ಬೀಜಿಂಗ್: ಚೀನಾದಲ್ಲಿ ಮತ್ತೊಮ್ಮೆ ಕೊರೊನಾ ಅಲೆ ಶುರುವಾಗಿದೆ. ಹುಟ್ಟು ಪಡೆದಿರುವ ಬೀಜಿಂಗ್ ನಲ್ಲಿಯೇ ಸದ್ಯ ಅದರ ಹಾವಳಿ ಮುಂದುವರೆದಿದೆ. ನಗರದಲ್ಲಿ ಹೊಸದಾಗಿ 27 ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ತಪಾಸಣೆ ಹೆಚ್ಚಾಗಿದೆ.
ಕ್ಸಿನ್‌ಫದಿ ಹೋಲ್‌ಸೇಲ್ ಆಹಾರ ಮಾರುಕಟ್ಟೆಯಿಂದ ಕೊರೊನಾದ ಎರಡನೇ ಹಂತ ಆರಂಭವಾಗಿದೆ. ಪ್ರಕರಣಗಳು ಪತ್ತೆಯಾದ ಆರಂಭದಲ್ಲೇ ಲಾಕ್‌ಡೌನ್ ವಿಧಿಸಲಾಗಿತ್ತು ಹೀಗಾಗಿ ಸೋಂಕು ನಿಯಂತ್ರಣಕ್ಕೆ ಬಂದಿತ್ತು. ಸದ್ಯ ಮತ್ತೊಂದು ಅಲೆ ಶುರುವಾಗಿದೆ.

ಕಳೆದ 5 ದಿನಗಳಲ್ಲಿ ಚೀನಾದ ಬೀಜಿಂಗ್ ನಲ್ಲಿ 106 ಪ್ರಕರಣಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಹಲವು ಪ್ರದೇಶಗಳನ್ನು ಲಾಕ್ ಡೌನ್ ಮಾಡಲಾಗಿದೆ. ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆಯು ಬೀಜಿಂಗ್‌ನಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಕುರಿತು ಎಚ್ಚರಿಕೆ ನೀಡಿದೆ. ಅಲ್ಲಿರುವ ಆಹಾರ ಮಾರುಕಟ್ಟೆ, ಹೋಟೆಲ್, ರೆಸ್ಟೋರೆಂಟ್ ಸೇರಿದಂತೆ ಎಲ್ಲೆಡೆ ಮಾಲೀಕರು, ಮ್ಯಾನೇಜರ್‌ಗಳನ್ನು ಪರೀಕ್ಷೆಗೊಳಪಡಿಸಲಾಗಿದೆ.

Leave a Reply

Your email address will not be published. Required fields are marked *

You May Also Like

ಇ-ರ‌್ಯಾಲಿ ಪರಿಣಾಮ: 25 ಬಿಜೆಪಿ ಲೀಡರ್ಸ್ ಪಾಸಿಟಿವ್

ಪಾಟ್ನಾ: ಬಿಜೆಪಿಯ ಪಾಟ್ನಾ ಕೇಂದ್ರ ಕಚೇರಿಯಲ್ಲಿ ಆತಂಕ ಶುರುವಾಗಿದೆ. ರಾಜ್ಯ ಸಂಘಟನಾ ಕಾರ್ಯದರ್ಶಿ ನಾಗೇಂದ್ರನಾಥ್, ಪ್ರಧಾನ ಕಾರ್ಯದರ್ಶಿ ದೇವೇಶ್ಕುಮಾರ್ ಮತ್ತು ರಾಜ್ಯ ಬಿಜೆಪಿ ಉಪಾಧ್ಯಕ್ಷ

ಕೊರೋನಾ ಸಂಕಷ್ಟ ವಲಸಿಗರ ವಿಚಾರದಲ್ಲೂ ರಾಜಕಾರಣ..!

ಅಣ್ಣಾ ನಾನು ಊರಿಗೆ ಬರ್ತಿನಿ, ಬೇಕಾದ್ರೆ ಕ್ವಾರೈಂಟೈನ್ ನಲ್ಲಾದ್ರು ಇರ್ತಿನಿ ಆದ್ರೆ ಊರಿಗೆ ಬಂದ್ರೆ ಸಾಕು ಅನ್ನಿಸ್ತಿದೆ, ಹೇಗಾದ್ರು ಮಾಡಿ ನನ್ನನ್ನು ಕರಿಸಿಕೋ ಎನ್ನುವ ಮೊಬೈಲ್ ಕರೆಗಳೀಗ ಸಾಮಾನ್ಯವಾಗಿವೆ. ನಮಗೆ ಒಂದೊತ್ತಿನ ಊಟಕ್ಕೂ ಪರದಾಟವಿದೆ. ದುಡಿಯುವ ಕೈಗಳಿಗೆ ಕೆಲಸವೇ ಇಲ್ಲದೇ ನಾವು ಪರದಾಡುತ್ತಿದ್ದೇವೆ ಬೇಗ ನಮ್ಮನ್ನು ಊರಿಗೆ ಕರೆಸಿಕೊಳ್ಳಿ ಎನ್ನುವ ಅಂಗಲಾಚುವ ಧ್ವನಿ. ಒಂದೆಡೆ ಕಾರ್ಮಿಕರ ಗೋಳು ಮತ್ತೊಂದೆಡೆ ತಮ್ಮ ದೇಹವನ್ನೆ ಬಂಡವಾಳವಾಗಿಸಿಕೊಂಡು ಮುಂಬೈ-ಪುಣೆಯನ್ನೆ ಆಶ್ರಯಿಸಿಕೊಂಡಿದ್ದ ಲೈಂಗಿಕ ಕಾರ್ಯಕರ್ತೆಯರು ಒಪ್ಪತ್ತಿನೂಟಕ್ಕೆ ಪಡುತ್ತಿರುವ ಗೋಳಾಟ ಅಷ್ಟಿಷ್ಟಲ್ಲ.

ಮಹಾಮಾರಿಗೆ ತತ್ತರಿಸಿದ ಮಹಾರಾಷ್ಟ್ರ- ನಿನ್ನೆ ಒಂದೇ ದಿನ ಎಷ್ಟು ಕೇಸ್ ಗಳು ಗೊತ್ತಾ?

ಮುಂಬಯಿ : ಕೊರೊನಾ ಹಾಟ್ ಸ್ಪಾಟ್ ಎಂದೇ ಕುಖ್ಯಾತಿ ಪಡೆದಿರುವ ಮಹಾರಾಷ್ಟ್ರದಲ್ಲಿ ನಿನ್ನೆ ಒಂದೇ ದಿನ…

ರಾಜ್ಯದಲ್ಲಿನ ಗೆಲುವಿಗೆ ಸಂತಸ ವ್ಯಕ್ತಪಡಿಸಿದ ಪ್ರಧಾನಿ!

ನವದೆಹಲಿ : ರಾಜ್ಯದಲ್ಲಿ ಎರಡು ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಭರ್ಜರಿಯಾಗಿ ಜಯ ಗಳಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಕನ್ನಡದಲ್ಲಿಯೇ ಟ್ವೀಟ್ ಮಾಡುವ ಮೂಲಕ ಹರ್ಷ ವ್ಯಕ್ತಪಡಿಸಿ, ಮತದಾರರಿಗೆ ಧನ್ಯವಾದ ಅರ್ಪಿಸಿದ್ದಾರೆ.