ಗದಗ: ಕರ್ನಾಟಕ ಸರ್ಕಾರವು 2020-21 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭಿಮಾ(ವಿಮಾ) ಯೋಜನೆಯನ್ನು ಅನುಷ್ಟಾನಗೊಳಿಸಲು ಮಂಜೂರಾತಿ ನೀಡಿರುತ್ತದೆ. ಈ ಯೋಜನೆಯ ರೂಪರೇಷೆ ಮತ್ತು ವಿವರಗಳನ್ನು ಇಲ್ಲಿ ನೀಡಲಾಗಿದೆ.

ಪ್ರಸ್ತುತ ಸಾಲು ಹಾಗೂ ಹಂಗಾಮಿನಲ್ಲಿ ವಿವಿಧ ವಿಮಾ ಘಟಕಗಳಲ್ಲಿ ಅಧಿಸೂಚಿಸಲಾದ ಬೆಳೆಗಳಿಗೆ ಇಚ್ಛೆಯುಳ್ಳ ಬೆಳೆ ಸಾಲ ಪಡೆದ/ಪಡೆಯದ ರೈತರು ಯೋಜನೆಯಡಿ ಭಾಗವಹಿಸಬಹುದು. ಬೆಳೆ ಸಾಲ ಪಡೆಯದ ರೈತರು ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ ಪಹಣಿ/ಖಾತೆ ಪುಸ್ತಕ/ಪಾಸ್ ಬುಕ್, ಕಂದಾಯ ರಸೀದಿ ಮತ್ತು ಆಧಾರ ಸಂಖ್ಯೆಯನ್ನು ನೀಡತಕ್ಕದ್ದು.

ಬ್ಯಾಂಕಿನಲ್ಲಿ ಬೆಳೆ ಸಾಲ ಮಂಜೂರಾದ ಎಲ್ಲ ರೈತರನ್ನು ಕಡ್ಡಾಯವಾಗಿ ಈ ಯೋಜನೆಯಡಿಯಲ್ಲಿ ಒಳಪಡಿಸಲಾಗುವುದು, ತದನಂತರ ಬೆಳೆ ಸಾಲ ಪಡೆದ ರೈತರು ಈ ಯೋಜನೆಯಲ್ಲಿ ಭಾಗವಹಿಸಲು ಇಚ್ಛೆ ಪಡದೇ ಇದ್ದಲ್ಲಿ, ಈ ಕುರಿತು ಬ್ಯಾಂಕಿನ ವ್ಯವಸ್ಥಾಪಕರಿಗೆ ಬೆಳೆ ನೋಂದಣಿ ಅಂತಿಮ ದಿನಾಂಕಕ್ಕಿಂತ ಏಳು ದಿನಗಳು ಮುಂಚಿತವಾಗಿ ಲಿಖಿತವಾಗಿ ಮುಚ್ಚಳಿಕೆ ಪತ್ರವನ್ನು ನೀಡಿದ್ದಲ್ಲಿ ಅಂತಹ ರೈತರನ್ನು ಬೆಳೆವಿಮೆ ಯೋಜನೆಯಿಂದ ಕೈಬಿಡುವುದು. ಸಂಬಂಧಿಸಿದ ಬ್ಯಾಂಕ್ ಗಳು ಈ ರೀತಿ ಸ್ವೀಕರಿಸಲಾಗದ ಮುಚ್ಚಳಿಕೆ ಪತ್ರಗಳನ್ನು ಇತರೆ ದಾಖಲೆಗಳೊಂದಿಗೆ ವ್ಯವಸ್ಥಿತವಾಗಿ ನಿರ್ವಹಿಸತಕ್ಕದ್ದು.

ಒಂದು ವೇಳೆ ಒಂದು ಅಧಿಸೂಚಿತ ಘಟಕದಲ್ಲಿ ಶೇ.25ಕ್ಕಿಂತ ಹೆಚ್ಚು ವಿಸ್ತಿರ್ಣದಲ್ಲಿ ಬೆಳೆ ನಷ್ಟವಾದರೆ ಆ ಅಧಿಸೂಚಿತ ಘಟಕದಲ್ಲಿ ಬೆಳೆವಿಮೆಗೆ ಒಳಪಟ್ಟ ರೈತರಲ್ಲಿ ಬೆಳೆ ನಷ್ಟವಾದ ರೈತರಿಗೆ ಮಾತ್ರ ಮಾದರಿ ಸಮೀಕ್ಷೆಗೆ ಅನುಗುಣವಾಗಿ ಬೆಳೆವಿಮಾ ನಷ್ಟ ಪರಿಹಾರವನ್ನು ಇತ್ಯರ್ಥ ಪಡಿಸತಕ್ಕದ್ದು. ಇಂತಹ ಸ್ಥಳೀಯ ಗಂಡಾಂತರಗಳ ಕಾರಣದಿಂದ ಬೆಳೆ ನಷ್ಟ ಸಂಭವಿಸಿದರೆ ಬೆಳೆವಿಮೆ ಮಾಡಿರುವ ರೈತರು ಈ ಬಗ್ಗೆ ಸಂಬಂಧಪಟ್ಟ ಹಣಕಾಸು ಸಂಸ್ಥೆ ಅಥವಾ ಅನುಷ್ಟಾನಗೊಳಿಸುವ ವಿಮಾ ಸಂಸ್ಥೆಗಳ ಕಚೇರಿಗಳಿಗೆ ತಕ್ಷಣ ಸೂಚನೆ ನೀಡಬೇಕು. ಮತ್ತು ಯಾವುದೇ ಸಂದರ್ಭದಲ್ಲಿ ವಿಮೆ ಮಾಡಿಸಿದ ಬೆಳೆಯ ವಿವರಗಳನ್ನು ಹಾಗೂ ಹಾನಿಯ ವ್ಯಾಪ್ತಿ ಹಾಗೂ ಹಾನಿಗೆ ಕಾರಣಗಳನ್ನು 72 ಗಂಟೆಗಳೊಳಗಾಗಿ ತಿಳಿಸಬೇಕು. ನಷ್ಟದ ಬಗೆಗಿನ ಮಾಹಿತಿಯನ್ನು ಸ್ವೀಕರಿಸಿದ ಮೇಲೆ ವಿಮಾ ಸಂಸ್ಥೆಗಳು ಬೆಳೆ ನಷ್ಟವನ್ನು ನಿರ್ಧರಿಸುವುದಕ್ಕೆ ನಷ್ಟ ನಿರ್ಧಾರಕರನ್ನು ಸಂಬಂಧಪಟ್ಟ ಪ್ರದೇಶಕ್ಕೆ 48 ಗಂಟೆಗಳೊಳಗಾಗಿ ನಿಯೋಜಿಸುವುದು. ವಿಮೆ ಸಂಸ್ಥೆಯಿಂದ ನೇಮಿಸಲ್ಪಟ್ಟ ನಷ್ಟ ನಿರ್ಧಾರಕರು ಮತ್ತು ಸ್ಥಳೀಯ ತಾಲೂಕು/ಹೋಬಳಿ ಮಟ್ಟದ ಕೃಷಿ ಮತ್ತು ತೋಟಗಾರಿಕಾ ಇಲಾಖಾ ಅಧಿಕಾರಿಗಳು ಜಂಟಿಯಾಗಿ, ಹಾನಿಗೊಳಗಾದ ರೈತರ ಸಮ್ಮುಖದಲ್ಲಿ ಬೆಳೆ ನಷ್ಟ ನಿರ್ಧರಿಸುವುದು,

