ಗಡಿಯಲ್ಲಿ ಉದ್ವಿಗ್ನ – ಸನ್ನದ್ಧವಾಗಿ ಗಡಿ ಕಾಯುತ್ತಿರುವ ಮೂರು ಪಡೆಗಳು!

ನವದೆಹಲಿ: ಲಡಾಖ್ ನ ಗಡಿಯಲ್ಲಿ ಚೀನಾ – ಭಾರತದ ಸಂಬಂಧ ಉದ್ವಿಗ್ನ ಪರಿಸ್ಥಿತಿಗೆ ಬಂದು ನಿಂತಿದೆ. ಹೀಗಾಗಿ ಗಡಿ ಪ್ರದೇಶದ ಮುಂಚೂಣಿ ಪ್ರದೇಶಗಳಲ್ಲಿ ಭೂಸೇನೆ, ವಾಯುಪಡೆ, ನೌಕಾಪಡೆಗಳು ಸನ್ನದ್ಧ ಸ್ಥಿತಿಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ.

ಇದರೊಂದಿಗೆ ಸೂಕ್ಷ್ಮ ಪ್ರದೇಶಗಳಲ್ಲಿ ಕೂಡ ಹೆಚ್ಚಿನ ಸೇನೆ ರವಾನಿಸಲಾಗಿದೆ. ಹಿಂದು ಮಹಾಸಾಗರ ಪ್ರದೇಶದಲ್ಲಿ ಚೀನಾ ನೌಕಾಪಡೆ ಬಂದು ಹೋಗುತ್ತಿದ್ದು, ಈ ಪ್ರದೇಶಗಳಲ್ಲಿ ನೌಕಾಪಡೆಗೆ ಸನ್ನದ್ಧವಾಗಿ ನಿಲ್ಲುವಂತೆ ಸೂಚಿಸಲಾಗಿದೆ.

ರಕ್ಷಣಾ ಸಚಿವ ರಾಜನಾಥ್ ಮತ್ತು ಮೂರು ಸೇನಾಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ನಡುವಣ ಉನ್ನತ ಮಟ್ಟದ ಸಭೆಯ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅರುಣಾಚಲಪ್ರದೇಶ, ಹಿಮಾಚಲಪ್ರದೇಶ, ಉತ್ತರಾಖಂಡ ಮತ್ತು ಲಡಾಖ್ ನಲ್ಲಿನ ಮುಂಚೂಣಿ ಸೇನಾ ಪ್ರದೇಶಗಳಿಗೆ ಹೆಚ್ಚಿನ ಯೋಧರನ್ನು ರವಾನಿಸುವ ಮೂಲಕ ಪರಿಸ್ಥಿತಿ ಎದುರಿಸಲು ಸೇನೆ ಸಿದ್ಧತೆ ನಡೆಸಿದೆ.

Exit mobile version