ನವದೆಹಲಿ: ಲಡಾಖ್ ನ ಗಡಿಯಲ್ಲಿ ಚೀನಾ – ಭಾರತದ ಸಂಬಂಧ ಉದ್ವಿಗ್ನ ಪರಿಸ್ಥಿತಿಗೆ ಬಂದು ನಿಂತಿದೆ. ಹೀಗಾಗಿ ಗಡಿ ಪ್ರದೇಶದ ಮುಂಚೂಣಿ ಪ್ರದೇಶಗಳಲ್ಲಿ ಭೂಸೇನೆ, ವಾಯುಪಡೆ, ನೌಕಾಪಡೆಗಳು ಸನ್ನದ್ಧ ಸ್ಥಿತಿಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ.

ಇದರೊಂದಿಗೆ ಸೂಕ್ಷ್ಮ ಪ್ರದೇಶಗಳಲ್ಲಿ ಕೂಡ ಹೆಚ್ಚಿನ ಸೇನೆ ರವಾನಿಸಲಾಗಿದೆ. ಹಿಂದು ಮಹಾಸಾಗರ ಪ್ರದೇಶದಲ್ಲಿ ಚೀನಾ ನೌಕಾಪಡೆ ಬಂದು ಹೋಗುತ್ತಿದ್ದು, ಈ ಪ್ರದೇಶಗಳಲ್ಲಿ ನೌಕಾಪಡೆಗೆ ಸನ್ನದ್ಧವಾಗಿ ನಿಲ್ಲುವಂತೆ ಸೂಚಿಸಲಾಗಿದೆ.

ರಕ್ಷಣಾ ಸಚಿವ ರಾಜನಾಥ್ ಮತ್ತು ಮೂರು ಸೇನಾಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ನಡುವಣ ಉನ್ನತ ಮಟ್ಟದ ಸಭೆಯ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅರುಣಾಚಲಪ್ರದೇಶ, ಹಿಮಾಚಲಪ್ರದೇಶ, ಉತ್ತರಾಖಂಡ ಮತ್ತು ಲಡಾಖ್ ನಲ್ಲಿನ ಮುಂಚೂಣಿ ಸೇನಾ ಪ್ರದೇಶಗಳಿಗೆ ಹೆಚ್ಚಿನ ಯೋಧರನ್ನು ರವಾನಿಸುವ ಮೂಲಕ ಪರಿಸ್ಥಿತಿ ಎದುರಿಸಲು ಸೇನೆ ಸಿದ್ಧತೆ ನಡೆಸಿದೆ.

Leave a Reply

Your email address will not be published.

You May Also Like

ರೈತ ಸತ್ತಿರುವುದನ್ನು ಕಂಡರೂ ಭಾಷಣ ಮುಂದುವರೆಸಿದ ಬಿಜೆಪಿ ನಾಯಕರು!

ಖಾಂಡ್ವಾ : ಭಾಷಣ ಕೇಳಲು ಬಂದ ರೈತರೊಬ್ಬರು ಹೃದಯಾಘಾತದಿಂದ ಕಣ್ಣೆದುರೇ ಸಾವನ್ನಪ್ಪಿದ್ದರೂ ಬಿಜೆಪಿ ನಾಯಕರು ಭಾಷಣ ಮಾಡಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಸ್ಪಾ ಹೆಸರಿನಲ್ಲಿ ಸೆಕ್ಸ್ ದಂಧೆ…ಗ್ರಾಹಕರ ವೇಷದಲ್ಲಿ ಹೋಗಿದ್ದ ಪೊಲೀಸರಿಗೆ ಶಾಕ್!

ಜೈಪುರ : ಸ್ಪಾ, ಮಸಾಜ್ ಶಾಪ್ ಗೆ ದಾಳಿ ಮಾಡಿದ ಪೊಲೀಸರು, ವೇಶ್ಯಾವಾಟಿಕೆಯ ಜಾಲ ಬಯಲಿಗೆ ಎಳೆದಿದ್ದಾರೆ.

ಕೊರೊನಾ ಮಧ್ಯೆಯೇ ಚಿತ್ರದ ಮುಹೂರ್ತ ಫಿಕ್ಸ್!

ಲಾಕ್ ಡೌನ್ ನಿಂದಾಗಿ ಬಿಡುವು ಪಡೆದಿದ್ದ ಸೆನ್ಸಾರ್ ಮಂಡಳಿ ಸದ್ಯ ಮತ್ತೆ ಕೆಲಸ ಆರಂಭಿಸಿದೆ. ಅಲ್ಲದೇ, ಚಿತ್ರರಂಗ ಕೂಡ ತನ್ನ ಕೆಲಸ ಪ್ರಾರಂಭಿಸಿದೆ.