ಪ್ರಸಕ್ತ ಸಾಲು ಮತ್ತು ಹಂಗಾಮಿನಲ್ಲಿ ಮಳೆಯ ಅಭಾವ ಅಥವಾ ಇತರೆ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದ ಅಧಿಸೂಚಿತ ಘಟಕದಲ್ಲಿ ಶೇ.75ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ವಿಫಲಗೊಂಡಲ್ಲಿ ವಿಮಾ ಮೊತ್ತದ ಗರೀಷ್ಟ ಶೇ.25ರಷ್ಟು ಪರಿಹಾರವನ್ನು ವಿಮಾ ಸಂಸ್ಥೆಯೂ ವಿಮೆ ಮಾಡಿಸಿದ ರೈತರಿಗೆ ಇತ್ಯರ್ಥ ಪಡಿಸಿ ಮುಂದಿನ ಅವಧಿಗೆ ವಿಮೆಯನ್ನು ರದ್ದು ಪಡಿಸತಕ್ಕದ್ದು ಈ ಸಂಬಂಧ ಬಿತ್ತನೆ ಕ್ಷೇತ್ರದ ವರದಿಯನ್ನು ಘೋಷಿಸಲು ಜಿಲ್ಲೆಯಗಳ ಜಿಲ್ಲಾಧಿಕಾರಿಯವರನ್ನು ಹಾಗೂ ಮಳೆ ಮತ್ತು ಇತರೇ ಕೃಷಿ ಹವಾಮಾನದ ವರದಿಯನ್ನು ನೀಡಲು ನಿರ್ದೇಶಕರು, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ, ಬೆಂಗಳೂರು ಇವರನ್ನು ನೂಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ. ನೂಡಲ್ ಅಧಿಕಾರಿಗಳಿಂದ ವರದಿ ಬಂದ ನಂತರ ಒಂದು ತಿಂಗಳೊಳಗೆ ವಿಮಾ ಸಂಸ್ಥೆಯೂ ವಿಮೆ ಮಾಡಿಸಿದ ರೈತರಿಗೆ ಮೇಲಿನಂತೆ ಬೆಳೆವಿಮೆ ನಷ್ಟ ಪರಿಹಾರವನ್ನು ಇತ್ಯರ್ಥ ಪಡಿಸತಕ್ಕದ್ದು.

ಸಾಮಾನ್ಯ ಬೆಳೆ ಅಂದಾಜು ಸಮೀಕ್ಷೆಯಡಿ ರಾಜ್ಯ ಸರ್ಕಾರವು ನಡೆಸುವ ಬೆಳೆ ಕಟಾವು ಪ್ರಯೋಗಗಳ ಆಧಾರದ ಮೇಲೆ ಕಂಡು ಹಿಡಿಯಲಾದ ಇಳುವರಿ ಮಾಹಿತಿಯನ್ನು ಮಾತ್ರ ಪರಿಗಣಿಸಿ ಬೆಳೆವಿಮಾ ನಷ್ಟ ಪರಿಹಾರವನ್ನು ಲೆಕ್ಕ ಹಾಕಿ ಇತ್ಯರ್ಥ ಪಡಿಸತಕ್ಕದ್ದು. ವಿಮಾ ಪಾವತಿಯನ್ನು ಆಯಾ ಬೆಳೆಯ ಅಧಿಸೂಚಿತ ವಿಮಾ ಘಟಕದ ಪ್ರಾರಂಭಿಕ ಇಳುವರಿ (ಕಳೆದ ಏಳು ವರ್ಷಗಳು ಅಂದರೆ 2013 ರಿಂದ 2019 ವರೆಗಿನ ಇಳುವರಿಯನ್ನು ಪರಿಗಣಿಸುವುದು ಹಾಗೂ ಇದರಲ್ಲಿ ಉತ್ತಮ ಐದು ವರ್ಷಗಳ ಸರಾಸರಿ ಇಳುವರಿಯನ್ನು ಪರಿಗಣಿಸತಕ್ಕದ್ದು.)

