ಬೆಂಗಳೂರು: ಈಗಾಗಲೇ ಕೊರೊನಾ ಸಂಕಷ್ಟದಲ್ಲಿರುವ ಜನರಿಗೆ ವಿದ್ಯುತ್ ಇಲಾಖೆ ಮತ್ತೊಂದು ಶಾಕ್ ನೀಡಲು ಮುಂದಾಗಿದೆ. ಬೆಸ್ಕಾಂ ವಿದ್ಯುತ್ ದರ ಹೆಚ್ಚಿಗೆ ಮಾಡಲು ಮುಂದಾಗಿದ್ದು ಜನರಿಗೆ ಸಂಕಷ್ಟದ ಬರೆ ಎಳೆದಂತಾಗಿದೆ. ಜುಲೈ1, 2020 ರಿಂದ ಡಿಸೆಂಬರ್ 31, 2020ರ ವರೆಗೆ ಬಿಲ್ಲಿಂಗ್ ಅವಧಿಗೆ ನಿಗದಿಪಡಿಸಿದ ಇಂಧನ ವ್ಯತ್ಯಾಸವನ್ನು ಪ್ರತಿ ಯುನಿಟ್ ಗೆ 12 ಪೈಸೆ ಇಂಧನ ವ್ಯತ್ಯಾಸ ದರವನ್ನಾಗಿ ಪಡೆಯಲು ಬೆಸ್ಕಾಂ ಅನುಮೋದನೆ ನೀಡಿದೆ.

ಈಗಾಗಲೇ ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಬೆಸ್ಕಾಂ ಜನರು ಕೊರೊನಾದ ಭಯದಲ್ಲಿರುವಾಗ ವಿದ್ಯುತ್ ದರ ಹೆಚ್ಚಳವನ್ನು ಸದ್ದಿಲ್ಲದೇ ಮಾಡಲು ಮುಂದಾಗಿದೆ. ಇತ್ತಿಚೆಗಷ್ಟೆ ರಾಜ್ಯಾದ್ಯಂತ ಹೆಚ್ಚಿಗೆ ಬಿಲ್ ನೀಡುವ ಮೂಲಕ ವಿದ್ಯುತ್ ಇಲಾಖೆ ವಿವಾದಕ್ಕೆ ಕಾರಣವಾಗಿತ್ತು. ಈಗ ಮತ್ತೆ ವಿದ್ಯುತ್ ದರ ಹೆಚ್ಚಳ ಮಾಡಿದ್ದು ಜನರನ್ನು ಆತಂಕಕ್ಕೀಡು ಮಾಡಿದೆ. ಬೆಸ್ಕಾಂ ಮಾದರಿಯನ್ನೆ ಉಳಿದ ನಿಗಮಗಳು ವಿದ್ಯುತ್ ದರ ಹೆಚ್ಚಳ ಮಾಡುವ ಸಾದ್ಯತೆ ಇದ್ದು ಈ ಬಗ್ಗೆ ಜನರಿಗೆ ಆತಂಕ ನಿರ್ಮಾಣವಾಗಿದ್ದು, ಇದಕ್ಕೆ ವಿರೋಧ ಕೂಡ ವ್ಯಕ್ತವಾಗುತ್ತಿದೆ.   

Leave a Reply

Your email address will not be published.

You May Also Like

ಕಾಂಗ್ರೆಸ್ ನ ಬಂಡೆಗೆ ನಮ್ಮ ಡೈನಾಮೈಟ್ ಗಳು ಉತ್ತರ ನೀಡಲಿವೆ – ಕಟೀಲ್!

ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಗುಡುಗಿದ್ದಾರೆ.

ಮಾಜಿ ಸಚಿವ ವಿನಯ್ ಕುಲಕರ್ಣಿ ವಶಕ್ಕೆ ಪಡೆದ ಸಿಬಿಐ!

ಧಾರವಾಡ : ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಸಿಬಿಐ ವಶಕ್ಕೆ ಪಡೆದಿದೆ.

ಊರಳಿಯನಿಂದ ಬಂತು ಸೋಂಕು: ಆರ್.ಎಂ.ಪಿ ಡಾಕ್ಟರ್ ನಿಂದ ಸುತ್ತಲಿನ ಗ್ರಾಮಸ್ಥರಿಗೆ ಆತಂಕ..!

ಗದಗ: ಊರಳಿಯ ಮಾವನ ಮನೆಗೆ ಬಂದಿದ್ದಾನೆ. ಆದರೆ ಆತನಿಗೆ ಸೋಂಕು ತಗುಲಿರುವುದು ಸ್ವತ: ಆತನಿಗೂ ಗೊತ್ತಿರಲಿಲ್ಲ.…

ಬೆಳಗಾವಿಯಲ್ಲಿ ಕೊಳಚೆ ಕಲ್ಲಿನ ರಾಜಕಾರಣದ ರಹಸ್ಯೆವೇನು?: ಹೆಬ್ಬಾಳ್ಕರ್-ಜಾರಕಿಹೊಳಿ ಚಾಲೇಂಜಿಂಗ್ ಪಾಲಿಟಿಕ್ಸ್..!

ಬೆಳಗಾವಿ: ಕುಂದಾ ನಗರಿಯಲ್ಲೀಗ ಕೊಳಚೆ ಕಲ್ಲಿನ ರಾಜಕಾರಣದ್ದೆ ಸುದ್ದಿ ಸದ್ದು ಮಾಡ್ತಿದೆ. ಮತ್ತೆ ಸಚಿವ ರಮೇಶ್…