ಗದಗ: ಪಟ್ಟಣ ಪಂಚಾಯತಿ ಕಾಂಪೌಂಡ್ ಪಕ್ಕದಲ್ಲಿಯೇ ಉದ್ಯಾನವನ ಇದ್ದರು. ಸಹ ಇಲ್ಲಿನ ಮುಖ್ಯಾಧಿಕಾರಿ , ಸಿಬ್ಬಂದಿಗಳ ಕಣ್ಣಿಗೆ ಇದು ಕಾಣುತ್ತಿಲ್ಲ. 12 ವರ್ಷಗಳಿಂದ ದುರಸ್ತಿ ಹಾಗೂ ಅಭಿವೃದ್ಧಿ ನೆಪದಲ್ಲಿ ಬಿಲ್ ಮಾತ್ರ ಎತ್ತಲಾಗುತ್ತಿದೆ ಎನ್ನುವ ಆರೋಪವೂ ಕೇಳಿ ಬಂದಿದೆ. ಆದರೆ ಉದ್ಯಾನವನ ಮಾತ್ರ ಅಭಿವೃದ್ಧಿಯಾಗಿಲ್ಲ.
ಇದು ಐತಿಹಾಸಿಕ ಭೂಥನಾತೇಶ್ವರ ದೇವಾಲಯದ ಹಾಗೂ ಐತಿಹಾಸಿಕ ಹಿರೇಕೆರೆ ದಂಡೆಯ ಮೇಲಿನ ಉದ್ಯಾನವನ.
ಸಮೀಪದಲ್ಲಿರುವ ಕೆರೆಯಲ್ಲಿ ನೀರು ಇದ್ದರು ಸಹ ದಂಡೆಯ ಮೇಲೆ ಗಿಡಗಳನ್ನು ಬೆಳಸಲಾಗಿಲ್ಲ.
ಸಾರ್ವಜನಿಕರ ಜನ ಹಣ ದುರಸ್ಥಿ ನೆಪದಲ್ಲಿ ಹಾಳಾಗಿದೆ. ಉದ್ಯಾನವನ ಅಭಿವೃದ್ಧಿಗೆ ಪಟ್ಟಣ ಪಂಚಾಯತಿ ಮುಂದಾಗಬೇಕಿದೆ. ಅಶೋಕ ಬೇವಿನಕಟ್ಟಿ, ಕಾಂಗ್ರೆಸ್ ಮುಖಂಡ ನರೆಗಲ್ಲ.
ದುರಸ್ತಿ ನೆಪದಲ್ಲಿ ಖರ್ಚು ಮಾಡಿದ ಲಕ್ಷಾಂತರ ರೂಪಾಯಿ ಪ್ರಯೋಜನಕ್ಕೆ ಬಾರದಂತಾಗಿದೆ.
ಇನ್ನಾದ್ರೂ ಪಟ್ಟಣ ಪಂಚಾಯತಿ ಈ ಬಗ್ಗೆ ಕಾಳಜಿ ವಹಿಸಿ ಉದ್ಯಾನವನ ಅಭಿವೃದ್ಧಿಗೆ ಮುಂದಾಗಬೇಕಿದೆ. ಈ ಮೂಲಕ ಪಟ್ಟಣ ಪಂಚಾಯತಿ ಪಕ್ಕದ ವಾತಾವರಣ ಹಸಿರಿನಿಂದ ಕಂಗೊಳಿಸುವಂತೆ ಮಾಡಲು ಶ್ರಮಿಸಬೇಕಿದೆ.
2 comments
ಮುಂದಿನ ದಿನಮಾನಗಳಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ನಮಗೆ ಅಧಿಕಾರ ಸಿಗುವುದನ್ನು ಕಾಯುತ್ತಿದ್ದೆವೆ ಇಂತಹ ಹಲವಾರು ಸಮಸ್ಯೆಗಳ ಪಟ್ಟಿ ಮಾಡಿಕೊಂಡಿದ್ದೆವೆ ಅವೆಲ್ಲವುಗಳನ್ನು ಕಾರ್ಯ ರೊಪ್ಪಕ್ಕೆ ತರುವ ಪ್ರಯತ್ನ ಮಾಡುತ್ತೆವೆ.
Computer