ಒಡಿಶಾ : ಅಪ್ರಾಪ್ತ ಬಾಲಕಿಯ ಮೇಲೆ ಪೊಲೀಸ್ ಠಾಣೆಯ ಸಿಬ್ಬಂದಿಯೇ ಸಾಮೂಹಿಕ ಅತ್ಯಾಚಾರ ಮಾಡಿರುವ ಅಮಾನವೀಯ ಘಟನೆ ನಡೆದಿದೆ. 

ಒಡಿಶಾದ ಬುಡಕಟ್ಟು ಸಮುದಾಯದ ಜನರು ಪ್ರಾಬಲ್ಯವಿರುವ ಸುಂದರ್‌ಘರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಬಿರಾಮಿತ್ರಪುರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ ಆನಂದ್ ಚಂದ್ರ ಮಾಝಿ ಮತ್ತು ಇತರ ಐವರು ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ. ಮಾ. 25ರಂದು ಬಿರಾಮಿತ್ರಪುರದಲ್ಲಿ ಪ್ರತೀ ವರ್ಷ ಜಾತ್ರೆ ನಡೆಯುತ್ತಿತ್ತು. ಲಾಕ್‌ಡೌನ್‌ ಇದ್ದಿದ್ದರಿಂದ ಜಾತ್ರೆಯನ್ನು ರದ್ದು ಮಾಡಲಾಗಿತ್ತು. ಈ ಸಂದರ್ಭದಲ್ಲಿ ಬಾಲಕಿ ವಿಫಲವಾಗಿ ಅಲ್ಲಿಯೇ ಬಸ್‌ಸ್ಟ್ಯಾಂಡ್‌ನಲ್ಲಿ ತಿರುಗಾಡುತ್ತಿದ್ದಳು. ಇದನ್ನು ಗಮನಿಸಿದ ರಾತ್ರಿ ಗಸ್ತಿನಲ್ಲಿದ್ದ ಪೊಲೀಸರ ತಂಡ ಬಾಲಕಿಯನ್ನು ಪೊಲೀಸ್ ಸ್ಟೇಷನ್‌ಗೆ ಕರೆತಂದಿದ್ದಾರೆ.

ಈ ಸಂದರ್ಭದಲ್ಲಿ ಇನ್ಸ್‌ಪೆಕ್ಟರ್ ಸೇರಿದಂತೆ ಠಾಣೆಯಲ್ಲಿದ್ದ ಇತರೆ ಪೊಲೀಸ್‌ ಸಿಬ್ಬಂದಿ ಸಾಮೂಹಿಕ ಅತ್ಯಾಚಾರ ಮಾಡಿ ಮರುದಿನ ಆಕೆಯ ಮನೆಗೆ ತಲುಪಿಸಿದ್ದಾರೆ. ನಂತರ ಆಕೆ ಗರ್ಭಿಣಿಯಾಗಿರುವುದನ್ನು ಅರಿತ ಪೊಲೀಸರು ವೈದ್ಯರ ಮೂಲಕ ಗರ್ಭಪಾತ ಮಾಡಿಸಿದ್ದಾರೆ. ಈ ಸಂಗತಿ ತಿಳಿದ ಜಿಲ್ಲಾ ಮಕ್ಕಳ ಸಂರಕ್ಷಣಾ ಅಧಿಕಾರಿ ಎಸ್ ಜೇನಾ ಅವರು, ಪೊಲೀಸ್‌ ಇನ್ಸ್‌ಪೆಕ್ಟರ್‌, ಗರ್ಭಪಾತ ಮಾಡಿದ ವೈದ್ಯ, ಬಾಲಕಿಯ ಮಲತಂದೆ ಮತ್ತು ಇನ್ನಿಬ್ಬರ ವಿರುದ್ಧ ದೂರು ದಾಖಲಿಸಿದ್ದರು. ಸದ್ಯ ಇನ್ಸಪೆಕ್ಟರ್ ನನ್ನು ಅಮಾನತು ಮಾಡಲಾಗಿದೆ. ಇನ್ನುಳಿದ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

You May Also Like

ಸರ್ಕಾರಿ ನೌಕರರಿಗೆ ಎಲೆಕ್ಟ್ರಿಕ್ ವಾಹನ ಕಡ್ಡಾಯಕ್ಕೆ ಸಚಿವ ನಿತಿನ್ ಗಡ್ಕರಿ ಸಲಹೆ

ಎಲ್ಲ ಸರ್ಕಾರಿ ಅಧಿಕಾರಿಗಳಿಗೆ ಎಲೆಕ್ಟ್ರಿಕ್ ವಾಹನ ಬಳಕೆಯನ್ನು ಕಡ್ಡಾಯಗೊಳಿಸಬೇಕು ಎಂದು ಸಚಿವ ನಿತಿನ್ ಗಡ್ಕರಿ ಸಲಹೆ ನೀಡಿದ್ದಾರೆ.

ನಾನು ವಿಲನ್ ಅಲ್ಲವೇ ಅಲ್ಲ, ನನ್ನದೇನಿದ್ದರು ಹಿರೋ ಪಾತ್ರ : ಸಿದ್ದರಾಮಯ್ಯ

ಸರಕಾರ ಸಿದ್ರಾಮಯ್ಯ ಬೀಳಿಸಿದ್ದು ಅಂತ ನನ್ನನ್ನು ಆರೋಪಿಸುತ್ತಾರೆ. ಆದರೆ ನಾನು ಯಾವತ್ತು ಅಂತಹ ಕೆಲಸ ಮಾಡಿಲ್ಲ. ಕುಣಿಯಲು ಬಾರದವರು ನೆಲ ಡೊಂಕು ಎನ್ನುವಂತಿದೆ ನನ್ನನ್ನು ಆರೋಪಿಸುವವರ ಮಾತು. ನಾನು ಯಾವತ್ತೂ ಹಿರೋ ವಿಲನ್ ಅಲ್ಲವೇ ಅಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.

ಮದುವೆಗೆ ಅಡ್ಡಿಯಾಗು ಆತಂಕದಿಂದ ಸೋಂಕು ಬಚ್ಚಿಟ್ಟ ವ್ಯಕ್ತಿ ಸಾವು

ಕಾರವಾರ : ಮದುವೆಗೆ ಅಡ್ಡಿಯಾಗಲಿದೆ ಎಂಬ ಕಾರಣಕ್ಕೆ ಕೊರೊನಾ ಸೋಂಕು ಇರುವುದನ್ನು ಮುಚ್ಚಿಟ್ಟ ವ್ಯಕ್ತಿ ಸದ್ಯ…

NEET 2021 :ವೈದ್ಯಕೀಯ ಕಾಲೇಜು ಪ್ರವೇಶ ಮತ್ತು ಕೌನ್ಸೆಲಿಂಗ್ ಪ್ರಕ್ರಿಯೆ ಇನ್ನೂ ಒಂದು ತಿಂಗಳ ವಿಳಂಭ ಸಾಧ್ಯತೆ !

ಉತ್ತರಪ್ರಭ ಸುದ್ದಿ ದೆಹಲಿ: ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET) 2021 ಫಲಿತಾಂಶವನ್ನು ಘೋಷಿಸಿದ…