ಗದಗ: ಕೆಲ ದಿನಗಳ ಹಿಂದೆ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಪ್ರಕ್ರಿಯೇ ನಡೆದಿತ್ತು. ಇದರಲ್ಲಿ ಬಿಜೆಪಿಯ ರವೀಂದ್ರ ಉಪ್ಪಿನಬೆಟಗೇರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ನಂತರದ ಬೆಳವಣಿಗೆಯಲ್ಲಿ ಈ ಬಗ್ಗೆ ಚುನಾವಣೆ ಪ್ರಕ್ರಿಯೇ ಪ್ರಶ್ನಿಸಿ ಹಿಂದಿನ ಅವಧಿಯ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ್ ನ್ಯಾಯಾಲಯ ಮೆಟ್ಟಿಲೇರಿದ್ದರು. ಇದರಿಂದ ಜಿಲ್ಲಾ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು.

ಆದರೆ ಇಂದು ಗದಗ ಜಿಲ್ಲಾ ನ್ಯಾಯಾಲಯವು ಮುಂಡರಗಿ ಎ.ಪಿ.ಎಮ್.ಸಿ ಅಧ್ಯಕ್ಷರ ಆಯ್ಕೆಗೆ ತಾತ್ಕಾಲಿಕ ತಡೆಯಾಜ್ಞೆ ನಿಡುರುವದನ್ನು ತೆರವುಗೊಳಸಿ ಮದ್ಯಂತರ ಅರ್ಜಿ ರದ್ದುಪಡಸಿದೆ. ಈ ವಿಚಾರವಾಗಿ ಮುಂಡರಗಿ ತಹಶಿಲ್ದಾರ್ ಗೆ ಕೂಡಲೆ ನೋಟಿಸ್ ಜಾರಿ ಮಾಡಿ ಜುಲೈ 30 ರಂದು ನ್ಯಾಯಾಲಯಕ್ಕೆ ಹಾಜರಾಗಲು ಸೂಚಿಸಿ ಪ್ರಕರಣ ಮುಂದುವರೆಸಿದೆ.

ಈ ಬೆಳವಣಿಗೆಯಿಂದ ಇಂದು ಪಟ್ಟಣದ ಕೊಪ್ಪಳ ವೃತ್ತ ಸೇರಿದಂತೆ ಹಲವೆಡೆ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಿಸಿದರು.

Leave a Reply

Your email address will not be published. Required fields are marked *

You May Also Like

ಸರ್ಕಾರಗಳ ಸಾಧನೆ ಮನೆ-ಮನೆಗೆ ತಲುಪಿಸಿ- ಲಿಂಗರಾಜ ಪಾಟೀಲ್

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಕುರಿತು ಮನೆ-ಮನೆಗೆ ತಲುಪಿಸುವ ಕಾರ್ಯ ಬಿಜೆಪಿ ಕಾರ್ಯಕರ್ತರು ಮಾಡಬೇಕು ಎಂದು ಧಾರವಾಡ ವಿಭಾಗೀಯ ಬಿಜೆಪಿ ಸಂಘಟನಾ ಪ್ರಭಾರಿ ಲಿಂಗರಾಜ್ ಪಾಟೀಲ್ ಹೇಳಿದರು.

ಮಹಾರಾಷ್ಟ್ರಕ್ಕೆ ಖಡಕ್ ಸಂದೇಶ ರವಾನಿಸಿದ ಲಕ್ಷ್ಮಣ್ ಸವದಿ!

ಬೆಳಗಾವಿ : ಡಿಸಿಎಂ ಲಕ್ಷ್ಮಣ ಸವದಿ ಅವರು ಮಹಾರಾಷ್ಟ್ರ ಸರ್ಕಾರಕ್ಕೆ ತಿರುಗೇಟು ನೀಡಿ, ವಾಗ್ದಾಳಿ ನಡೆಸಿದ್ದಾರೆ.

ಕೇಲೂರ ಘಟನೆ: ಸಂತ್ರಸ್ಥೆಯ ಆರೋಗ್ಯ ವಿಚಾರಿಸಿದ ಜಿಲ್ಲಾಧಿಕಾರಿಗಳು

ಗದಗ: ಮುಂಡರಗಿ ತಾಲೂಕಿನ ಕೇಲೂರು ಗ್ರಾಮದಲ್ಲಿ ಅರಣ್ಯ ಇಲಾಖೆಯಿಂದ ಅರಣ್ಯ ಭೂಮಿ ಒತ್ತುವರಿ ತೆರವು ಕರ‍್ಯಾಚರಣೆ…