ನವದೆಹಲಿ : ಚೀನಾ ಸಂಘರ್ಷದ ಬಳಿಕ ಉಂಟಾಗಿದ್ದ ಗಂಭೀರ ಪರಿಸ್ಥಿತಿಯನ್ನು ತಿಳಿಗೊಳಿಸುವ ಭಾರತ ಮತ್ತು ಚೀನಾ ಸೇನಾ ಮುಖ್ಯಸ್ಥರ ಪ್ರಯತ್ನಕ್ಕೆ ಮಹತ್ವದ ಜಯ ಲಭಿಸಿದ್ದು, ಎರಡೂ ಸೇನಾ ಮುಖ್ಯಸ್ಥರು ತಮ್ಮ ಸೈನಿಕರನ್ನು ಹಿಂದಕ್ಕೆ ಕರೆಯಿಸಿಕೊಳ್ಳಲು ನಿರ್ಧರಿಸಿದ್ದಾರೆ.
ಭಾನುವಾರ ನಡೆದ ಭಾರತ ಮತ್ತು ಚೀನಾದ ಕೋರ್ ಕಮಾಂಡರ್ ಮಟ್ಟದ ಸಭೆಯಲ್ಲಿ ಇಂತಹ ಒಮ್ಮತಾಭಿಪ್ರಾಯ ಮೂಡಿದ್ದಾಗಿ ಭಾರತೀಯ ಸೇನಾಪಡೆ ಮೂಲಗಳು ತಿಳಿಸಿವೆ. ಇದೀಗ ವಾಸ್ತವ ಗಡಿರೇಖೆಯ ನಾಲ್ಕು ಕಡೆಗಳಲ್ಲಿ ನಿಯೋಜಿಸಿರುವ ಸೇನಾಪಡೆಯನ್ನು ಹಿಂಪಡೆಯುವ ಕ್ರಮಗಳ ಕುರಿತು ಚರ್ಚಿಸಲಾಗಿದೆ. ಈ ಬಗ್ಗೆ ಮಾತುಕತೆಗಳು ಮುಂದುವರಿಯಲಿವೆ. ಮಾತುಕತೆ ಅತ್ಯಂತ ಸೌಹಾರ್ದಯುತವಾಗಿ, ಸಕಾರಾತ್ಮಕವಾಗಿ ಮತ್ತು ರಚನಾತ್ಮಕವಾಗಿ ನಡೆದಿದ್ದಾಗಿ ಮೂಲಗಳು ತಿಳಿಸಿವೆ.
ಲಡಾಖ್ನ ಪೂರ್ವ ಭಾಗದ ನಾಲ್ಕು ಪ್ರದೇಶಗಳಲ್ಲಿ ಬೀಡು ಬಿಟ್ಟಿರುವ ಚೀನಾ ಮತ್ತು ಭಾರತದ ಸೈನಿಕರು ಕೂಡಲೇ ಬಿಕ್ಕಟ್ಟಿನ ಪ್ರದೇಶವನ್ನು ಬಿಟ್ಟು ಹಿಂದಕ್ಕೆ ಸರಿಯುವ ಕುರಿತು ಮಹತ್ವದ ಒಮ್ಮತಗ ನಿರ್ಧಾರ ಕೈಗೊಳ್ಳಲಾಗಿದೆ. ಈ ಕುರಿತು ಸತತ ಒಂದು ವಾರದಿಂದ ನಡೆಯುತ್ತಿರುವ ಸೇನಾ ಮುಖ್ಯಸ್ಥರ ಸಭೆಯಲ್ಲಿ ಇಂದು ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಎರಡೂ ದೇಶಗಳ ಸೇನಾ ಮುಖ್ಯಸ್ಥರು ಸೇನೆಯನ್ನು ಹಿಂತೆಗೆಯಬೇಕು ಎಂಬ ವಿಷಯವಾಗಿ ಒಮ್ಮತಾಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ತಿರುಪತಿ ತಿಮ್ಮಪ್ಪನ ದರ್ಶನ ಯಾವಾಗ?

ಕೇಂದ್ರ ಸರ್ಕಾರ ಜೂ. 30ರ ವರೆಗೂ ಲಾಕ್ ಡೌನ್ ಘೋಷಣೆ ಮಾಡಿದೆ. ಅಲ್ಲದೇ, ಈ ಬಾರಿ ದೇವಸ್ಥಾನಗಳನ್ನು ತೆರೆಯಲು ಅನುಮತಿ ನೀಡಿದ್ದು, ಅದಕ್ಕಾಗಿ ಈ ವಾರವೇ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಲಿದೆ.

ಸುಮಲತಾಗೆ ಪಾಸಿಟಿವ್: ಸಂಪರ್ಕಿತರಿಂದ ಪರೀಕ್ಷೆಗೆ ರಶ್.!

ಮಂಡ್ಯ: ಸಂಸದೆ ಸುಮಲತಾ ತಮಗೆ ಪಾಸಿಟಿವ್ ಬಂದಿದೆ ಎಂದು ಸೋಮವಾರ ಘೋಷಿಸಿದ್ದರು. ತಮ್ಮ ಸಂಪರ್ಕಿತರ ಪಟ್ಟಿಯನ್ನು…

ಕೊವಿಡ್-19 ಸೋಂಕು: ಉಸಿರಾಟದ ಸಮಸ್ಯೆ ಸ್ಥಳದಲ್ಲೇ ಪರೀಕ್ಷೆಗೆ ಜಿಲ್ಲಾಧಿಕಾರಿ ಸೂಚನೆ

ಗದಗ : ಕೋವಿಡ್-19 ಸಾಂಕ್ರಾಮಿಕ ಸೋಂಕನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಜಿಲ್ಲೆಯ ಎಲ್ಲ 9…

ಅಂತರ್ ಜಿಲ್ಲಾ ಪ್ರವಾಸಕ್ಕಾಗಿ ನೀವು ಏನು ಮಾಡಬೇಕು ಗೊತ್ತಾ?

ಲಾಕ್ ಡೌನ್ ಹಿನ್ನೆಲೆ ಅಂತರ್ ಜಿಲ್ಲೆಗಳಲ್ಲಿ ಸಿಲುಕಿರುವವರಿಗಾಗಿ ಅಂತರ್ ಜಿಲ್ಲಾ ಪ್ರವಾಸ ಕೈಗೊಳ್ಳಲು ಸರ್ಕಾರ ಪಾಸ್ ವ್ಯವಸ್ಥೆ ಮಾಡಿದೆ.