ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಕೊರೊನಾ ನಿಯಂತ್ರಿಸುವಲ್ಲಿ ಯಡವಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಕೊರೊನಾ ನಿಯಂತ್ರಿಸುವಲ್ಲಿ ಗುಜರಾತ್ ಸರ್ಕಾರ ಎಡವಿದೆ. ದೇಶದಲ್ಲಿಯೇ ಗುಜರಾತ್ ನಲ್ಲಿ ಸತ್ತವರ ಸಂಖ್ಯೆ ಹೆಚ್ಚಾಗಿದೆ. ಅಲ್ಲಿ ಸತ್ತವರ ಪ್ರಮಾಣ ಶೇ. 6.25 ರಷ್ಟಿದೆ. ಗುಜರಾತ್ ಗೆ ಹೋಲಿಕೆ ಮಾಡಿದರೆ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳು ಉತ್ತಮ ಕಾರ್ಯ ನಿರ್ವಹಿಸುತ್ತಿವೆ ಎಂದು ಹೇಳಿದ್ದಾರೆ. ಮಹಾರಾಷ್ಟ್ರ ಶೇ. 3.73, ರಾಜಸ್ಥಾನದಲ್ಲಿ ಶೇ. 2.32, ಪಂಜಾಬ್ ನಲ್ಲಿ ಶೇ. 2.17, ಪುದುಚೇರಿಯಲ್ಲಿ ಶೇ. 1.98, ಜಾರ್ಖಂಡ್ ನಲ್ಲಿ ಶೇ. 0.5, ಪುದುಚೇರಿಯಲ್ಲಿ ಶೇ. 1.98, ಜಾರ್ಖಂಡ್ ನಲ್ಲಿ ಶೇ. 0.5ರಷ್ಟು ಜನರು ಸಾವನ್ನಪ್ಪಿದ್ದಾರೆ. ಹೀಗಾಗಿ ಗುಜರಾತ್ ನ ಮಾಡೆಲ್ ಸದ್ಯ ವಿಶ್ವದ ಮುಂದೆ ಬೆತ್ತಲಾಗಿ ನಿಂತಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

Leave a Reply

Your email address will not be published.

You May Also Like

ಎಡಗೈ ಆಟಗಾರರು ನಿಜವಾಗಿಯೂ ಪ್ರತಿಭಾವಂತರೆ?

ಭಾರತ ತಂಡದ ಪ್ರತಿಭಾವಂತೆ ಹಾಗೂ ಸ್ಟೈಲಿಷ್ಟ್ ಆಟಗಾರ್ತಿ ಸ್ಮೃತಿ ಮಂಧನಾ ಅವರು ಶನಿವಾರ ತಮ್ಮ 24ನೇ ಹುಟ್ಟು ಹಬ್ಬದ ಸಂಭ್ರಮ ಆಚರಿಸಿಕೊಂಡಿದ್ದಾರೆ. ಅವರಿಗೆ ಖ್ಯಾತ ಆಟಗಾರರು ಹಾಗೂ ಅಭಿಮಾನಿ

ಹಣ್ಣು ಮಾರಲು ಬಂದವರಿಗೆ ಕಲ್ಲು ತಗೊಂಡು ಓಡಿಸಿ: ಹಾವೇರಿಯಲ್ಲಿ ಡಂಗೂರ

ಕೇಳ್ರಪ್ಪೋ ಕೇಳ್ರಿ……… ಆ ಊರಿಂದ ಯಾರಾದ್ರು ಹಣ್ಣು ತರಕಾರಿ ಮಾರೋರ ಬಂದ್ರ ಕಲ್ಲು ತಗೊಂಡು ಓಡಿಸುವಂತೆ ಡಂಗೂರ.

ಕಾಂಗ್ರೆಸ್ ನಿಂದ ಬಿಜೆಪಿಗೆ ಹೋದವರಿಂದಲೇ ಶೆಟ್ಟರ್ ಗೆ ಸಿಎಂ ಮಾಡಲು ಯತ್ನ

ಈಗಾಗಲೇ ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ಹೋದವರು ಸಚಿವ ಜಗದೀಶ್ ಶೆಟ್ಟರ್ ಅವರನ್ನು ಸಿಎಂ ಮಾಡಲು ಯತ್ನಿಸಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ.