ಗದಗ: ಕೆಲ ದಿನಗಳ ಹಿಂದೆ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಪ್ರಕ್ರಿಯೇ ನಡೆದಿತ್ತು. ಇದರಲ್ಲಿ ಬಿಜೆಪಿಯ ರವೀಂದ್ರ ಉಪ್ಪಿನಬೆಟಗೇರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ನಂತರದ ಬೆಳವಣಿಗೆಯಲ್ಲಿ ಈ ಬಗ್ಗೆ ಚುನಾವಣೆ ಪ್ರಕ್ರಿಯೇ ಪ್ರಶ್ನಿಸಿ ಹಿಂದಿನ ಅವಧಿಯ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ್ ನ್ಯಾಯಾಲಯ ಮೆಟ್ಟಿಲೇರಿದ್ದರು. ಇದರಿಂದ ಜಿಲ್ಲಾ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು.

ಆದರೆ ಇಂದು ಗದಗ ಜಿಲ್ಲಾ ನ್ಯಾಯಾಲಯವು ಮುಂಡರಗಿ ಎ.ಪಿ.ಎಮ್.ಸಿ ಅಧ್ಯಕ್ಷರ ಆಯ್ಕೆಗೆ ತಾತ್ಕಾಲಿಕ ತಡೆಯಾಜ್ಞೆ ನಿಡುರುವದನ್ನು ತೆರವುಗೊಳಸಿ ಮದ್ಯಂತರ ಅರ್ಜಿ ರದ್ದುಪಡಸಿದೆ. ಈ ವಿಚಾರವಾಗಿ ಮುಂಡರಗಿ ತಹಶಿಲ್ದಾರ್ ಗೆ ಕೂಡಲೆ ನೋಟಿಸ್ ಜಾರಿ ಮಾಡಿ ಜುಲೈ 30 ರಂದು ನ್ಯಾಯಾಲಯಕ್ಕೆ ಹಾಜರಾಗಲು ಸೂಚಿಸಿ ಪ್ರಕರಣ ಮುಂದುವರೆಸಿದೆ.

ಈ ಬೆಳವಣಿಗೆಯಿಂದ ಇಂದು ಪಟ್ಟಣದ ಕೊಪ್ಪಳ ವೃತ್ತ ಸೇರಿದಂತೆ ಹಲವೆಡೆ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಿಸಿದರು.

Leave a Reply

Your email address will not be published. Required fields are marked *

You May Also Like

ಎಸ್ಸೆಸ್ಸೆಲ್ಸಿ ಪರೀಕ್ಷೆಯ ನಿರ್ಧಾರದಿಂದ ಸರ್ಕಾರ ತಕ್ಷಣವೇ ಹಿಂದೆ ಸರಿಯಬೇಕು – ಕುಮಾರಸ್ವಾಮಿ!

ಬೆಂಗಳೂರು: ರಾಜ್ಯದಾದ್ಯಂತ ಜೂ. 25ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಮುಂದಾಗಿರುವ ರಾಜ್ಯ ಸರ್ಕಾರ ಈ ನಿರ್ಧಾರದಿಂದ…

ಅಂತರಾಜ್ಯ ಪ್ರಯಾಣಿಕರಿಗೆ ಸರ್ಕಾರದ ಮಾರ್ಗಸೂಚಿ

ಬೆಂಗಳೂರು: ಅಂತರಾಜ್ಯದಿಂದ ಬರುವ ಪ್ರಯಾಣಿಕರಿಗೆ ಸರ್ಕಾರ ಕೆಲವು ಸೂಚನೆಗಳನ್ನು ನೀಡಿದೆ. ಸರ್ಕಾರ ನೀಡಿದ ಸೂಚನೆಗಳು ಈ…

ನೂತನ 52 ತಾಲೂಕುಗಳಲ್ಲಿ ಬಿಇಒ ಕಚೇರಿ ಮರೀಚಿಕೆ ? ಆರಂಭದ ಸುಳಿವೇ ಇಲ್ಲ ! ಪ್ರಾರಂಭ ಎಂದು ? ಬಿಇಒ ಕಚೇರಿ, ಸಿಬ್ಬಂದಿ ಮಂಜೂರಾತಿಗೆ ಆಗ್ರಹ

ಆಲಮಟ್ಟಿ : ಹೊಸ ಭರವಸೆಯ ಆಶಾ ಕಿರಣದೊಂದಿಗೆ ನೂತನವಾಗಿ ತೆಲೆಯತ್ತಿದ್ದ ರಾಜ್ಯದ 52 ನವ ತಾಲೂಕುಗಳು…

ಆರು ತಿಂಗಳ ನ್ಯಾಯ ನೀಡಿ ಮೋದಿಜೀ ಎಂದ ಸಿದ್ದು

20 ಲಕ್ಷ ಕೋಟಿ ಮೊತ್ತದಲ್ಲಿ ಇರುವ 13 ಸೊನ್ನೆಗಳಲ್ಲಿ ಯಾರಿಗೆ ಯಾವ ಸೊನ್ನೆ ಸಿಗಲಿದೆ ಎನ್ನುವುದು ಪ್ರಶ್ನೆಯಾಗಿದೆ ಎಂದು ಪ್ವಾರದಾನಿ ನರೇಂದ್ಗಿರ ಮೋದಿ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿ ಟ್ವೀಟ್ ಮಾಡಿದ್ದಾರೆ.