ಗದಗ: ವಿಕೆಂಡ್ ಗದಗ ಜಿಲ್ಲೆಯ ಜನರ ನಿದ್ದೆ ಕದ್ದಂತಾಗಿದೆ. ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂದಿದ್ದು ಆತಂಕ ಸೃಷ್ಟಿಸಿದೆ. ಆದರೆ ಪುಟ್ಟ ಮಕ್ಕಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿದೆ. ಮುಂಡರಗಿ ತಾಲೂಕಿನಲ್ಲಿ 2 ರಿಂದ 8 ವರ್ಷದ ಒಳಗೆ 6 ಮಕ್ಕಳಿಗೆ ಕೊರೊನಾ ಅಪ್ಪಳಿಸಿದೆ. ಇದರ ಜೊತೆಗೆ ಇಂದು 30 ಕೊರೊನಾ ಸೋಂಕಿತರ ಪತ್ತೆಯಾಗಿದ್ದು ದಾಖಲೆಯಾಗಿದೆ. ಹೀಗಾಗಿ ಇಂದು ಗದಗ ಜಿಲ್ಲೆಯ ಜನ ಆತಂಕಕ್ಕೀಡಾಗಿದ್ದಾರೆ.

ಜಿಲ್ಲೆಯಲ್ಲಿ ಕೆಮ್ಮು ಹಾಗೂ ಜ್ವರದ ಲಕ್ಷಣಗಳು ಕಂಡು ಬಂದ ಶಿರಹಟ್ಟಿ ತಾಲೂಕಿನ ವರವಿ ಗ್ರಾಮದ ನಿವಾಸಿ 31 ವರ್ಷದ ಮಹಿಳೆಯಲ್ಲಿ (ಪಿ-12079) ಸೋಂಕು ದೃಢಪಟ್ಟಿರುತ್ತದೆ.

ರೋಣ ತಾಲೂಕಿನ ಇಟಗಿ ಗ್ರಾಮದ 38 ವರ್ಷದ ಪುರುಷ ಪಿ-9407 ಸಂಪರ್ಕದಿಂದಾಗಿ 5 ಜನರಿಗೆ ಸೋಂಕು ದೃಡಪಟ್ಟಿದೆ. ಸೋಂಕಿತರು: ಮುಂಡರಗಿಯ ನೀರಾವರಿ ವಸತಿಗೃಹದ 30 ವರ್ಷದ ಮಹಿಳೆ (ಪಿ-12080), 5 ವರ್ಷದ ಹುಡುಗ(ಪಿ-12081), ಲೋಕೊಪಯೋಗಿ ಇಲಾಖೆ ವಸತಿಗೃಹದ 35 ವರ್ಷದ ಮಹಿಳೆ (ಪಿ-12097), 50 ವರ್ಷದ ಪುರುಷ (ಪಿ-12098) ಹಾಗೂ ಮುಂಡರಗಿ ಹುಡ್ಕೋ ಕಾಲನಿಯ 37 ವರ್ಷದ ಪುರುಷ (ಪಿ-12099)

