ಲಡಾಖ್: ಭಾರತ ಹಾಗೂ ಚೀನಾ ಸೇನಾಧಿಕಾರಿಗಳು ಬರೋಬ್ಬರಿ 11 ಗಂಟೆಗಳ ಕಾಲ ಗಡಿ ಸಂಘರ್ಷದ ಕುರಿತು ಮಾತುಕತೆ ನಡೆಸಿದ್ದಾರೆ.

ಭಾರತೀಯ ಸೇನೆಯ 14 ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಹರೀಂದರ್ ಸಿಂಗ್ ಹಾಗೂ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ ಕಮಾಂಡರ್ ಮೇಜರ್ ಜನರಲ್ ಲಿಯು ಲಿನ್ 11 ಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ.

ಬೆಳಿಗ್ಗೆ 11.30 ಕ್ಕೆ ಪ್ರಾರಂಭವಾದ ಮಾತುಕತೆ 11 ಗಂಟೆಗಳ ಕಾಲ ಮುಂದುವರೆದಿದ್ದು, ಈ ಕುರಿತು ಹೆಚ್ಚಿನ ವರದಿ ನಿರೀಕ್ಷಿಸಲಾಗುತ್ತಿದೆ. ಚೀನಾದ ಭಾಗದಲ್ಲಿರುವ ಎಲ್ಎಸಿಯಲ್ಲಿ ಸಭೆ ನಡೆದಿದ್ದು, ಈಶಾನ್ಯ ಲಡಾಖ್ ನಲ್ಲಿ ಉಂಟಾಗಿದ್ದ ಘರ್ಷಣೆಯಿಂದ ಉಂಟಾಗಿದ್ದ ಉದ್ವಿಗ್ನ ಪರಿಸ್ಥಿತಿಯನ್ನು ಶಾಂತಗೊಳಿಸುವ ಬಗ್ಗೆ ಚರ್ಚಿಸಲಾಗಿದೆ. ಇದು ಉಭಯ ದೇಶಗಳ ಕಾರ್ಪ್ಸ್ ಕಮಾಂಡರ್ ಗಳ ನಡುವೆ ನಡೆದ ಎರಡನೇ ಸಭೆಯಾಗಿದೆ.

ಸೇನಾಪಡೆಗಳನ್ನು ಈಶಾನ್ಯ ಲಡಾಖ್ ನಿಂದ ಹಾಗೂ ಇತರ ಪ್ರದೇಶಗಳಿಂದ ಹಿಂಪಡೆಯುವ ಜೂ.6 ರ ಸಭೆಯ ನಿರ್ಣಯವನ್ನು ಗೌರವಿಸಿ ಬದ್ಧವಾಗಿರುವಂತೆ ಭಾರತ ಈ ಸಭೆಯಲ್ಲಿ ಚೀನಾಗೆ ಹೇಳಲಿದೆ ಎಂದು ನಿರೀಕ್ಷಿಸಲಾಗಿತ್ತು. ಲಡಾಖ್ ಗೆ ಹತ್ತಿರದಲ್ಲಿರುವ ಭಾರತೀಯ ಪ್ರದೇಶದಲ್ಲಿ ಪಿಎಲ್ಎ ಮಾಡಿರುವ ನಿರ್ಮಾಣ ಕಾಮಗಾರಿಗಳ ಬಗ್ಗೆಯೂ ಜೂ.೨೨ರ ಸಭೆಯಲ್ಲಿ ಚರ್ಚೆಗೆ ಬಂದಿರುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *

You May Also Like

ಮಧುಸ್ವಾಮಿ ವರ್ತನೆ ಸರಿಯಲ್ಲ: ಸಿಎಂ ಬಿಎಸ್ವೈ

ಬೆಂಗಳೂರು: ಕಾನೂನು ಸಚಿವ ಜೆ.ಸಿ ಮಧುಸ್ವಾಮಿ ರೈತ ಮಹಿಳೆಗೆ ಅವಾಚ್ಯವಾಗಿ ಮಾತಾಡಿದ್ದು ಸರಿಯಲ್ಲ. ಯಾರೇ ಆಗಲಿ…

ಇನ್ನೂ ಕೇವಲ 6 ತಿಂಗಳಲ್ಲಿ ನಮ್ಮ ಕೈ ಸೇರಲಿದೆಯಂತೆ ಕೊರೊನಾ ಲಸಿಕೆ!

ನವದೆಹಲಿ : ದೇಶದಲ್ಲಿ ಮುಂದಿನ 6 ತಿಂಗಳಲ್ಲಿ ಕೊರೊನಾ ಲಸಿಕೆ ವಿತರಣೆ ಮಾಡಲಾಗುತ್ತದೆ ಎಂದು ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ.

ಗದಗ ಜಿಲ್ಲೆಯ ಜನರಿಗೆ ಕೊಂಚ ನೆಮ್ಮದಿ

ಜಿಲ್ಲೆಯ 3 ಜನ ಕೊವಿಡ್-19 ಸೋಂಕಿತರು 42 ವರ್ಷದ ಪುರುಷ ಪಿ-370, 24 ವರ್ಷದ ಪುರುಷ ಪಿ-396 ಹಾಗೂ 75 ವರ್ಷದ ಪಿ-514 ಸಂಪೂರ್ಣ ಗುಣಮುಖರಾಗಿ ನಿಗದಿತ ಆಯುಷ್ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ ಎಂದು ಜಿಮ್ಸ್ ನಿರ್ದೇಶಕ ಡಾ.ಪಿ.ಎಸ್.ಭೂಸರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.