ಬೆಂಗಳೂರು: ಈಗಾಗಲೇ ದಿನದಿಂದ ದಿನಕ್ಕೆ ದೇಶದಲ್ಲಷ್ಟೆ ಅಲ್ಲದೇ ರಾಜ್ಯದಲ್ಲೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದರಿಂದ ಶಿಕ್ಷಕರು ಆರೋಗ್ಯ ಭಯದ ವಾತಾವರಣದಲ್ಲಿ ಕಾಲ ಕಳಿಯುವಂತಾಗಿದೆ. ಧಾರವಾಡ, ಗದಗ, ಬಾಗಲಕೋಟೆ ಸೇರಿದಂತೆ ಹಲವು ಜಿಲ್ಲೆಯಲ್ಲಿ ಈಗಾಗಲೇ ಕೊರೊನಾ, ಶಿಕ್ಷಕ ಹಾಗೂ ಕುಟುಂಬಸ್ಥರನ್ನಾವರಿಸಿದೆ. ಇದರಿಂದ ಇಂಥಹ ಪರಿಸ್ಥಿತಿಯಲ್ಲಿ ತರಗತಿಗಳು ಹಾಗೂ ಪ್ರವೇಶ ಪ್ರಕ್ರಿಯೇ ಆರಂಭವಾಗದಿದ್ದಾಗ್ಯೂ ಶಿಕ್ಷಕರು ಶಾಲೆಗೆ ಹೋಗಿ ಕಾರ್ಯ ನಿರ್ವಹಿಸುವುದು ಎಷ್ಟು ಸರಿ? ಎನ್ನುವ ಪ್ರಶ್ನೆ ಉದ್ಭವಾಗಿದೆ.

ಹೀಗಾಗಿ ಈ ಬಗ್ಗೆ ಶಿಕ್ಷಕರಿಗೆ ಮನೆಯಿಂದಲೇ ಕೆಲಸ ನಿರ್ವಹಿಸಲು ಅವಕಾಶ ಕಲ್ಪಿಸಿಕೊಡುವ ಕುರಿತು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮನವಿ ಸಲ್ಲಿಸಿದೆ.

ತರಗತಿಗಳು ಆರಂಭವಿಲ್ಲ
01-06-2020ರಂದು ಹಾಗೂ 04-06-2020 ಶಿಕ್ಷಣ ಇಲಾಖೆ ಆಯುಕ್ತರ ಸುತ್ತೋಲೆಯಂತೆ ರಾಜ್ಯದ ಶಿಕ್ಷಕರು ದಿನಾಂಕ: 08-06-2020ರಂದು ಶಾಲೆಗಳಿಗೆ ತೆರಳಿ, ದಿನಾಂಕ:08-06-2020 ರಿಂದ ದಾಖಲಾತಿ ಪ್ರಕ್ರಿಯೆಯನ್ನು ಹಾಗೂ ತಮ್ಮ ನಿರ್ದೇಶನ ಮತ್ತು ಕೇಂದ್ರ ಸರ್ಕಾರದ ಆದೇಶದಂತೆ ದಿನಾಂಕ:10, 11, 12 ಜೂನ್ 2020ರ ಮೂರು ದಿನಗಳ ಕಾಲ ಪಾಲಕರ, ಪೋಷಕರ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಭಿಪ್ರಾಯ ಸಂಗ್ರಹಿಸಿ, ದಿನಾಂಕ:20-06-2020ರೊಳಗಾಗಿ ಅಭಿಪ್ರಾಯಗಳನ್ನು ಅಪಲೋಡ್ ಮಾಡಿರುತ್ತಾರೆ.
ಆದರೆ ಉಲ್ಲೇಖ (1)ರನ್ವಯ ಮಾನ್ಯ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರು ದಿನಾಂಕ:07-06-2020 ರಂದು ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ದಿನಾಂಕ:15-08-2020 ಕ್ಕಿಂತ ಮುಂಚೆ ಶಾಲೆಗಳನ್ನು ತೆರೆಯುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ. ಮಕ್ಕಳು 2020ರ ಆಗಸ್ಟ್ 15ರೊಳಗೆ ಶಾಲೆಯ ಕಡೆಗೆ ಬರುವ ಪ್ರಮೇಯವೇ ಇಲ್ಲ. ಹೀಗಿದ್ದಾಗ್ಯೂ ಮಕ್ಕಳು ಶಾಲೆಗೆ ಬರುವ ಸುಮಾರು 55 ದಿನಗಳ ಮೊದಲು ದಿನನಿತ್ಯ ಶಿಕ್ಷಕರು ಶಾಲೆಗೆ ಹೋಗುವುದರಿಂದ ಆಗುವ ಬದಲಾವಣೆಯಾದರೂ ಏನು ಎನ್ನುವ ಪ್ರಶ್ನೆ ಉದ್ಭವವಾಗಿದೆ.