ಬೆಳೆವಿಮೆ ಯೋಜನೆಯಡಿ ನೋಂದಾಯಿಸಲು ಕೊನೆಯ ದಿನಾಂಕ ಹೆಸರು (ಮಳೆ ಆಶ್ರಿತ) ಬೆಳೆ,  ದಿನಾಂಕ: 15-07-2020, ಇನ್ನುಳಿದ ಎಲ್ಲ ಬೆಳೆಗಳಿಗೆ ದಿನಾಂಕ : 31-07-2020, ಸೂರ್ಯಕಾಂತಿ (ನೀರಾವರಿ), ಸೂರ್ಯಕಾಂತಿ (ಮಳೆ ಆಶ್ರಿತ) ಬೆಳೆಗಳಿಗೆ, ದಿನಾಂಕ 14-08-2020 ಕೊನೆಯ ದಿನಾಂಕವಾಗಿದೆ.

ಸರಾಸರಿ ಇಳುವರಿ

ಪ್ರಸಕ್ತ ಸಾಲು ಮತ್ತು ಹಂಗಾಮಿನಲ್ಲಿ ಅಧಿಸೂಚಿತ ಘಟಕದಲ್ಲಿ ಸಂಭವಿಸುವ ಹವಾಮಾನ ವೈಪರಿತ್ಯಗಳಾದ ಹೆಚ್ಚಿನ ಮಳೆ, ನೆರೆ/ಪ್ರವಾಹಗಳಿಂದ ಬೆಳೆ ಮುಳುಗಡೆ, ಧೀರ್ಘ ಕಾಲದ ತೇವಾಂಶ ಕೊರತೆ ತೀವ್ರ ಬರಗಾಲ ಮುಂತಾದವುಗಳಿಂದ ಯಾವುದೆ ಅಧಿಸೂಚಿತ ವಿಮಾ ಘಟಕದಲ್ಲಿ ಬಿತ್ತನೆಯಾದ ನಂತರ ಕಟಾವಿಗೆ ಮೊದಲು ನಿರೀಕ್ಷಿತ ಇಳುವರಿಯ ಪ್ರಾರಂಭಿಕ ಇಳುವರಿಯ ಶೇ.50ಕ್ಕಿಂತ ಕಡಿಮೆ ಇದ್ದರೆ, ವಿಮೆ ಮಾಡಿಸಿದ ರೈತರಿಗೆ ಅಂದಾಜು ಮಾಡಲಾದ ಬೆಳೆವಿಮಾ ನಷ್ಟ ಪರಿಹಾರದಲ್ಲಿ ಶೇ.25ರಷ್ಟು ಹಣವನ್ನು ಮುಂಚಿತವಾಗಿ ವಿಮಾ ಸಂಸ್ಥೆಯೂ ನೀಡತಕ್ಕದ್ದು. ಬೆಳೆ ಕಟಾವು ಪ್ರಯೋಗಗಳ ಆಧಾರದ ಮೇಲೆ ಬೆಳೆ ಇಳುವರಿ ಮಾಹಿತಿ ಬಂದ ನಂತರ ಅಂತಿಮ ಬೆಳೆವಿಮಾ ನಷ್ಟ ಪರಿಹಾರದಲ್ಲಿ ಈ ಹಣವನ್ನು ಹೊಂದಾಣಿಕೆ ಮಾಡತಕ್ಕದ್ದು. ಈ ಬಗ್ಗೆ ವರದಿಯನ್ನು ನೀಡಲು ಜಿಲ್ಲಾಧಿಕಾರಿಗಳನ್ನು ನೂಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ.

ವಿಮಾ ಕಂತುಗಳ ವಿವರ

ನಿರ್ಧರಿತ ಬೆಳೆ              ಇಂಡೆಮ್ನಿಟಿ ಮಟ್ಟ                     ವಿಮಾ ಮೊತ್ತ               ವಿಮಾ ಕಂತು

ಭತ್ತ (ನೀರಾವರಿ)                      90%                        86,000 ರೂ.               2.0%

ಭತ್ತ (ಮಳೆ ಆಶ್ರಿಯ)                  80%                        55,000ರೂ.                2.0%

ಮುಸುಕಿನ ಜೋಳ (ನೀರಾವರಿ)     90%                        59,000ರೂ.                2.0%

ಮುಸುಕಿನ ಜೋಳ (ಮಳೆ ಆಶ್ರಿತ)   80%                        50,000 ರೂ.               2.0%

ಜೋಳ (ನೀರಾವರಿ)                  90%                        40,000ರೂ                2.0%

ಜೋಳ (ಮಳೆ ಆಶ್ರಿತ)                80%                        34,000ರೂ.                2.0%

ಸಜ್ಜೆ (ನೀರಾವರಿ)                     90%                        38,000ರೂ.                2.0%

ಸಜ್ಜೆ (ಮಳೆ ಆಶ್ರಿತ)                      80%                        29,000ರೂ.                2.0%

ನವಣೆ (ಮಳೆ ಆಶ್ರಿತ)                 80%                        27,000 ರೂ.               2.0%

ತೊಗರಿ (ಮಳೆ ಆಶ್ರಿತ)                80%                        40,000 ರೂ.              2.0%

ಹೆಸರು (ಮಳೆ ಆಶ್ರಿತ)                 80%                        29,000 ರೂ.               2.0%

ಹುರುಳಿ (ಮಳೆ ಆಶ್ರಿತ)                80%                        18,000 ರೂ.               2.0%

