ಬೆಂಗಳೂರು: ಇತ್ತಿಚೆಗಷ್ಟೆ ನಿಧನ ಹೊಂದಿದ ನಟ ಚಿರಂಜೀವಿ ಸರ್ಜಾ ಬಹುಬೇಗ ಮರೆಯುವಂತಹ ನಟನಲ್ಲ. ಅದರಲ್ಲೂ 10 ವರ್ಷದಿಂದ ಪ್ರೀತಿಸಿ ಮದುವೆಯಾದ ಮಡದಿಯ ಪಾಡು ಏನಾಗಿರಬೇಡ. ಇನ್ನು ವಿಚಿತ್ರ ಎಂದರೆ ಚಿರು ಪತ್ನಿ ಮೇಘನಾ ಈಗ ಗರ್ಭೀಣಿ ಇಂಥ ಸಂದರ್ಭದಲ್ಲಿ ಪತಿಯ ಅಗಲಿಕೆಯ ದುಖ: ಸಹಿಸುವುದು ಹೇಗೆ? ಇಂದು ಪತಿ ಚಿರು ನೆನೆದು ಮೇಘನಾ ಭಾವನಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ. ಮೇಘನ ಬರೆದ ಪ್ರತಿ ಪದಗಳು ಎಂಥ ಕಲ್ಲು ಹೃದಯವನ್ನು ಕರಗಿಸುವಂತಿದೆ.

ಮೇಘನಾ ಮಾಡಿದ ಟ್ವೀಟ್
ಚಿರು ಬಾರಿ-ಬಾರಿ ಯತ್ನಿಸಿದರು ನನ್ನ ಮನದಾಳದ ಮಾತನ್ನು ಪದಗಳಲ್ಲಿ ವರ್ಣಿಸಲಾಗದ ಪರಿಸ್ಥಿತಿ ನನ್ನದು. ನಿನ್ನ ಮೇಲಿನ ಪ್ರೀತಿ, ಹುಚ್ಚು ವಿಶ್ವಾಸದ ಬಗ್ಗೆ ಮಾತನಾಡಲು ಶಬ್ಧಕೋಶದಲ್ಲಿ ಪದಗಳೇ ಸಾಲುತ್ತಿಲ್ಲ. ನನ್ನ ಸ್ನೇಹಿತ, ನನ್ನ ಪ್ರೇಮಿ, ನನ್ನ ಹಿತೈಷಿ, ನನ್ನ ಮಗು, ನನ್ನ ಸರ್ವಸ್ವ, ನನ್ನ ಪತಿ. ನೀನು ಇದೆಲ್ಲದಕ್ಕಿಂತ ಹೆಚ್ಚು. ನೀನು ನನ್ನ ಆತ್ಮದ ಅರ್ಧ ಭಾಗ ಚಿರು.
ಪ್ರತಿ ದಿನ ನಮ್ಮ ಮನೆಯ ಬಾಗಿಲು ನೋಡುತ್ತ.. ಅಗೋ ನೀ ಬಂದೇ ಬಿಟ್ಟೆ, ನಾ ಮನೆಗೆ ಬಂದೆ ಅಂತ ಹೇಳುತ್ತ ನೀನು ಬಂದೇ ಬಿಡುವೆ ಎಂಬ ಒಂದು ಆಸೆ. ನೀ ಬರದಿದ್ದಾಗ ನನ್ನ ಆತ್ಮವನ್ನೆ ಸುಡುವಂತ ಒಂದು ನೋವು ನನ್ನಲ್ಲಿ. ಪ್ರತಿದಿನದ ಪ್ರತಿಕ್ಷಣ ನಿನ್ನನ್ನು ಸ್ಪರ್ಷಿಸಲಾಗದೇ ನನ್ನ ಕಾಲ್ಕೆಳಗಿನ ಭೂಮಿ ಕುಸಿಯುವಂತೆ ಒಂದು ನಡುಕ. ಸಾವಿರ ಬಾರಿ ನಿಧಾನವಾಗಿ ನೋವಿನಿಂದ ಸಾಯುವಂತೆ. ಪ್ರತಿ ಬಾರಿ ನಾನು ನೋವುಂಡಾಗ, ಪ್ರತಿ ಬಾರಿ ನಾನು ಕಣ್ಣೀರು ಹಾಕಿದಾಗ ದೈವತೀತ ಅದ್ಭುತದಂತೆ ನೀನು ಇಲ್ಲೆ ನನ್ನ ಸುತ್ತ ನಿನ್ನ ಪ್ರೀತಿಯ ರಕ್ಷಾ ಕವಚದಲ್ಲಿ ಆರೈಕೆ ಮಾಡುತ್ತಿರುವ ಭಾವನೆ ನನಗೆ. ಸದಾಕಾಲ ನನ್ನ ರಕ್ಷಿಸುತ್ತಿರುವ ಕಾವಲು ದೈವ.
ಎಷ್ಟು ಅಪಾರ ನಿನ್ನ ಪ್ರೀತಿ, ನನ್ನನ್ನು ಒಂಟಿಯಾಗಿ ಬಿಟ್ಟು ಹೋಗಲು ಮನಸಾಗಲಿಲ್ಲ ನಿನಗೆ. ಹೋಗುತ್ತ ನಮ್ಮ ಪ್ರೀತಿಯ ಸಂಕೇತವಾಗಿ ಒಂದು ಪುಟ್ಟ ಹರುಷವನ್ನು ನನಗೆ ಕೊಟ್ಟು ಹೋಗಿದ್ದಿಯಾ. ಈ ಕಾಣಿಕೆಗೆ ನಾನು ಚಿರ ಋಣಿ. ನಮ್ಮ ಈ ಪುಟ್ಟ ಹರುಷವನ್ನು ಭೂಮಿಗೆ ತರಲು ಕಾತುರ ನನಗೆ. ಮಗುವಾಗಿ ನಿನ್ನ ಮತ್ತೆ ಮುದ್ದಿಸುವ ಕಾತುರ. ನಿನ್ನ ಚಿರುನಗೆಯ ನೋಡುವ ಕಾತುರ. ನೀನಿದ್ದಲ್ಲೆಲ್ಲ ಬೆಳಕು ಚೆಲ್ಲುತ್ತಿದ್ದ, ಎಲ್ಲರನ್ನು ಹರ್ಷಿಸುತ್ತಿದ್ದ ಆ ನಗು ಮತ್ತೊಮ್ಮೆ ಕೇಳೊ ಕಾತುರ. ನೀನು ಮತ್ತೆ ಬರುವ ವೇಳೆಗಾಗಿ ನಾನು ಕಾಯುವೆ. ನೀ ನನಗಾಗಿ ಕಾಯು ದಿಗಂತದ ಆ ಬದಿಯಲಿ. ನನ್ನ ಕೊನೆಯ ಉಸಿರು ಇರುವವರೆಗೂ ನೀನು ಚಿರಂಜೀವಿ. ನೀನು ‌ನನ್ನಲ್ಲೆ ಇರುವೆ.

