ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೇಗ ಹೆಚ್ಚಾಗುತ್ತಿದೆ. ಸೋಂಕಿತರ ಸಂಖ್ಯೆಯೊಂದಿಗೆ ಸಾವಿನ ಸಂಖ್ಯೆಯೂ ಆತಂಕಕ್ಕೆ ಕಾರಣವಾಗುತ್ತಿದೆ. ಇದರ ಮಧ್ಯೆ ಸೋಂಕಿತರಿಗೆ ಯಾವ ಮೂಲದಿಂದ ಕೊರೊನಾ ಬಂದಿದೆ ಎಂಬುವುದೇ ತಿಳಿಯುತ್ತಿಲ್ಲ.

ಶುಕ್ರವಾರ ಪತ್ತೆಯಾದ 138 ಪ್ರಕರಣಗಳಲ್ಲಿ 41 ಪ್ರಕರಣಗಳು ನಿಗೂಢವಾಗಿಯೇ ಉಳಿದಿವೆ. ಈ ಪ್ರಕರಣಗಳ ಮೂಲವೇ ವೈದ್ಯರಿಗೆ ಹಾಗೂ ಜಿಲ್ಲಾಡಳಿತಕ್ಕೆ ಇನ್ನೂ ತಿಳಿಯುತ್ತಿಲ್ಲ. ಇದು ಬೆಂಗಳೂರಿಗರ ಆತಂಕಕ್ಕೆ ಕಾರಣವಾಗುತ್ತಿದೆ.

ಇದರ ಜೊತೆ ಉಸಿರಾಟ ತೊಂದರೆಯಿಂದ 30 ಜನ, ವಿಷಮಶೀತ ಜ್ವರದಿಂದ 30 ಜನ ಕೊರೊನಾ ಪೀಡಿರಾಗಿದ್ದಾರೆ. ಬೇರೆ ಜಿಲ್ಲೆಗಳಿಗೆ ಹೊರ ರಾಜ್ಯಗಳು ಕಂಟಕವಾದರೆ ಬೆಂಗಳೂರಿಗೆ ನಿಗೂಢ, ಐಎಲ್ಐ ಹಾಗೂ ಸಾರಿ ಕೇಸ್ಗರಳು ಕಂಟಕವಾಗಿ ಕಾಡುತ್ತಿವೆ. ಇದು ಸಮುದಾಯಗಳಿಗೆ ಸೋಂಕು ಹಬ್ಬಲು ದಾರಿ ಮಾಡಿಕೊಡುತ್ತಿದೆ.

Leave a Reply

Your email address will not be published.

You May Also Like

ಕೋಟುಮಚಗಿ ಬಳಿ ಕಾರು ಪಲ್ಟಿ!: ಓರ್ವ ಸಾವು

ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ಕಾರು ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಗದಗ ಸಮೀಪದ ಕೋಟುಮಚಗಿ ಬಳಿ ನಡೆದಿದೆ. ಬೆಳಗಿನ ಜಾವ ಅಪಘಾತ ಸಂಭವಿಸಿದೆ ಎಂದು ಅಂದಾಜಿಸಲಾಗಿದ್ದು, ಕಾರಿನಲ್ಲಿ ಇನ್ನು ಕೆಲವರು ಇದ್ದಿರಬಹುದೆಂದು ಸಾರ್ವಜನಿಕರಿಂದ ಸಂಶಯ ವ್ಯಕ್ತವಾಗಿದೆ.

ದೇಶದಲ್ಲಿ ಕೊರೊನಾ ಇನ್ನೂ ಗರಿಷ್ಠ ಮಟ್ಟಕ್ಕೆ ಹೋಗಲಿದೆಯೇ?

ನವದೆಹಲಿ : ದೇಶದಲ್ಲಿ ಸದ್ಯ ದಿನದಿಂದ ದಿನಕ್ಕೆ ಕೊರೊನಾ ಹಾವಳಿ ಹೆಚ್ಚಾಗುತ್ತಿದೆ. ಆದರೆ, ನವೆಂಬರ್ ವೇಳೆಗೆ…

ಕೊರೋನಾ ಕಾವ್ಯ-4

ಇವತ್ತಿನ ಕೊರೋನಾ ಕಾವ್ಯ ಸರಿಣಿಗೆ ಕವನ ಕಳುಹಿಸಿದವರು ಮಂಗಳಗೌರಿ ಹಿರೇಮಠ, ಮಂಗಳಗೌರಿ ಹಿರೇಮಠ ಇವರು ಗದಗನ ಬಸವೇಶ್ವರ ನಗರದವರು, ಸಾಹಿತ್ತಿಕವಾಗಿ ಅಭಿರುಚಿ ಉಳ್ಳ ಮಂಗಳಗೌರಿ ಅವರು ಸಾಕಷ್ಟು ಕವತೆಗಳನ್ನು ರಚಿಸಿದ್ದಾರೆ. ಊಹಿಸದೇ ಬಂದ ಘಳಿಗೆಯನ್ನು ಕೊರೋನಾದ ಈ ಸಂಕಷ್ಟ ಕಾಲದಲ್ಲಿ ಹದವಾಗಿ ಕಟ್ಟಿಕೊಟ್ಟಿದ್ದಾರೆ.

ಗಜೇಂದ್ರಗಡ: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣಾ ಫಲಿತಾಂಶ 

ಗಜೇಂದ್ರಗಡ: ತೀವೃ ಕುತೂಹಲ ಕೆರಳಿಸುವುದಲ್ಲದೇ, ಪೈಪೋಟಿಗೆ ಕಾರಣವಾಗಿದ್ದ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣಾ ಫಲಿತಾಂಶ ಮಂಗಳವಾರ ರಾತ್ರಿ ಪ್ರಕಟವಾಗಿದೆ.