ಸೂರ್ಯಕಾಂತಿ (ನೀರಾವರಿ)           90%                        42,000 ರೂ.               2.0%

ಸೂರ್ಯಕಾಂತಿ (ಮಳೆ ಆಶ್ರಿತ)        80%                        35,000 ರೂ.               2.0%

ಎಳ್ಳು (ಮಳೆ ಆಶ್ರಿತ)                  80%                        25,000 ರೂ.               2.0%

ನೆಲಗಡಲೆ (ಶೇಂಗಾ), (ನೀರಾವರಿ)   90%                        57,000 ರೂ.               2.0%

ನೆಲಗಡಲೆ(ಶೇಂಗಾ), (ಮಳೆಯಾಶ್ರಿತ) 80%                        46,000 ರೂ.               2.0%

ಹತ್ತಿ (ನೀರಾವರಿ)                     90%                        67,000 ರೂ.               5.0%

ಹತ್ತಿ (ಮಳೆ ಆಶ್ರಿತ)                           80%                        43,000 ರೂ.               5.0%   

          ತಾಲೂಕುವಾರು ಮುಖ್ಯ ಬೆಳೆಗಳನ್ನು ಗ್ರಾಮ ಪಂಚಾಯತಿ ಮಟ್ಟದಲ್ಲಿ ಅನುಸೂಚಿಸಬೇಕಾದರೆ ಆ ಬೆಳೆಯ ವಿಸ್ತಿರ್ಣ ಕನಿಷ್ಟ 50 ಹೆಕ್ಟರ್ ಇರಬೇಕು. ಹೋಬಳಿ ಮಟ್ಟದಲ್ಲಿ ಬೆಳೆಗಳನ್ನು ಅಧಿಸೂಚಿಸಲು ಆ ಬೆಳೆಯ ವಿಸ್ತಿರ್ಣ ಕನಿಷ್ಟ 125 ಹೆಕ್ಟೆರ್ ಇರಬೇಕು.

ಗ್ರಾಮ ಪಂಚಾಯತಿ ಮಟ್ಟಕ್ಕೆ ನಿರ್ದೇಶಿತ ಬೆಳೆಗಳು

  1. ಗದಗ ತಾಲೂಕು

ಬೆಟಗೇರಿ ಹೋಬಳಿ: ಅಡವಿ ಸೋಮಾಪೂರ, ಬೆಳಹೊಡ, ಗದಗ-ಬೆಟಗೇರಿ ನಗರಸಭೆ, ಚಿಕ್ಕಹಂದಿಗೋಳ, ಹರ್ಲಾಪೂರ, ಹಾತಲಗೇರಿ, ಹೊಂಬಳ, ಹುಯಿಲಗೋಳ, ಕದಡಿ, ಕಣಗಿನಹಾಳ, ಕೋಟುಮಚಗಿ, ಲಕ್ಕುಂಡಿ, ಲಿಂಗದಾಳ, ನೀರಲಿಗಿ, ತಿಮ್ಮಾಪೂರ, ಬಳಗಾನೂರು ಗ್ರಾಮ ಪಂಚಾಯತಿಗಳಿಗೆ ಹೆಸರು(ಮಳೆ ಆಶ್ರಿತ), ನೆಲಗಡಲೆ(ಮಳೆ ಆಶ್ರಿತ),

ಗದಗ ಹೋಬಳಿ: ಅಂತೂರು, ಅಸುಂಡಿ, ಬೆಳದಡಿ, ಬಿಂಕದಕಟ್ಟಿ, ಚಿಂಚಲಿ, ಹರ್ತಿ, ಕಳಸಾಪೂರ, ಕುರ್ತಕೋಟಿ, ನಾಗಾವಿ, ಸೋರಟೂರು, ಯಲಿಶಿರೂರು, ಮುಳಗುಂದ, ಹುಲಕೋಟಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹೆಸರು(ಮಳೆ ಆಶ್ರಿತ), ನೆಲಗಡಲೆ(ಮಳೆ ಆಶ್ರಿತ) ನಿರ್ದೇಶಿತ ಬೆಳೆಗಳಾಗಿವೆ.

2. ಮುಂಡರಗಿ ತಾಲೂಕು

ಡಂಬಳ ಹೋಬಳಿ: ಡಂಬಳ, ಕದಾಂಪೂರ, ಡೋಣಿ, ಹಾರೋಗೇರಿ, ಹಿರೇವಡ್ಡಟ್ಟಿ, ಆಲೂರು, ಜಂತ್ಲಿಶಿರೂರು, ಮುರಡಿ, ಮೇವುಂಡಿ, ಶಿವಾಜಿ ನಗರ, ಹಳ್ಳಿಕೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸೂರ್ಯಕಾಂತಿ (ಮಳೆ ಆಶ್ರಿತ), ಮುಸುಕಿನ ಜೋಳ (ಮಳೆ ಆಶ್ರಿತ) ನಿರ್ದೇಶಿತ ಬೆಳೆಗಳಾಗಿವೆ.

ಮುಂಡರಗಿ ಹೋಬಳಿ: ಬಾಗೇವಾಡಿ, ಬಿದರಳ್ಳಿ, ಹೆಸರೂರು, ಕಲಕೇರಿ, ಕೊರ್ಲಹಳ್ಳಿ, ಮುಂಡರಗಿ, ಸಿಂಗಟಾಲುರು, ಹಮ್ಮಿಗಿ, ಬಿಡನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸೂರ್ಯಕಾಂತಿ (ಮಳೆ ಆಶ್ರಿತ), ಮುಸುಕಿನ ಜೋಳ (ಮಳೆ ಆಶ್ರಿತ) ನಿರ್ದೇಶಿತ ಬೆಳೆಗಳಾಗಿವೆ.

