ಗದಗ: ಧಾರವಾಡ ಜಿಲ್ಲೆಯಿಂದ ಗದಗ ಜಿಲ್ಲೆಗೆ ಬಂದಿದ್ದ ಕಂಡಕ್ಟರ್ ಹಾಗೂ ಗದಗ ಮೂಲದ ಬೆಂಗಳೂರಿನ ಹೋಟೆಲ್ ಒಂದರ ಅಡುಗೆ ತಯಾರಕನಿಗೆ ಇಂದು ಕೊರೊನಾ ಸೋಂಕು ದೃಢಪಟ್ಟಿದೆ.
ಧಾರವಾಡ ಜಿಲ್ಲೆಯಿಂದ ನರಗುಂದ ನಗರದ ಗಡಿ ಓಣಿಯ ನಿವಾಸಿ 39 ವರ್ಷದ ಪುರುಷ (ಪಿ-15320) ವಾಯವ್ಯ ಸಾರಿಗೆ ಸಂಸ್ಥೆ ಕಂಡಕ್ಟರ್ ಇದ್ದು ಹುಬ್ಬಳ್ಳಿ ನವನಗರ ಬಸ್ ಕಾರ್ಯನಿರ್ವಹಿಸುತ್ತಿದ್ದು ಹೊಸೂರ ಡಿಪೋಗೆ ಸೇರಿದವರು.
ಬೆಂಗಳೂರಿನ ಉತ್ತರ ಕರ್ನಾಟಕ ಊಟದ ಹೋಟೆಲ್ ಅಡುಗೆ ಕಾರ್ಯ ನಿರ್ವಹಿಸುವ ರೋಣ ನಗರದ ಬಾದಾಮಿ ರಸ್ತೆಯಲ್ಲಿರುವ ಕನ್ನಡ ಶಾಲೆ ಹತ್ತಿರದ ನಿವಾಸಿ 21 ವರ್ಷದ ಪುರುಷ (ಪಿ-15321) ಇವರಿಗೆ ಊರಿಗೆ ಬಂದ ಮೇಲೆ ಕೋವಿಡ್-19 ಸೋಂಕು ದೃಢಪಟ್ಟಿದೆ.
ಈ ಎರಡೂ ವ್ಯಕ್ತಿಗಳ ಪ್ರಥಮ ಮತ್ತು ದ್ವಿತೀಯ ಸಂಪರ್ಕಿತರ ಪತ್ತೆ ಕಾರ್ಯ ನಡೆದಿದೆ.
ಇವರಿಗೆ ಗದಗ ನಿಗದಿತ ಜಿಮ್ಸ್ಸ್ ಕೊವಿಡ್-19 ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಗದಗ ಜಿಲ್ಲಾಧಿಕಾರಿ ಸುಂದರೇಶ್ ಬಾಬು ಎಂ. ತಿಳಿಸಿದ್ದಾರೆ.