ಗದಗ: ಜಿಲ್ಲೆಯಲ್ಲಿ 180 ಪಾಸಿಟಿವ್ ಕೇಸ್ ಪತ್ತೆಯಾದ ಹಿನ್ನಲೆ ಹಳ್ಳಿ ಹಳ್ಳಿಗೂ ಕೊರೋನಾ ಭಯ ಶುರುವಾಗಿದೆ. ಕೊರೋನಾ ತಡೆಗಟ್ಟಲು ಜಿಲ್ಲಾಡಳಿತ ಹಳ್ಳಿಯ ಗಲ್ಲಿ ಗಲ್ಲಿಯಲ್ಲೂ ಔಷಧ ಸಿಂಪಡಣೆ ಕಾರ್ಯ ನಡೆಸಿದೆ. ಗದಗ ಜಿಲ್ಲೆಯ ಏಳು ತಾಲೂಕಿನ ಗ್ರಾಮಗಳಲ್ಲಿ ಔಷಧ ಸಿಂಪಡಣೆ ಕಾರ್ಯ ಆರಂಭಿಸಿದೆ.

ನರಗುಂದ ತಾಲೂಕಿನ ಬೆನಕನಕೊಪ್ಪ , ಸಂಕದಾಳ ಗ್ರಾಮದಲ್ಲಿ ಔಷಧೀಯ ಸಿಂಪಡಣೆ ಮಾಡಲಾಗಿದೆ. ಗದಗ ತಾಲೂಕಿನ ಹೊಂಬಳ, ಲಕ್ಕುಂಡಿ ಗ್ರಾಮದಲ್ಲಿ ಔಷಧೀಯ ಸಿಂಪಡಣೆ ನಡೆಸಿದ್ದು, ಕೋವಿಡ್-19 ವೈರಸ್ ತಡೆಗಟ್ಟಲ್ಲು ಜಿಲ್ಲಾಡಳಿತ ಹರಸಾಹಸ ಪಡುತ್ತಿದೆ. ಧ್ವನಿ ವರ್ಧಕದ ಮೂಲಕ ಮಾಸ್ಕ್, ಸ್ಯಾನಿಟೈಸರ್ ಬಳಸುವಂತೆ ಸೂಚನೆ ನೀಡಲಾಗುತ್ತಿದೆ. ಜನ್ರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.

ಗ್ರಾಮದಲ್ಲಿ ಗುಟಕಾ, ತಂಬಾಕಿನಂತಹ ಮಾದಕ ವಸ್ತುಗಳನ್ನು ಮಾರಾಟ ಮಾಡಿದ್ರೆ 100 ದಂಡ ವಿಧಿಸಲಾಗುವುದೆಂದು ಎಚ್ಚರಿಕೆ ನೀಡಲಾಗುತ್ತಿದೆ. ಗ್ರಾಮ ಪಂಚಾಯತ ನಿಂದ ದಂಡ ವಸೂಲಿಗೆ ಸೂಚನೆ ನೀಡಲಾಗುತ್ತಿದೆ. ಈ ಮೂಲಕ ಜನರ ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ಜಿಲ್ಲಾಡಳಿತ ಕಠಿಣ ಕ್ರಮಕ್ಕೆ ಮುಂದಾಗಿದೆ.

Leave a Reply

Your email address will not be published. Required fields are marked *

You May Also Like

ಕಾರುಗಳನ್ನು ಕದಿಯುತ್ತಿದ್ದ ಸಿನಿಮಾ ನಟನ ಬಂಧನ!

ಲಕ್ನೋ : ಸಿನಿಮಾನ ನಟನೊಬ್ಬ ತನ್ನ ಸಹಚರರೊಂದಿಗೆ ಸೇರಿಕೊಂಡು ಐಷಾರಾಮಿ ಕಾರುಗಳನ್ನೇ ಕದಿಯುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದ್ದು, ಸದ್ಯ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಶಿರಹಟ್ಟಿ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘಕ್ಕೆ ಅವಿರೋಧ ಆಯ್ಕೆ

2020-21 ರಿಂದ ಮುಂದಿನ ಐದು ವರ್ಷಗಳ ಅವಧಿಗೆ ಶಿರಹಟ್ಟಿ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಅವಿರೋಧ ಆಯ್ಕೆ ಮಾಡಲಾಯಿತು.

ರಾಜ್ಯದಲ್ಲಿ ಮಹಿಳೆಯರಿಗಿಂತಲೂ ಪುರುಷರನ್ನೇ ಹೆಚ್ಚು ಕಾಡುತ್ತಿರುವ ಕೊರೊನಾ!

ರಾಜ್ಯದಲ್ಲಿ ಇಲ್ಲಿಯವರೆಗೂ 858 ಜನರಿಗೆ ಸೋಂಕು ತಗುಲಿದೆ. ಈ ಪೈಕಿ ಪುರುಷರೇ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿಗೆ ಒಳಗಾಗಿದ್ದಾರೆ. ಹೆಣ್ಮಕ್ಕಳೇ ಸ್ಟ್ರಾಂಗ್ ಗುರು ಎಂಬುವುದನ್ನು ಮಹಿಳೆಯರು ಮತ್ತೊಮ್ಮೆ ಸಾರಿದ್ದಾರೆ.

ಗದಗ ಜಿಲ್ಲೆಯ ಖಾಕಿ ಖದರ್ ಗೆ ಜನರು ಖುಷ್..!: ಕಳೆದ ವಸ್ತುಗಳು ಕೈಸೇರಿದ್ದಕ್ಕೆ ಜನ್ರು ಖುಷ್ !

ಖಾಕಿ ತನ್ನ ಖದರ್ ತೋರಿಸಿದರೆ ಏನೆಲ್ಲ ಮಾಡಬಹುದು ಎನ್ನುವುದಕ್ಕೆ ಗದಗ ಜಿಲ್ಲೆಯ ಪೊಲೀಸರು ತಾಜಾ ಉದಾಹರಣೆ. ಒಂದು ವರ್ಷದಿಂದ ಜಿಲ್ಲೆಯಲ್ಲಿ ಆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳ್ಳತನ ಜಾಲ ಭೇದಿಸಿ ಕಳ್ಳರ ಹೆಡೆಮುರಿ ಕಟ್ಟಿ ಜನರು ಕಳೆದುಕೊಂಡ ವಸ್ತುಗಳನ್ನು ಮರಳಿಸುವ ಮೂಲಕ ಜಿಲ್ಲಾ ಪೊಲೀಸ್ ಇಂದು ಜನರ ಮೆಚ್ಚುಗೆಗೆ ಪಾತ್ರವಾಯಿತು.