರ್ಕಾರ

ಬೆಂಗಳೂರು: ಲಾಕ್ ಡೌನ್ ಬಗ್ಗೆ ಸರ್ಕಾರ ಈಗಾಗಲೇ ನೀಡಿರುವ ಮಾರ್ಗಸೂಚಿಗೆ ಕೆಲವೊಂದು ಅಂಶಗಳನ್ನು ಸೇರ್ಪಡಿಸಿ ರಾಜ್ಯ…

ಲಕ್ಷ್ಮೇಶ್ವರ ತಾಲೂಕಿನಲ್ಲಿ 7 ಜನ ಅವಿರೋಧ ಆಯ್ಕೆ: 167 ಸ್ಥಾನಗಳಿಗೆ ಚುನಾವಣೆ

ತಾಲ್ಲೂಕಿನಲ್ಲಿ ಗ್ರಾಮ ಪಂಚಾಯ್ತಿಗಳ ಚುನಾವಣಾ ಕಣ ರಂಗೇರುತ್ತಿದೆ. ಸೋಮವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿತ್ತು.

ಗದಗ ಜಿಲ್ಲೆಯಲ್ಲಿ 2 ಸಾವಿರ ತೋಟ ನಿರ್ಮಾಣ ಗುರಿ: ಜಿ.ಪಂ ಅಧ್ಯಕ್ಷ ರಾಜೂಗೌಡ

ಗದಗ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 2 ಸಾವಿರ ಹೊಸ ತೋಟಗಳನ್ನು ನಿರ್ಮಿಸಲು ತೋಟಗಾರಿಕೆ ಅಧಿಕಾರಿಗಳು ಶ್ರಮಿಸಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾಜೂಗೌಡ ಕೆಂಚನಗೌಡ್ರ ಸೂಚಿಸಿದರು.