Leave a Reply

Your email address will not be published. Required fields are marked *

You May Also Like

ನಗರಸಭೆ ಚುನಾವಣೆ :ವಾರ್ಡ ನಂ22ರ ಕಾಂಗ್ರೇಸ್ ಅಭ್ಯರ್ಥಿ ಪರ ಮಾಜಿ ಶಾಸಕ ಡಿ ಆರ್ ಪಾಟೀಲ ಗಂಗಿಮಡಿಯಲ್ಲಿ ಪ್ರಚಾರ

ಗದಗ:ನಗರಸಭೆ ಚುನಾವಣೆ ಡಿ. 20-12-2021 ರಂದು ವಾರ್ಡ್ ನಂ 22 ರ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾದ…

ಡ್ರಗ್ಸ್ ಮಾಫಿಯಾ – ವಿಚಾರಣೆಗೆ ಹಾಜರಾದ ನಿರೂಪಕಿ ಅನುಶ್ರೀ!

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೂಪಕಿ ಹಾಗೂ ಕಿರುತೆರೆ ನಟಿ ಅನುಶ್ರೀ ಅವರು ಇಂದು ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗಿದ್ದಾರೆ.

ಸೇವಾಭಾಯಾ ಮಾಲಾಧಾರಿತ ಬಂಜಾರಾ ಪಡೆ ಭಾಯಾಗಡದತ್ತ ಪಯಣ

ಆಲಮಟ್ಟಿ : ಸಂತ ಸೇವಾಲಾಲ್ ಜನ್ಮಸ್ಥಳ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಪುರಾತನ ಐತಿಹ್ಯವುಳ್ಳ ಧಾಮಿ೯ಕ…

ನಿಗದಿತ ದಿನಾಂಕದಂದೇ ನಡೆಯಲಿದೆ ಎಸ್ಎಸ್ಎಲ್ಸಿ ಪರೀಕ್ಷೆ: ಸುಪ್ರೀಂ ಹಸಿರು ನಿಶಾನೆ

ದೆಹಲಿ/ಬೆಂಗಳೂರು: ಜೂ. 25 ರಿಂದ ಜುಲೈ 4ರವರೆಗೆ ರಾಜ್ಯದಲ್ಲಿ SSLC ಪರೀಕ್ಷೆ ನಿಗದಿಯಂತೆ ನಡೆಯಲಿದೆ. ಕೊರೋನಾ…