ಗದಗ ಜಿಲ್ಲೆಯ ಹಳ್ಳಿ ಗಳಲ್ಲಿ ಕೊರೊನಾ ಭಯ..!: ಗುಟಕಾ, ಸಿಗರೇಟ್ ಮಾರಿದ್ರೆ ದಂಡ ಗ್ಯಾರಂಟಿ..!

ಗದಗ: ಜಿಲ್ಲೆಯಲ್ಲಿ 180 ಪಾಸಿಟಿವ್ ಕೇಸ್ ಪತ್ತೆಯಾದ ಹಿನ್ನಲೆ ಹಳ್ಳಿ ಹಳ್ಳಿಗೂ ಕೊರೋನಾ ಭಯ ಶುರುವಾಗಿದೆ. ಕೊರೋನಾ ತಡೆಗಟ್ಟಲು ಜಿಲ್ಲಾಡಳಿತ ಹಳ್ಳಿಯ ಗಲ್ಲಿ ಗಲ್ಲಿಯಲ್ಲೂ ಔಷಧ ಸಿಂಪಡಣೆ ಕಾರ್ಯ ನಡೆಸಿದೆ. ಗದಗ ಜಿಲ್ಲೆಯ ಏಳು ತಾಲೂಕಿನ ಗ್ರಾಮಗಳಲ್ಲಿ ಔಷಧ ಸಿಂಪಡಣೆ ಕಾರ್ಯ ಆರಂಭಿಸಿದೆ.

ನರಗುಂದ ತಾಲೂಕಿನ ಬೆನಕನಕೊಪ್ಪ , ಸಂಕದಾಳ ಗ್ರಾಮದಲ್ಲಿ ಔಷಧೀಯ ಸಿಂಪಡಣೆ ಮಾಡಲಾಗಿದೆ. ಗದಗ ತಾಲೂಕಿನ ಹೊಂಬಳ, ಲಕ್ಕುಂಡಿ ಗ್ರಾಮದಲ್ಲಿ ಔಷಧೀಯ ಸಿಂಪಡಣೆ ನಡೆಸಿದ್ದು, ಕೋವಿಡ್-19 ವೈರಸ್ ತಡೆಗಟ್ಟಲ್ಲು ಜಿಲ್ಲಾಡಳಿತ ಹರಸಾಹಸ ಪಡುತ್ತಿದೆ. ಧ್ವನಿ ವರ್ಧಕದ ಮೂಲಕ ಮಾಸ್ಕ್, ಸ್ಯಾನಿಟೈಸರ್ ಬಳಸುವಂತೆ ಸೂಚನೆ ನೀಡಲಾಗುತ್ತಿದೆ. ಜನ್ರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.

ಗ್ರಾಮದಲ್ಲಿ ಗುಟಕಾ, ತಂಬಾಕಿನಂತಹ ಮಾದಕ ವಸ್ತುಗಳನ್ನು ಮಾರಾಟ ಮಾಡಿದ್ರೆ 100 ದಂಡ ವಿಧಿಸಲಾಗುವುದೆಂದು ಎಚ್ಚರಿಕೆ ನೀಡಲಾಗುತ್ತಿದೆ. ಗ್ರಾಮ ಪಂಚಾಯತ ನಿಂದ ದಂಡ ವಸೂಲಿಗೆ ಸೂಚನೆ ನೀಡಲಾಗುತ್ತಿದೆ. ಈ ಮೂಲಕ ಜನರ ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ಜಿಲ್ಲಾಡಳಿತ ಕಠಿಣ ಕ್ರಮಕ್ಕೆ ಮುಂದಾಗಿದೆ.

Exit mobile version