ದಸರಾ ರಜೆಯಲ್ಲೂ ಕಾರ್ಯ ನಿರ್ವಹಿಸುತ್ತೇವೆ
ಇಂಥ ಪರಿಸ್ಥಿತಿಯಲ್ಲಿ ಶಿಕ್ಷಕರನ್ನು ಶಾಲೆಗೆ ದಿನನಿತ್ಯ ಕರೆಸಿಕೊಳ್ಳುವುದು ಸೂಕ್ತವಾಗಿರುವುದಿಲ್ಲ ಎನ್ನುವುದು ಎಲ್ಲರ ಅಭಿಪ್ರಾಯವಾಗಿದೆ. ಬೇಕಾದರೆ ದಸರಾ ರಜೆ ಹಾಗೂ ಇನ್ನೂಳಿದ ರಜೆಗಳಲ್ಲೂ ಮಕ್ಕಳು ಶಾಲೆಗೆ ಬಂದರೆ ಶಿಕ್ಷಕರೂ ಕಾರ್ಯನಿರ್ವಹಿಸಬಹುದು.
ಕೇಂದ್ರ ಸರ್ಕಾರದ ನಿರ್ದೇಶನದಂತೆ ಹಾಗೂ ರಾಜ್ಯದ ಪಾಲಕರ/ಪೋಷಕರ ಅಭಿಪ್ರಾಯದಂತೆ ಮಕ್ಕಳು ಶಾಲೆಗೆ ಹಾಜರಾಗುವಂತೆ ಸೂಕ್ತ ಸುತ್ತೋಲೆ ಹೊರಡಿಸಬೇಕೆಂದು ಶಿಕ್ಷಕರ ಸಂಘಟನೆ ವಿನಂತಿಸಿದೆ.

ಮನೆಯಲ್ಲಿಯೇ ಎಲ್ಲ ಚಟುವಟಿಕೆ ಸಿದ್ಧತೆ
ಎಲ್ಲಾ ಶೈಕ್ಷಣಿಕ ಚಟುವಟಿಕೆಗಳ ಸಿದ್ಧತೆಯನ್ನು ಮನೆಯಿಂದಲೇ ಮಾಡಿಕೊಳ್ಳುತ್ತೇವೆ. ವಿಶೇಷವಾಗಿ ಚಿಕ್ಕಮಕ್ಕಳಿರುವ ತಾಯಂದಿರು ಗ್ರಾಮೀಣ ಪ್ರದೇಶಗಳಿಗೆ ಸಾರಿಗೆ ವ್ಯವಸ್ಥೆ ಇಲ್ಲದೇ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ.
ಶಾಲಾ ಆರಂಭದ ಜೊತೆಗೆ ಮಕ್ಕಳಿಗೆ ಮಾರ್ಗದರ್ಶನ ಮಾಡುವ ಎಲ್ಲಾ ಕೆಲಸ ಕಾರ್ಯಗಳನ್ನು ಶಿಕ್ಷಕರು ಮನೆಯಿಂದಲೇ ಕಾರ್ಯನಿರ್ವಹಿಸುವುದಕ್ಕೆ ಅವಕಾಶ ಕಲ್ಪಿಸಿಕೊಟ್ಟು, ಮಕ್ಕಳ ಶ್ರೇಯೋಭಿವೃದ್ಧಿಗೆ, ಶಿಕ್ಷಕರ ಹಾಗೂ ಎಲ್ಲರ ಅಭಿಪ್ರಾಯದಂತೆ ಮಕ್ಕಳು ಬರುವಾಗ ಶಿಕ್ಷಕರು ಶಾಲೆಗೆ ಹಾಜರಾಗುವಂತೆ ನಿರ್ದೇಶನ ನೀಡಬೇಕಾಗಿ ಮನವಿ ಮಾಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *

