ದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಹೊಸದಾಗಿ 7,466 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಇದೇ ಅವಧಿಯಲ್ಲಿ 175 ಜನ ಕೊರೊನಾ ಕಾರಣದಿಂದ ಸಾವಿಗೀಡಾಗಿದ್ದಾರೆ. ಈ ಮೂಲಕ ದೇಶದಲ್ಲಿ ಕೊರೊನಾ ಪೀಡಿತರ ಸಂಖ್ಯೆ 1,65,799 ಅನ್ನು ತಲುಪಿದ್ದು, ಸಾವಿಗೀಡಾದವರ ಸಂಖ್ಯೆ 4,706ಕ್ಕೆ ಏರಿಕೆಯಾಗಿದೆ. ಸದ್ಯಕ್ಕೆ ದೇಶದಲ್ಲಿ 89,987 ಸಕ್ರಿಯ ಪ್ರಕರಣಗಳಿದ್ದು, 71,105 ನಾಗರಿಕರು ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೇಳಿದೆ.
You May Also Like
ಪತ್ರ ಚಳುವಳಿಗೆ ಕರೆ ನೀಡಿದ ಭೋವಿ ಶ್ರೀಗಳು
ಚಿತ್ರದುರ್ಗ: ಭೋವಿ, ಲಂಬಾಣಿ, ಕೊರಮ, ಕೊರಚ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡುವ ವಿಚಾರ ಈ ಸಮುದಾಯಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.
ಈ ಕುರಿತು ರಾಜ್ಯ ಸರ್ಕಾರದ ವಿವರಣೆ ಹೀಗಿದೆ: “ಭೋವಿ, ಲಂಬಾಣಿ, ಕೊರಮ, ಕೊರಚ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡುವ ವಿಚಾರವಾಗಿ ಸುಪ್ರೀಂಕೋರ್ಟ್ ಗೆ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ, ‘ಸೂಕ್ತ ಪ್ರಾಧಿಕಾರದ (NCSC) ಮುಂದೆ ಹಾಜರಾಗಲು’ ಸೂಚನೆ ನೀಡಿ, ಸರ್ವೋಚ್ಛ ನ್ಯಾಯಾಲಯ ಸದರಿ ಅರ್ಜಿಯನ್ನು 14-2-2020ರಂದು ವಿಲೇವಾರಿ ಮಾಡಿದೆ” ಎಂದು ಹೇಳಲಾಗಿದೆ.
ಜೊತೆಗೆ, “ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗ, ದೆಹಲಿ, ಇವರ ಅರ್ಜಿಯನ್ನು ಸ್ವೀಕರಿಸಿ, NCSC ಇಂದ, ಮುಖ್ಯ ಕಾರ್ಯದರ್ಶಿ, ಕರ್ನಾಟಕ ಸರ್ಕಾರ, ಬೆಂಗಳೂರು. ಇವರಿಗೆ ಬರೆದ ಪತ್ರ ಸಂಖ್ಯೆ 36/inclusion & exclusion-3/2020/ssw ದಿನಾಂಕ:12-3-2020ರಲ್ಲಿ ಎಲ್ಲಿಯೂ ಕರ್ನಾಟಕ ರಾಜ್ಯದ ಭೋವಿ, ಲಂಬಾಣಿ, ಕೊರಮ ಹಾಗೂ ಕೊರಚ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಟ್ಟಿರುವ ಬಗ್ಗೆ ತಿಳಿಸಿಲ್ಲ” ಎಂದು ಹೇಳಿದೆ.
- ಉತ್ತರಪ್ರಭ
- June 8, 2020