ಎ.ಪಿ.ಎಮ್.ಸಿ ಅಧ್ಯಕ್ಷರ ಆಯ್ಕೆ: ತಡೆಯಾಜ್ಞೆ ತೆರವು ಗೊಳಸಿ ಪ್ರಕರಣ ಮುಂದುವರೆಸಿದ ನ್ಯಾಯಾಲಯ

ಗದಗ: ಕೆಲ ದಿನಗಳ ಹಿಂದೆ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಪ್ರಕ್ರಿಯೇ ನಡೆದಿತ್ತು. ಇದರಲ್ಲಿ ಬಿಜೆಪಿಯ ರವೀಂದ್ರ ಉಪ್ಪಿನಬೆಟಗೇರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ನಂತರದ ಬೆಳವಣಿಗೆಯಲ್ಲಿ ಈ ಬಗ್ಗೆ ಚುನಾವಣೆ ಪ್ರಕ್ರಿಯೇ ಪ್ರಶ್ನಿಸಿ ಹಿಂದಿನ ಅವಧಿಯ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ್ ನ್ಯಾಯಾಲಯ ಮೆಟ್ಟಿಲೇರಿದ್ದರು. ಇದರಿಂದ ಜಿಲ್ಲಾ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು.

ಆದರೆ ಇಂದು ಗದಗ ಜಿಲ್ಲಾ ನ್ಯಾಯಾಲಯವು ಮುಂಡರಗಿ ಎ.ಪಿ.ಎಮ್.ಸಿ ಅಧ್ಯಕ್ಷರ ಆಯ್ಕೆಗೆ ತಾತ್ಕಾಲಿಕ ತಡೆಯಾಜ್ಞೆ ನಿಡುರುವದನ್ನು ತೆರವುಗೊಳಸಿ ಮದ್ಯಂತರ ಅರ್ಜಿ ರದ್ದುಪಡಸಿದೆ. ಈ ವಿಚಾರವಾಗಿ ಮುಂಡರಗಿ ತಹಶಿಲ್ದಾರ್ ಗೆ ಕೂಡಲೆ ನೋಟಿಸ್ ಜಾರಿ ಮಾಡಿ ಜುಲೈ 30 ರಂದು ನ್ಯಾಯಾಲಯಕ್ಕೆ ಹಾಜರಾಗಲು ಸೂಚಿಸಿ ಪ್ರಕರಣ ಮುಂದುವರೆಸಿದೆ.

ಈ ಬೆಳವಣಿಗೆಯಿಂದ ಇಂದು ಪಟ್ಟಣದ ಕೊಪ್ಪಳ ವೃತ್ತ ಸೇರಿದಂತೆ ಹಲವೆಡೆ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಿಸಿದರು.

Exit mobile version