ಲಕ್ನೋ : ಸಿನಿಮಾನ ನಟನೊಬ್ಬ ತನ್ನ ಸಹಚರರೊಂದಿಗೆ ಸೇರಿಕೊಂಡು ಐಷಾರಾಮಿ ಕಾರುಗಳನ್ನೇ ಕದಿಯುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದ್ದು, ಸದ್ಯ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರಿಂದ ರೂ. 5 ಕೋಟಿ ಮೌಲ್ಯದ 50 ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಕುರಿತು ಮಾಹಿತಿ ನೀಡಿದ ಲಕ್ನೋ ಪೊಲೀಸ್ ಆಯುಕ್ತ ಸುಜಿತ್ ಪಾಂಡೆ, ಇಲ್ಲಿಯವರೆಗೆ 5 ಜನರನ್ನು ಮಾತ್ರ ಬಂಧಿಸಲಾಗಿದೆ. ಮುಖ್ಯ ಆರೋಪಿ ನಾಸಿರ್ ಖಾನ್ ಅಲಿಯಾಸ್ ಚೋತಿ ಅಮಿನಾಬಾದ್ ಪ್ರದೇಶದ ನಿವಾಸಿಯಾಗಿದ್ದು, ಮೂರು ಭೋಜ್ಪುನರಿ ಚಲನಚಿತ್ರಗಳಲ್ಲಿ ನಟಿಸಿದ್ದಾನೆ. ಈ ಪೈಕಿ ಒಂದು ಸಿನಿಮಾದಲ್ಲಿ ಪೊಲೀಸ್ ಇನ್ಸಪೆಕ್ಟರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ.

ನಾಸಿರ್ ಕದ್ದ ಕಾರುಗಳನ್ನು ಆನ್ಲೈ ನ್ ಮೂಲಕ ಮಾರಾಟ ಮಾಡುತ್ತಿದ್ದ. ಮತ್ತೋರ್ವ ಆರೋಪಿ ರಿಜ್ವಾನ್ (50) ಕಾರು ಕಳ್ಳತನದಿಂದ ಬಂದ ಹಣದಲ್ಲಿಯೇ ಬ್ಯಾಂಕಾಕ್ನಪಲ್ಲಿ ಹೊಟೇಲ್ ಖರೀದಿಸಿದ್ದಾನೆ. ಉಳಿದಂತೆ ಲಕ್ನೋ ಮೂಲದ ಆರೋಪಿ ಮೊಯಿನುದ್ದೀನ್ ಖಾನ್ ಮತ್ತು ವಿನಯ್ ತಲ್ವಾರ್, ಕಾನ್ಪುರದ ಶ್ಯಾಮ್ ಜಿ ಜೈಸ್ವಾಲ್ ಎಂದು ಗುರುತಿಸಲಾಗಿದೆ.

ಕಾರು ಕಳ್ಳತನದ ದಂಧೆಯಲ್ಲಿರುವ ಇತರ ಎಂಟು ಆರೋಪಿಗಳು ಪರಾರಿಯಾಗಿದ್ದಾರೆ. ಅವರು ಮೀರತ್, ಆಗ್ರಾ, ಮೊರಾದಾಬಾದ್, ದೆಹಲಿ ಮತ್ತು ಲಖಿಂಪುರ ಖೇರಿಗೆ ಸೇರಿದವರಾಗಿದ್ದಾರೆ.

Leave a Reply

Your email address will not be published. Required fields are marked *

You May Also Like

ಡಿವೋರ್ಸ್ ನೀಡಿ, ಗೆಳತಿಯೊಂದಿಗೆ ಪತಿಯ ಮದುವೆ ಮಾಡಿದ ಪತ್ನಿ!

ಭೋಪಾಲ್ : ಪತಿಗೆ ಡಿವೋರ್ಸ್ ಕೊಟ್ಟು ಸ್ನೇಹಿತೆಯೊಂದಿಗೆ ಮದುವೆ ಮಾಡಿಸಿರುವ ಘಟನೆ ಮಧ್ಯ ಪ್ರದೇಶದ ಬೋಪಾಲ್ ನಲ್ಲಿ ನಡೆದಿದೆ.

ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದಾರೆ ದತ್ತ ಮೇಷ್ಟ್ರು..!

ಮಾಜಿ ಶಾಸಕ ವೈ.ಎಸ್.ವಿ. ದತ್ತ ಅವರು ಈಗ ಮೇಷ್ಟ್ರ ಆಗಿದ್ದಾರೆ. ಸದ್ಯ ಅವರು ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಫೇಸ್ ಬುಕ್ ಲೈವ್ ನಲ್ಲಿ ಪಾಠ ಮಾಡುತ್ತಿದ್ದಾರೆ.

ಪೇಶೆಂಟ್ ನಂ.419 ಸೃಷ್ಟಿಸಿದ ಅವಾಂತರಕ್ಕೆ ಇಡೀ ರಾಜ್ಯವೇ ಮತ್ತೊಮ್ಮೆ ಬೆಚ್ಚಿ ಬಿದ್ದಿದೆ?

ಕ್ವಾರೆಂಟೈನ್ ಮುಗಿಸಿ ಬಂದ 419 ವ್ಯಕ್ತಿಯಿಂದಾಗಿ ಬೆಂಗಳೂರಿನಲ್ಲಿ ಆತಂಕ ಮನೆ ಮಾಡಿದೆ. ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಬುಲೆಟಿನ್ ನಲ್ಲಿ ನಿನ್ನೆ ಈ ವ್ಯಕ್ತಿ ಐಸಿಯುನಲ್ಲಿಯೇ ಇದ್ದಾನೆ ಎಂದು ಹೇಳಲಾಗಿತ್ತು.

ಇನ್ಮೆಲೆ ಹೋಮ್ ಡಿಲೇವರಿ ಮೂಲಕ ಮದ್ಯ ಸಿಗುತ್ತಾ?

ಮದ್ಯ ಮಾರಾಟದ ಸ್ಥಳಗಳಲ್ಲಿ ಜನ ಸಂದಣಿ ಹೆಚ್ಚಾಗುತ್ತಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಆಗುತ್ತಿಲ್ಲ. ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಹೋಮ್ ಡೆಲಿವರಿ ಕೈಗೊಳ್ಳಲು ಸಲಹೆ ನೀಡಿದೆ.