3. ನರಗುಂದ ತಾಲೂಕು

ನರಗುಂದ ಹೋಬಳಿ: ಬನಹಟ್ಟಿ, ಚಿಕ್ಕನರಗುಂದ, ಹಿರೇಕೊಪ್ಪ, ಹುಣಸಿಕಟ್ಟಿ, ಕಣಕಿಕೊಪ್ಪ, ನರಗುಂದ, ಬೆನಕನಕೊಪ್ಪ ಗ್ರಾಮ ಪಂಚಾಯತಿಗಳಿಗೆ ಮುಸುಕಿನ ಜೋಳ(ನೀರಾವರಿ), ಹೆಸರು (ಮಳೆ ಆಶ್ರಿತ) ನಿರ್ದೇಶಿತ ಬೆಳೆಗಳಾಗಿವೆ.

ಕೊಣ್ಣೂರು ಹೋಬಳಿ: ಬೈರನಹಟ್ಟಿ, ರಡ್ಡೇರನಾಗನೂರು, ಶಿರೋಳ, ಸುರಕೋಡ, ವಾಸನ, ಹದ್ಲಿ, ಕೊಣ್ಣೂರು ಗ್ರಾಮ ಪಂಚಾಯತಿಗಳಿಗೆ ಮುಸುಕಿನ ಜೋಳ (ನೀರಾವರಿ), ಹೆಸರು (ಮಳೆ ಆಶ್ರಿತ) ನಿರ್ದೇಶಿತ ಬೆಳೆಗಳಾಗಿವೆ.

4. ರೋಣ ತಾಲೂಕು

ಹೊಳೆಯಾಲೂರು ಹೋಬಳಿ : ಅಸೂಟಿ, ಬೆಳವಣಿಕಿ, ಹೊಳೆಯಾಲೂರು, ಹೊಳೆಮಣ್ಣೂರು, ಹುಲ್ಲೂರು, ಹುನಗುಂಡಿ, ಮಲ್ಲಾಪೂರ, ಮೆಣಸಗಿ, ಯಾವಗಲ್, ಅಮರಗೋಳ, ಕೌಜಗೇರಿ, ಸವಡಿ ಗ್ರಾಮ ಪಂಚಾಯತಿಗಳಿಗೆ ಹೆಸರು (ಮಳೆ ಆಶ್ರಿತ), ಮುಸುಕಿನ ಜೋಳ (ಮಳೆ ಆಶ್ರಿತ) ನಿರ್ದೇಶಿತ ಬೆಳೆಗಳಾಗಿವೆ.

ನರೇಗಲ್ ಹೋಬಳಿ : ಅಬ್ಬಿಗೇರಿ, ಕುಂಟೋಜಿ, ಕುರುಡಗಿ, ನಿಡಗುಂದಿ, ರಾಂಪೂರ, ಡಿ.ಎಸ್.ಹಡಗಲಿ, ಗೋಗೇರಿ, ಜಕ್ಕಲಿ, ಹಾಳಕೇರಿ, ರಾಜೂರು, ನರೇಗಲ್, ಗಜೇಂದ್ರಗಡ, ಮಾರನಬಸರಿ ಗ್ರಾಮ ಪಂಚಾಯತಿಗಳಿಗೆ ಹೆಸರು (ಮಳೆಯಾಶ್ರಿತ), ಮುಸುಕಿನ ಜೋಳ (ಮಳೆ ಆಶ್ರಿತ) ನಿರ್ದೇಶಿತ ಬೆಳೆಗಳಾಗಿವೆ.

ರೋಣ ಹೋಬಳಿ: ಹಿರೇಹಾಳ, ಚಿಕ್ಕಮಣ್ಣೂರು, ಇಟಗಿ, ಕೊತಬಾಳ, ಲಕ್ಕಲಕಟ್ಟಿ, ಕುರಹಟ್ಟಿ, ಮಾಡಲಗೇರಿ, ಮೂಶಿಗೇರಿ, ರೋಣ, ಶಾಂತಗೇರಿ, ಸೂಡಿ, ಹೊಸಳ್ಳಿ, ಗುಳಗುಳಿ ಗ್ರಾಮ ಪಂಚಾಯತಿಗಳಿಗೆ ಹೆಸರು (ಮಳೆ ಆಶ್ರಿತ), ಮುಸಕಿನಜೋಳ (ಮಳೆ ಆಶ್ರಿತ) ನಿರ್ದೇಶಿತ ಬೆಳೆಗಳಾಗಿವೆ.

5. ಶಿರಹಟ್ಟಿ ತಾಲೂಕು

ಲಕ್ಷ್ಮೇಶ್ವರ ಹೋಬಳಿ : ಲಕ್ಷ್ಮೇಶ್ವರ, ಆದರಹಳ್ಳಿ, ಅಡರಕಟ್ಟಿ, ಬಾಲೇಹೊಸೂರು, ಬಟ್ಟೂರು, ದೊಡ್ಡೂರು, ಪು.ಬಡ್ನಿ, ರಾಮಗೇರಿ, ಸೂರಣಗಿ, ಯಳವತ್ತಿ, ಗೊಜನೂರು, ಶಿಗ್ಲಿ, ಮಾಗಡಿ, ಗೋವನಾಳ, ಮಾಡಳ್ಳಿ, ಹುಲ್ಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹೆಸರು (ಮಳೆ ಆಶ್ರಿತ), ನೆಲಗಡಲೆ(ಶೇಂಗಾ) (ಮಳೆ ಆಶ್ರಿತ) ನಿರ್ದೇಶಿತ ಬೆಳೆಗಳಾಗಿವೆ.

