ಚೀನಾದಲ್ಲಿ ಶುರುವಾಗಿದೆ ಕೊರೊನಾ ಎರಡನೇ ಅಲೆ!

ಬೀಜಿಂಗ್: ಚೀನಾದಲ್ಲಿ ಮತ್ತೊಮ್ಮೆ ಕೊರೊನಾ ಅಲೆ ಶುರುವಾಗಿದೆ. ಹುಟ್ಟು ಪಡೆದಿರುವ ಬೀಜಿಂಗ್ ನಲ್ಲಿಯೇ ಸದ್ಯ ಅದರ ಹಾವಳಿ ಮುಂದುವರೆದಿದೆ. ನಗರದಲ್ಲಿ ಹೊಸದಾಗಿ 27 ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ತಪಾಸಣೆ ಹೆಚ್ಚಾಗಿದೆ.
ಕ್ಸಿನ್‌ಫದಿ ಹೋಲ್‌ಸೇಲ್ ಆಹಾರ ಮಾರುಕಟ್ಟೆಯಿಂದ ಕೊರೊನಾದ ಎರಡನೇ ಹಂತ ಆರಂಭವಾಗಿದೆ. ಪ್ರಕರಣಗಳು ಪತ್ತೆಯಾದ ಆರಂಭದಲ್ಲೇ ಲಾಕ್‌ಡೌನ್ ವಿಧಿಸಲಾಗಿತ್ತು ಹೀಗಾಗಿ ಸೋಂಕು ನಿಯಂತ್ರಣಕ್ಕೆ ಬಂದಿತ್ತು. ಸದ್ಯ ಮತ್ತೊಂದು ಅಲೆ ಶುರುವಾಗಿದೆ.

ಕಳೆದ 5 ದಿನಗಳಲ್ಲಿ ಚೀನಾದ ಬೀಜಿಂಗ್ ನಲ್ಲಿ 106 ಪ್ರಕರಣಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಹಲವು ಪ್ರದೇಶಗಳನ್ನು ಲಾಕ್ ಡೌನ್ ಮಾಡಲಾಗಿದೆ. ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆಯು ಬೀಜಿಂಗ್‌ನಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಕುರಿತು ಎಚ್ಚರಿಕೆ ನೀಡಿದೆ. ಅಲ್ಲಿರುವ ಆಹಾರ ಮಾರುಕಟ್ಟೆ, ಹೋಟೆಲ್, ರೆಸ್ಟೋರೆಂಟ್ ಸೇರಿದಂತೆ ಎಲ್ಲೆಡೆ ಮಾಲೀಕರು, ಮ್ಯಾನೇಜರ್‌ಗಳನ್ನು ಪರೀಕ್ಷೆಗೊಳಪಡಿಸಲಾಗಿದೆ.

Exit mobile version