ಕೊರೊನಾ ಕಾಟದ‌ಲ್ಲಿ ಸದ್ದಿಲ್ಲದೇ ಏರಿಕೆಯಾಗುತ್ತಿದೆ ವಿದ್ಯುತ್ ಬಿಲ್..?

ಬೆಂಗಳೂರು: ಈಗಾಗಲೇ ಕೊರೊನಾ ಸಂಕಷ್ಟದಲ್ಲಿರುವ ಜನರಿಗೆ ವಿದ್ಯುತ್ ಇಲಾಖೆ ಮತ್ತೊಂದು ಶಾಕ್ ನೀಡಲು ಮುಂದಾಗಿದೆ. ಬೆಸ್ಕಾಂ ವಿದ್ಯುತ್ ದರ ಹೆಚ್ಚಿಗೆ ಮಾಡಲು ಮುಂದಾಗಿದ್ದು ಜನರಿಗೆ ಸಂಕಷ್ಟದ ಬರೆ ಎಳೆದಂತಾಗಿದೆ. ಜುಲೈ1, 2020 ರಿಂದ ಡಿಸೆಂಬರ್ 31, 2020ರ ವರೆಗೆ ಬಿಲ್ಲಿಂಗ್ ಅವಧಿಗೆ ನಿಗದಿಪಡಿಸಿದ ಇಂಧನ ವ್ಯತ್ಯಾಸವನ್ನು ಪ್ರತಿ ಯುನಿಟ್ ಗೆ 12 ಪೈಸೆ ಇಂಧನ ವ್ಯತ್ಯಾಸ ದರವನ್ನಾಗಿ ಪಡೆಯಲು ಬೆಸ್ಕಾಂ ಅನುಮೋದನೆ ನೀಡಿದೆ.

ಈಗಾಗಲೇ ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಬೆಸ್ಕಾಂ ಜನರು ಕೊರೊನಾದ ಭಯದಲ್ಲಿರುವಾಗ ವಿದ್ಯುತ್ ದರ ಹೆಚ್ಚಳವನ್ನು ಸದ್ದಿಲ್ಲದೇ ಮಾಡಲು ಮುಂದಾಗಿದೆ. ಇತ್ತಿಚೆಗಷ್ಟೆ ರಾಜ್ಯಾದ್ಯಂತ ಹೆಚ್ಚಿಗೆ ಬಿಲ್ ನೀಡುವ ಮೂಲಕ ವಿದ್ಯುತ್ ಇಲಾಖೆ ವಿವಾದಕ್ಕೆ ಕಾರಣವಾಗಿತ್ತು. ಈಗ ಮತ್ತೆ ವಿದ್ಯುತ್ ದರ ಹೆಚ್ಚಳ ಮಾಡಿದ್ದು ಜನರನ್ನು ಆತಂಕಕ್ಕೀಡು ಮಾಡಿದೆ. ಬೆಸ್ಕಾಂ ಮಾದರಿಯನ್ನೆ ಉಳಿದ ನಿಗಮಗಳು ವಿದ್ಯುತ್ ದರ ಹೆಚ್ಚಳ ಮಾಡುವ ಸಾದ್ಯತೆ ಇದ್ದು ಈ ಬಗ್ಗೆ ಜನರಿಗೆ ಆತಂಕ ನಿರ್ಮಾಣವಾಗಿದ್ದು, ಇದಕ್ಕೆ ವಿರೋಧ ಕೂಡ ವ್ಯಕ್ತವಾಗುತ್ತಿದೆ.   

Exit mobile version