ಶಿರಹಟ್ಟಿ ಹೋಬಳಿ: ಬನ್ನಿಕೊಪ್ಪ, ಬೆಳ್ಳಟ್ಟಿ, ಮಜ್ಜೂರು, ಹೆಬ್ಬಾಳ, ಕಡಕೋಳ, ಕೋಗನುರು, ಕೊಂಚಿಗೇರಿ, ಮೇಚೇನಹಳ್ಳಿ, ವಡವಿ, ಛಬ್ಬಿ, ತಾರಿಕೊಪ್ಪ, ಇಟಗಿ, ರಣತೂರು, ಶಿರಹಟ್ಟಿ ಗ್ರಾಮ ಪಂಚಾಯತಿಗಳಿಗೆ ಹೆಸರು (ಮಳೆ ಆಶ್ರಿತ), ನೆಲಗಡಲೆ (ಮಳೆ ಆಶ್ರಿತ) ನಿರ್ದೇಶಿತ ಬೆಳೆಗಳಾಗಿವೆ.

ರೈತ ಬಾಂಧವರು ತಮ್ಮ ಅರ್ಜಿಯಲ್ಲಿ ಯಾವ ಬೆಳೆ, ಮಳೆ ಆಶ್ರಿತವೋ ಅಥವಾ ನೀರಾವರಿಯೋ? ಎಂಬುದನ್ನು ನಿರ್ದಿಷ್ಟವಾಗಿ ಪರಿಶೀಲಿಸಿಕೊಂಡು ನೋಂದಾಯಿಸಿಕೊಳ್ಳಲು ಕೋರಿದೆ.

ಹೋಬಳಿ ಮಟ್ಟಕ್ಕೆ ನಿರ್ದೇಶಿತ ಬೆಳೆಗಳು

  1. ಗದಗ ತಾಲೂಕು

ಬೆಟಗೇರಿ ಹೋಬಳಿ : ಮುಸುಕಿನ ಜೋಳ (ನೀರಾವರಿ), ಮುಸುಕಿನ ಜೋಳ (ಮಳೆ ಆಶ್ರಿತ), ಜೋಳ (ಮಳೆ ಆಶ್ರಿತ), ಸೂರ್ಯಕಾಂತಿ (ಮಳೆ ಆಶ್ರಿತ), ತೋಗರಿ(ಮಳೆ ಆಶ್ರಿತ), ಹತ್ತಿ (ನೀರಾವರಿ), ಹತ್ತಿ (ಮಳೆ ಆಶ್ರಿತ) ನಿರ್ದೇಶಿತ ಬೆಳೆಗಳಾಗಿವೆ.

ಗದಗ ಹೋಬಳಿ : ಮುಸುಕಿನ ಜೋಳ (ನೀರಾವರಿ), ಮುಸುಕಿನ ಜೋಳ (ಮಳೆ ಆಶ್ರಿತ), ಜೋಳ (ಮಳೆ ಆಶ್ರಿತ), ಸೂರ್ಯಕಾಂತಿ (ಮಳೆ ಆಶ್ರಿತ), ತೋಗರಿ (ಮಳೆ ಆಶ್ರಿತ), ಹತ್ತಿ (ಮಳೆ ಆಶ್ರಿತ), ಹತ್ತಿ (ನೀರಾವರಿ) ನಿರ್ದೇಶಿತ ಬೆಳೆಗಳಾಗಿವೆ.

  • ಮುಂಡರಗಿ ತಾಲೂಕು

ಡಂಬಳ ಹೋಬಳಿ : ಜಾಓಳ (ನೀರಾವರಿ), ಜೋಳ (ಮಳೆ ಆಶ್ರಿತ), ಮುಸುಕಿನ ಜೋಳ (ನೀರಾವರಿ), ತೋಗರಿ (ಮಳೆ ಆಶ್ರಿತ), ಸೂರ್ಯಕಾಂತಿ (ನೀರಾವರಿ), ಹೆಸರು (ಮಳೆ ಆಶ್ರಿತ), ಹುರುಳಿ (ಮಳೆ ಆಶ್ರಿತ), ನೆಲಗಡಲೆ (ಶೇಂಗಾ) (ಮಳೆ ಆಶ್ರಿತ), ನೆಲಗಡಲೆ (ಶೇಂಗಾ) (ನೀರಾವರಿ), ಸಜ್ಜೆ (ನೀರಾವರಿ), ಎಳ್ಳು (ಮಳೆ ಆಶ್ರಿತ), ಹತ್ತಿ(ನೀರಾವರಿ), ಹತ್ತಿ (ಮಳೆ ಆಶ್ರಿತ) ನಿರ್ದೇಶಿತ ಬೆಳೆಗಳಾಗಿವೆ.

ಮುಂಡರಗಿ ಹೋಬಳಿ: ಭತ್ತ (ನೀರಾವರಿ), ಜೋಳ (ನೀರಾವರಿ), ಜೋಳ (ಮಳೆ ಆಶ್ರಿತ), ಮುಸುಕಿನ ಜೋಳ(ನೀರಾವರಿ), ಸಜ್ಜೆ (ಮಳೆ ಆಶ್ರಿತ), ಸಜ್ಜೆ (ನೀರಾವರಿ), ಸೂರ್ಯಕಾಂತಿ (ನೀರಾವರಿ), ತೊಗರಿ (ಮಳೆ ಆಶ್ರಿತ), ಹೆಸರು (ಮಳೆ ಆಶ್ರಿತ), ಎಳ್ಳು (ಮಳೆ ಆಶ್ರಿತ), ನೆಲಗಡಲೆ (ನೀರಾವರಿ), ನೆಲಗಡಲೆ (ಮಳೆ ಆಶ್ರಿತ) ಹತ್ತಿ (ನೀರಾವರಿ), ಹತ್ತಿ (ಮಳೆ ಆಶ್ರಿತ) ನಿರ್ದೇಶಿತ ಬೆಳೆಗಳಾಗಿವೆ.

