ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಹಾವಳಿ ಮುಂದುವರೆದಿದ್ದು, ಮತ್ತೊಮ್ಮೆ ಲಾಕ್ ಡೌನ್ ಆಗಬಹುದೇ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ.

ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ಅವಶ್ಯಕತೆ ಒದಗಿ ಬಂದಿಲ್ಲ. ಹೀಗಾಗಿ ಲಾಕ್ ಡೌನ್ ಘೋಷಣೆ ಮಾಡುವುದಿಲ್ಲ. ನಾಳೆ ಪ್ರಧಾನಿ ಮೋದಿ ಅವರೊಂದಿಗೆ ವಿಡಿಯೊ ಕಾನ್ಫರೆನ್ಸ್‌ ಇದೆ. ಜನರು ಜೀವನ ನಡೆಸಲು ಅನುಕೂಲ ಮಾಡಿ ಕೊಡಲು ಹಾಗೂ ಆರ್ಥಿಕ ಸುಧಾರಣೆಗೆ ಅವಕಾಶ ಮಾಡಿಕೊಡುವಂತೆ ಪ್ರಧಾನಿಗಳಲ್ಲಿ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ಕೊರೊನಾದಿಂದ ರಾಜ್ಯ ಮುಕ್ತವಾಗಬೇಕು. ಎಲ್ಲ ಸಂಗತಿಯಿಂದ ಜನರು ಮುಕ್ತವಾಗಿ ನೆಮ್ಮದಿಯ ಜೀವನ ನಡೆಸಬೇಕು. ರಾಜ್ಯದಲ್ಲಿ ಹಣಕಾಸಿನ ಪರಿಸ್ಥಿತಿ ಸರಿ ಇಲ್ಲ. ಆದರೂ ರೂ. 1000 ಕೋಟಿ ಬಿಡುಗಡೆ ಮಾಡಿದ್ದೇನೆ. ರೈತರಿಗೆ ರೂ. 2000 ಕೊಡುವ ಯೋಜನೆಗೆ ಹಣ ಬಿಡುಗಡೆ ಮಾಡಲಾಗಿದೆ. ಇದರಿಂದ ರಾಜ್ಯದ 50 ಲಕ್ಷ ರೈತರಿಗೆ ಅನುಕೂಲ ಆಗಲಿದೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

You May Also Like

ವಲಸೆ ಕಾರ್ಮಿಕರಿಗೆ ವಸತಿ ಸೌಕರ್ಯ: 2 ಎಕರೆ ನಿವೇಶನ ವ್ಯವಸ್ಥೆಗೆ ಚಿಂತನೆ

ಹೊರರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಉದ್ಯೋಗ ಅರಸಿ ಮಂಗಳೂರಿಗೆ ಆಗಮಿಸುವ ಕಾರ್ಮಿಕರಿಗೆ ಸೂಕ್ತ ವಸತಿ ವ್ಯವಸ್ಥೆಯನ್ನು ಸರಕಾರದ ವತಿಯಿಂದಲೇ ಮಾಡಿ ಕೊಡಲು ನಿರ್ಧರಿಸಲಾಗಿದ್ದು, ಯೋಜನೆ ಸಿದ್ಧಪಡಿಸಲಾಗುತ್ತಿದೆ.

VTU ಸೇರದಂಗ ಉಳಿದ್ ವಿದ್ಯಾರ್ಥಿಗಳು ಹೇಳೋದ್ ಹಂಗ…! ಆದ್ರ ನಮ್ ಸಿಎಂ ಸಿಎಂ ಹೇಳಿದ್ದ ಏನು..??

ಹಲೋ ಎಲ್ಲಿದಿಲೇ ಚೇತ್ಯಾ..!, ಅಂದ್ಹಂಗ ನಿನ್ನೇ ನಮ್ಮ ಸಿಎಂ ಸಾಹೇಬ್ರು ಉನ್ನತ ಶಿಕ್ಷಣ ಇಲಾಖೆ ಪ್ರಗತಿ ಪರಿಶೀಲನಾ ಮಾಡ್ಯಾರಂತ. ಒಂದೀಟು ಪೇಪರ್ ಹಣಿಕ್ಯಾಕಿ ನೋಡಲ್ಲ, ನಮ್ದೇನಾರಾ ಬಂದೈತೇನಾ ಅಂತಾ ಜುವೆಲ್, ಚೇತನ್ ಗೆ ಕಾಲ್ ಮಾಡಿದ್ದ.

ಹುಚ್ಚ ವೆಂಕಟ್ ಗೆ ಸಹಾಯ ಹಸ್ತ ಚಾಚಿದ ಕಿಚ್ಚ ಸುದೀಪ್!

ಬೆಂಗಳೂರು: ಹುಚ್ಚ ವೆಂಕಟ್ ಮಾನಸಿಕ ಸಮತೋಲನ ಕಳೆದುಕೊಂಡ ಕಾರಣ ರಸ್ತೆಯಲ್ಲಿ ಬಾಯಿಗೆ ಬಂದಂತೆ ಮಾತನಾಡಿ ಓಡಾಡುತ್ತಿದ್ದಾರೆ.…

ಆಲಮಟ್ಟಿ ಗಾರ್ಡನ್ ದಲ್ಲಿ ನಂದಿನಿ ಮಿಲ್ಕ್ ಪಾರ್ಲರ್ ಉದ್ಘಾಟನೆ

ಆಲಮಟ್ಟಿ : ಇಲ್ಲಿನ ಬಹು ವೈವಿಧ್ಯಮಯ ನಾನಾ ಬಗೆಯ ಉದ್ಯಾನವನಗಳ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯದ…