ಬಾಗಲಕೋಟೆ: ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಹೆಚ್ಚುತ್ತಿದ್ದು, ನಡೆಯಬೇಕಿದ್ದ ಮದುವೆ ಯನ್ನು ಗುಳೇದಗುಡ್ಡ ತಾಲೂಕು ಆಡಳಿತದ ಅಧಿಕಾರಿಗಳು ರದ್ದು ಮಾಡಿಸಿದ್ದಾರೆ,
ಗುಳೇದಗುಡ್ಡ ಪಟ್ಟಣದ ಯುವತಿ ಬಳ್ಳಾರಿ ಜಿಲ್ಲೆಯ ಯುವಕನ ಜೊತೆ ಇಂದು ಮದುವೆ ನಡೆಯಬೇಕಿತ್ತು, ಆದ್ರೆ ಯುವಕನ ತಾಯಿಗೆ ಕೊರೊನಾ ಪಾಸಿಟಿವ್ ಇದೆ ಎನ್ನುವ ಮಾಹಿತಿ ಇದೆ, ಅವರು ಬಳ್ಳಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ,
ಇತ್ತ ಮದುವೆಯ ಯುವಕ ಹಾಗೂ ಸಂಬಂಧಿಕರು ಸೇರಿ ಬಳ್ಳಾರಿ ಯಿಂದ ಬಸ್ ತೆಗೆದುಕೊಂಡು ಮದುವೆಗೆ ಬಂದಿದ್ದರು ಈ ವಿಷಯ ತಿಳಿದು ರಾತ್ರಿಯೇ ಗುಳೇದಗುಡ್ಡ ತಾಲ್ಲೂಕು ಆಡಳಿತ ಸಿಬ್ಬಂದಿ ಸ್ಥಳಕ್ಕೆ ತೆರಳಿ ಮದುವೆಯನ್ನು ರದ್ದು ಮಾಡಿಸಿ ಬಂದವರನ್ನು ವಾಪಸು ಕಳುಹಿಸಿದ್ದಾರೆ, ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ ಗಳು ದಿನೇ ದಿನೇ ಹೆಚ್ಚಾಗಿದ್ದು ಇನ್ನೊಂದು ಅವಾಂತರ ತಪ್ಪಿದಂತಾಗಿದೆ, ಬಾಗಲಕೋಟೆ ನಗರದಲ್ಲಿ ಇತ್ತೀಚೆಗೆ ಅಷ್ಟೇ ಮದುವೆಯ ಆರತಕ್ಷತೆ ನಡೆದು ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿವೆ.
ಮಧುಮಗನ ತಾಯಿಗೆ ಕೊರೊನಾ ಪಾಸಿಟಿವ್ ಮದುವೆ ರದ್ದು

corona state update