  • ನರಗುಂದ ತಾಲೂಕು

ಕೊಣ್ಣೂರು ಹೋಬಳಿ : ಸೂರ್ಯಕಾಂತಿ (ನೀರಾವರಿ), ಹತ್ತಿ (ನೀರಾವರಿ)

ನರಗುಂದ ಹೋಬಳಿ: ಸೂರ್ಯಕಾಂತಿ (ನೀರಾವರಿ), ಹತ್ತಿ (ನೀರಾವರಿ)

  • ರೋಣ ತಾಲೂಕು

ಹೊಳೆಯಾಲೂರು: ಮುಸಕಿನಜೋಳ(ನೀರಾವರಿ), ಜೋಳ (ನೀರಾವರಿ), ಜೋಳ (ಮಳೆ ಆಶ್ರಿತ), ಸೂರ್ಯಕಾಂತಿ (ನೀರಾವರಿ), ಸೂರ್ಯಕಾಂತಿ (ಮಳೆ ಆಶ್ರಿತ), ನೆಲಗಡಲೆ(ನೀರಾವರಿ), ನೆಲಗಡಲೆ (ಮಳೆ ಆಶ್ರಿತ), ಹತ್ತಿ (ನೀರಾವರಿ), ಹತ್ತಿ (ಮಳೆ ಆಶ್ರಿತ) ನಿರ್ದೇಶಿತ ಬೆಳೆಗಳಾಗಿವೆ.

ನರೇಗಲ್ ಹೋಬಳಿ: ಮುಸಕಿನಜೋಳ (ನೀರಾವರಿ), ಜೋಳ (ನೀರಾವರಿ), ಜೋಳ (ಮಳೆ ಆಶ್ರಿತ), ಸೂರ್ಯಕಾಂತಿ (ನೀರಾವರಿ), ಸೂರ್ಯಕಾಂತಿ (ಮಳೆ ಆಶ್ರಿತ), ಸಜ್ಜೆ (ಮಳೆ ಆಶ್ರಿತ), ತೊಗರಿ (ಮಳೆ ಆಶ್ರಿತ), ಹುರಳಿ (ಮಳೆ ಆಶ್ರಿತ), ಎಳ್ಳು (ಮಳೆ ಆಶ್ರಿತ), ನೆಲಗಡಲೆ (ಮಳೆ ಆಶ್ರಿತ), ನೆಲಗಡಲೆ (ನೀರಾವರಿ), ಹತ್ತಿ (ನೀರಾವರಿ), ಹತ್ತಿ (ಮಳೆಯಾಶ್ರಿತ) ನಿರ್ದೇಶಿತ ಬೆಳೆಗಳಾಗಿವೆ.

ರೋಣ ಹೊಬಳಿ : ಮುಸಕಿನಜೋಳ (ನೀರಾವರಿ), ಜೋಳ (ನೀರಾವರಿ), ಜೋಳ (ಮಳೆ ಆಶ್ರಿತ), ಸೂರ್ಯಕಾಂತಿ (ನೀರಾವರಿ), ಸೂರ್ಯಕಾಂತಿ (ಮಳೆ ಆಶ್ರಿತ), ಸಜ್ಜೆ (ಮಳೆ ಆಶ್ರಿತ), ನೆಲಗಡಲೆ (ಮಳೆ ಆಶ್ರಿತ), ನೆಲಗಡಲೆ (ನೀರಾವರಿ), ಹತ್ತಿ (ನೀರಾವರಿ), ಹತ್ತಿ (ಮಳೆಯಾಶ್ರಿತ) ನಿರ್ದೇಶಿತ ಬೆಳೆಗಳಾಗಿವೆ.

  • ಗಜೇಂದ್ರಗಡ ತಾಲೂಕು

ನರೇಗಲ್ ಹೋಬಳಿ : ಮುಸಕಿನಜೋಳ (ನೀರಾವರಿ), ಜೋಳ (ನೀರಾವರಿ), ಜೋಳ (ಮಳೆ ಆಶ್ರಿತ), ಸೂರ್ಯಕಾಂತಿ (ನೀರಾವರಿ), ಸೂರ್ಯಕಾಂತಿ (ಮಳೆ ಆಶ್ರಿತ), ಸಜ್ಜೆ (ಮಳೆ ಆಶ್ರಿತ), ನೆಲಗಡಲೆ (ಮಳೆ ಆಶ್ರಿತ), ನೆಲಗಡಲೆ (ನೀರಾವರಿ), ಹತ್ತಿ (ನೀರಾವರಿ), ಹತ್ತಿ (ಮಳೆಯಾಶ್ರಿತ), ತೊಗರಿ (ಮಳೆಯಾಶ್ರಿತ), ಹುರಳಿ (ಮಳೆ ಆಶ್ರಿತ) ಎಳ್ಳು (ಮಳೆ ಆಶ್ರಿತ) ನಿರ್ದೇಶಿತ ಬೆಳೆಗಳಾಗಿವೆ.