You May Also Like

ನರಗುಂದ ತಾಲೂಕಿನ 383 ಹಣ್ಣು ಬೆಳೆಗಾರರಿಗೆ ಸರಕಾರದಿಂದ ಪರಿಹಾರ

ನರಗುಂದ: (ಕೊಣ್ಣೂರ) ಅತೀವೃಷ್ಟಿ ಮಹಾಪುರದಿಂದ ತತ್ತರಿಸಿದ ರೈತರಿಗೆ ಕೋವೀಡ್ 19 ಮಹಾಮಾರಿಯು ಶಾಪವಾಗಿ ಪರೀಣಮಿಸಿರುವದರಿಂದ ರೈತರ ಜನಜೀವನ ಚಿಂತಾಜನಕವಾಗಿದೆ

ಹೌಸ್ಫುಲ್.. ಹೌಸ್ಫುಲ್..! ಅದ್ಧೂರಿ ಎಂಟ್ರಿ ಕೊಟ್ಟ ಪೊಗರು

ಖುಷ್ತ್ರಿಭಾಷೆಯಲ್ಲಿ ಬಿಡುಗಡೆಯಾದ ಪೊಗರು ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಶುಕ್ರವಾರ ತೆರೆಕಂಡ ಪೊಗರು ಶಿವನಿಗೆ ಅಭಮಾನಿಗಳು ಫಿದಾ ಆಗಿದ್ದಾರೆ.

ಅತಿ ವೇಗವಾಗಿ ಹರಡುತ್ತಿದೆ ಡೆಲ್ಟಾ ವೈರಸ್ : WHO ನಿರ್ದೇಶಕ ಟೆಡ್ರೊಸ್!

ಡೆಲ್ಟಾ ವೈರಸ್ ನಿಂದ ಸಾರ್ವಜನಿಕರ ಆರೋಗ್ಯ ಪರಿಸ್ಥಿತಿ ಗಂಭೀರವಾಗುತ್ತಿದೆ. ಹಾಗಾಗಿ ಕಡಿಮೆ ಲಸಿಕೆ ನೀಡಿರುವ ರಾಷ್ಟ್ರಗಳಲ್ಲಿ ಆರೋಗ್ಯ ಪರಿಸ್ಥಿತಿ ಇನ್ನೂ ಭೀಕರವಾಗಿದೆ. ಹಾಗೂ ಯಾವ ದೇಶದಲ್ಲೂ ಕೂಡ ಸಂಪೂರ್ಣವಾಗಿ ಸೊಂಕು ನಿವಾರಣೆಯಾಗಿಲ್ಲ ಎಂದು ಹೇಳಿದ ಟೆಡ್ರೊಸ್, ಈ ಸೋಂಕನ್ನು ತಡೆದು ಹಾಕಲು ಇಡೀ ಪ್ರಪಂಚವೇ ಒಟ್ಟಾಗಿ ಸೋಂಕಿನ ವಿರುದ್ಧ ಹೋರಾಡಬೇಕಿದೆ‌. ನಾವು ಕೋವಿಡ್ ಮತ್ತು ಡೆಲ್ಟಾ ಇವೆರಡರ ಮಧ್ಯೆ ಸಿಲುಕಿ ಕೊಂಡಿದ್ದೇವೆ ಹಾಗಾಗಿ ಎಚ್ಚರದಿಂದಿರಬೇಕಿದೆ ಎಂದು ಟೆಡ್ರೊಸ್ ಹೇಳಿಕೆ ನೀಡಿದ್ದಾರೆ.