ಮುಂಡರಗಿಯ ಹುಡ್ಕೋ ಕಾಲನಿಯ 44 ವರ್ಷದ ಪುರುಷ ಪಿ-10151 ಸಂಪರ್ಕದಿಂದಾಗಿ 9 ಜನರಿಗೆ ಸೋಂಕು ದೃಢಪಟ್ಟಿದೆ. ಸೋಂಕಿತರು:
ಮುಂಡರಗಿಯ ನೀರಾವರಿ ವಸತಿಗೃಹದ 17 ವರ್ಷದ ಯುವಕ (ಪಿ-12082), 16 ವರ್ಷದ ಯುವಕ (ಪಿ-12083), 34 ವರ್ಷದ ಮಹಿಳೆ (ಪಿ-12084), 7 ವರ್ಷದ ಬಾಲಕಿ (ಪಿ-12085), ಮುಂಡರಗಿ ಹುಡ್ಕೋ ಕಾಲನಿಯ 45 ವರ್ಷದ ಮಹಿಳೆ (ಪಿ-12102), 26 ವರ್ಷದ ಮಹಿಳೆ (ಪಿ-12103), 60 ವರ್ಷದ ಪುರುಷ (ಪಿ-12104), 2 ವರ್ಷದ ಬಾಲಕ (ಪಿ-12105), 6 ವರ್ಷದ ಬಾಲಕಿ (ಪಿ-12106) ಮುಂಡರಗಿಯ ಹುಡ್ಕೋ ಕಾಲನಿಯ 44 ವರ್ಷದ ಪುರುಷ ಪಿ-10150 ಸಂಪರ್ಕದಿಂದಾಗಿ 4 ಜನರಿಗೆ ಸೋಂಕು ದೃಢಪಟ್ಟಿದೆ. ಸೋಂಕಿತರು: ಮುಂಡರಗಿಯ ನೀರಾವರಿ ವಸತಿಗೃಹದ 26 ವರ್ಷದ ಮಹಿಳೆ (ಪಿ-12086), 48 ವರ್ಷದ ಪುರುಷ (ಪಿ-12087), 70 ವರ್ಷದ ಪುರುಷ (ಪಿ-12088), 60 ವರ್ಷದ ಮಹಿಳೆ (ಪಿ-12089)
ಮುಂಡರಗಿಯ ವಿದ್ಯಾನಗರದ 58 ವರ್ಷದ ಪುರುಷ ಪಿ- 10147 ಇವರ ಸಂಪರ್ಕದಿಂದಾಗಿ 7 ಜನರಿಗೆ ಸೋಂಕು ದೃಢಪಟ್ಟಿದೆ. ಸೋಂಕಿತರು: ಮುಂಡರಗಿಯ ವಿದ್ಯಾನಗರದ ನಿವಾಸಿಗಳಾದ 53 ವರ್ಷದ ಮಹಿಳೆ (ಪಿ-12090), 28 ವರ್ಷದ ಮಹಿಳೆ (ಪಿ-12091), 3 ವರ್ಷದ ಬಾಲಕಿ (ಪಿ-12092), 8 ವರ್ಷದ ಬಾಲಕಿ (ಪಿ-12093), 25 ವರ್ಷದ ಮಹಿಳೆ (ಪಿ-12094), 18 ವರ್ಷದ ಮಹಿಳೆ(ಪಿ-12095), 18 ವರ್ಷದ ಮಹಿಳೆ (ಪಿ-12096)
ಮುಂಡರಗಿ ತಾಲೂಕಿನ ಡಂಬಳ ಗ್ರಾಮದ 40 ವರ್ಷದ ಪುರುಷ ಪಿ-9729 ಇವರ ಸಂಪರ್ಕದಿಂದಾಗಿ 2 ಜನರಿಗೆ ಸೋಂಕು ದೃಢಪಟ್ಟಿದೆ. ಸೋಂಕಿತರು: ಡಂಬಳ ಗ್ರಾಮದ 28 ವರ್ಷದ ಮಹಿಳೆ (ಪಿ-12107), 32 ವರ್ಷದ ಮಹಿಳೆ (ಪಿ-12108) ಮುಂಡರಗಿಯ ಆರೋಗ್ಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿರುವ 28 ವರ್ಷದ ಮಹಿಳೆ (ಪಿ-12100), ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮದ ನಿವಾಸಿ ಹಾಗೂ ಮುಂಡರಗಿಯಲ್ಲಿ ಆರೋಗ್ಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿರುವ 22 ವರ್ಷದ ಮಹಿಳೆಗೆ (ಪಿ-12101) ಸೋಂಕು ದೃಢಪಟ್ಟಿದ್ದು ಇವರುಗಳ ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಹಚ್ಚಲಾಗುತ್ತಿದೆ.

Leave a Reply

Your email address will not be published. Required fields are marked *

You May Also Like

ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ನಾಲ್ಕು ಜನರ ಸಾಮೂಹಿಕ ಅಂತ್ಯಸಂಸ್ಕಾರ ಸಂಸ್ಕಾರ ಮಾಡಿದ ಬಿನ್ನಾಳ ಗ್ರಾಮಸ್ಥರು

ಕೊಪ್ಪಳ: ಜಿಲ್ಲೆಯ ಕುಕನೂರು ತಾಲೂಕಿನ ಭಾನಾಪೂರದ ಬಳಿ ರಾತ್ರಿ ಭೀಕರ ಅಪಘಾತ ಸಂಭವಿಸಿ ಸ್ಥಳದಲ್ಲಿಯೇ ಒಂದೇ…

ಪ್ರತ್ಯೇಕ ಕೇಂದ್ರ ಸ್ಥಾನಕ್ಕೆ ಒತ್ತಾಯಿಸಿ ಜಿಗಳೂರು ಗ್ರಾಮಸ್ಥರ ಪ್ರತಿಭಟನೆ

ರೋಣ: ಜಿಗಳೂರ ಗ್ರಾಮಕ್ಕೆ ಪ್ರತ್ಯೇಕ ಕೇಂದ್ರ ಸ್ಥಾನ ನೀಡಲು ಒತ್ತಾಯಿಸಿ ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿದರು.…

ಲಡಾಖ್‍ನಲ್ಲಿ ಪ್ರಧಾನಿ ಮೋದಿ ತೆರೆಯಿತೆ ಲಡಾಯಿಯ ಹಾದಿ?

ಜೂನ್ 15ರಂದು ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದ ಸಂಘರ್ಷದ ನಂತರ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಸಂಘರ್ಷ ವಲಯಗಳಾದ ಲಡಾಕ್ ಮತ್ತು ಲೇಹ್ ಪ್ರದೇಶಕ್ಕೆ ಇಂದು ಭೇಟಿ ನೀಡಿ, ದೇಶದ ಸೈನಿಕ ಪಡೆಗಳಿಗೆ ನೈತಿಕ ಸ್ಥೈರ್ಯ ತುಂಬಿದರು.

ಪತ್ನಿಯ ಗುಪ್ತಾಂಗಕ್ಕೆ ಬೆಂಕಿ ಹಚ್ಚಿದ ಪಾಪಿ!

ಬೆಂಗಳೂರು : ತನ್ನನ್ನೇ ಸರ್ವಸ್ವ ಎಂದು ನಂಬಿಕೊಂಡು ಬಂದಿದ್ದ ಪತ್ನಿಗೆ, ಪಾಪಿಯೊಬ್ಬ ಅಮಾನವೀಯವಾಗಿ ನಡೆದುಕೊಂಡಿದ್ದಾನೆ.