ಗಜೇಂದ್ರಗಡ : ಮುಸಕಿನಜೋಳ (ನೀರಾವರಿ), ಜೋಳ (ನೀರಾವರಿ), ಜೋಳ (ಮಳೆ ಆಶ್ರಿತ), ಸೂರ್ಯಕಾಂತಿ (ನೀರಾವರಿ), ಸೂರ್ಯಕಾಂತಿ (ಮಳೆ ಆಶ್ರಿತ), ಸಜ್ಜೆ (ಮಳೆ ಆಶ್ರಿತ), ನೆಲಗಡಲೆ (ಮಳೆ ಆಶ್ರಿತ), ನೆಲಗಡಲೆ (ನೀರಾವರಿ), ಹತ್ತಿ (ನೀರಾವರಿ), ಹತ್ತಿ (ಮಳೆಯಾಶ್ರಿತ), ತೊಗರಿ (ಮಳೆಯಾಶ್ರಿತ) ನಿರ್ದೇಶಿತ ಬೆಳೆಗಳಾಗಿವೆ.

  • ಶಿರಹಟ್ಟಿ ತಾಲೂಕು

ಶಿರಹಟ್ಟಿ ಹೋಬಳಿ : ಭತ್ತ (ನೀರಾವರಿ), ಭತ್ತ (ಮಳೆ ಆಶ್ರಿತ) ಜೋಳ (ನೀರಾವರಿ), ಜೋಳ (ಮಳೆ ಆಶ್ರಿತ), ಮುಸುಕಿನ ಜೋಳ (ನೀರಾವರಿ), ಮುಸುಕಿನ ಜೋಳ (ಮಳೆ ಆಶ್ರಿತ), ಸೂರ್ಯಕಾಂತಿ (ನೀರಾವರಿ), ಸೂರ್ಯಕಾಂತಿ (ಮಳೆ ಆಶ್ರಿತ), ತೊಗರಿ (ಮಳೆ ಆಶ್ರಿತ), ಎಳ್ಳು (ಮಳೆ ಆಶ್ರಿತ), ಹತ್ತಿ (ಮಳೆ ಆಶ್ರಿತ), ನವಣಿ (ಮಳೆ ಆಶ್ರಿತ) ನಿರ್ದೇಶಿತ ಬೆಳೆಗಳಾಗಿವೆ.

ಲಕ್ಷ್ಮೇಶ್ವರ ಹೋಬಳಿ : ಜೋಳ (ನೀರಾವರಿ), ಜೋಳ (ಮಳೆ ಆಶ್ರಿತ), ಮುಸುಕಿನ ಜೋಳ (ನೀರಾವರಿ), ಮುಸುಕಿನ ಜೋಳ (ಮಳೆ ಆಶ್ರಿತ), ಸೂರ್ಯಕಾಂತಿ (ಮಳೆ ಆಶ್ರಿತ), ತೊಗರಿ (ಮಳೆ ಆಶ್ರಿತ), ಎಳ್ಳು (ಮಳೆ ಆಶ್ರಿತ), ಹತ್ತಿ (ಮಳೆ ಆಶ್ರಿತ), ಹತ್ತಿ (ನೀರಾವರಿ), ನೆಲಗಡಲೆ (ನೀರಾವರಿ) ನಿರ್ದೇಶಿತ ಬೆಳೆಗಳಾಗಿವೆ.

Leave a Reply

Your email address will not be published. Required fields are marked *

You May Also Like

ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣ ಉದ್ಯಮಗಳ ನಿಯಮಬದ್ಧಗೊಳಿಸುವಿಕೆ ಯೋಜನೆ

ಗದಗ:  ಆತ್ಮನಿರ್ಭರ ಭಾರತ ಅಭಿಯಾನದ ಅಂಗವಾಗಿ ಭಾರತ ಸರ್ಕಾರವು ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣ ಉದ್ಯಮಗಳ…

ಮಕ್ಕಳಿಗೆ ಹರಡುವ ಸಾಂಕ್ರಾಮಿಕ ರೋಗ ತಡೆಗೆ ಆಯುರ್ವೇದ ಔಷಧ ಬಳಸಿ

ಮುಳಗುಂದ : ಮಕ್ಕಳ ಮತ್ತು ಯುವಕರಲ್ಲಿ ಕಂಡುಬರುವ ಸಾಂಕ್ರಾಮಿಕ ರೋಗ ತಡೆಗೆ ದೇಹದಲ್ಲಿ ರೋಗನಿರೋಧಕ ಶಕ್ತಿ…

ತೋಂಟದಾರ್ಯ ಇಂಜನೀಯರಿಂಗ್ ಕಾಲೇಜಿಗೆ ಎನ್.ಬಿ.ಎ ಮಾನ್ಯತೆ

ತೋಂಟದಾರ್ಯ ಇಂಜನೀಯರಿಂಗ್ ಕಾಲೇಜಿಗೆ ಎನ್.ಬಿ.ಎ ಮಾನ್ಯತೆ ದೊರೆತಿದೆ. ಈ ಮೂಲಕ ಗದಗ ಜಿಲ್ಲೆಯಲ್ಲಿ ಎನ್.ಬಿ.ಎ ಮಾನ್ಯತೆ ಪಡೆದ ಮೊದಲ ಕಾಲೆಜು ಎನ್ನುವ ಹೆಗ್ಗಳಿಗೆ ತೋಂಟದಾರ್ಯ ಇಂಜನೀಯರಿಂಗ್ ಕಾಲೇಜ್ ಪಾತ್ರವಾಗಿದೆ.

ಗದಗ ಜಿಲ್ಲೆಯಲ್ಲಿಂದು 44 ಕೊರೊನಾ ಪಾಸಿಟಿವ್!

ಗದಗ: ಜಿಲ್ಲೆಯಲ್ಲಿಂದು 44 ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು ಈ ಮೂಲಕ ಸೋಂಕಿತರ ಸಂಖ್ಯೆ 414 ಕ್ಕೆ…