ಬೆಂಗಳೂರು: ಎನ್ ಆರ್ ಸಿ, ಸಿಎಎ ವಿರುದ್ಧದ ಪ್ರತಿಭಟನೆ ವೇಳೆ ಬೆಂಗಳೂರಿನಲ್ಲಿ ಪಾಕ್ ಪರ ಘೋಷಣೆ ಕೂಗಿ ಸೆರೆಮನೆ ಪಾಲಾಗಿದ್ದ ವಿದ್ಯಾರ್ಥಿನಿ ಅಮೂಲ್ಯ ಲಿಯೋನಾಗೆ ಕಡೆಗೂ ಜಾಮೀನು ಸಿಕ್ಕಿದ್ದು, ಅವರು ಬಿಡುಗಡೆಯಾಗಿದ್ದಾರೆ.
ಫೆ. 21ರಂದು ಬೆಂಗಳೂರಿನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಸಿಎಎ, ಎನ್ ಆರ್ ಸಿ ವಿರೋಧಿಸಿ ಬೃಹತ್ ಸಮಾವೇಶ ಆಯೋಜನೆಯಾಗಿತ್ತು. ಸಂಸದ ಅಸಾದುದ್ದಿನ್ ಓವೈಸಿ ಸೇರಿದಂತೆ ಅನೇಕ ಸಾಮಾಜಿಕ ಹೋರಾಟಗಾರರು ಸಮಾವೇಶದಲ್ಲಿ ಭಾಗಿಯಾಗಿದ್ದರು. ಈ ವೇಳೆ ಮೈಕ್ ಹಿಡಿದ ಅಮೂಲ್ಯ ಲಿಯೋನಾ ‘ಪಾಕಿಸ್ತಾನ್ ಜಿಂದಾಬಾದ್’ ಎಂದಿದ್ದರು. ಅವರು ಮುಂದುವರೆದು ಏನನ್ನೋ ಹೇಳು ಹೊರಟಿದ್ದರು. ಆದರೆ, ಸಂಘಟಕರು ಮತ್ತು ಸ್ವತಃ ಅಸಾದುದ್ದಿನ್ ಓವೈಸಿ ಅಮೂಲ್ಯ ಅವರಿಗೆ ಮುಂದೆ ಮಾತಾಡಲು ಅವಕಾಶವನ್ನು ನೀಡಿರಲಿಲ್ಲ.
ಮುಂದಿನ ಬೆಳವಣಿಗೆಯಲ್ಲಿ ಅವರನ್ನು ದೇಶದ್ರೋಹದ ಆರೋಪದಡಿ ಬಂಧಿಸಲಾಗಿತ್ತು. ಅನಂತರ ಅವರ ಜಾಮೀನು ಅರ್ಜಿ ತಿರಸ್ಕರಿಸಲಾಗಿತ್ತು. ಕಡೆಗೆ ಸಿ ಆರ್ ಪಿ ಸಿ ಸೆಕ್ಷನ್ 162 ಕಲಂ 2ರ ಅಡಿಯಲ್ಲಿ ಷರತ್ತುಬದ್ಧ ಜಾಮೀನನ್ನು ಅವರಿಗೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಬಿಡುಗಡೆ ಮಾಡಲಾಗಿದೆ.

Leave a Reply

Your email address will not be published. Required fields are marked *

You May Also Like

ಶಿರಹಟ್ಟಿ ಕಟ್ಟಿಗೆ ಅಡ್ಡೆ ಪ್ರಕರಣ: ಡಿಸಿ ಆದೇಶಕ್ಕೂ ಕಿಮ್ಮತ್ತು ಕೊಡದ ಶಿರಹಟ್ಟಿ ತಹಶೀಲ್ದಾರ್..!

ಈಗಾಗಲೇ ನಿಮ್ಮ ಉತ್ತರಪ್ರಭ ಶಿರಹಟ್ಟಿಯಲ್ಲಿನ ಕಟ್ಟಿಗೆ ಅಡ್ಡಗಳ ಕುರಿತು ಹಾಗೂ ಅಧಿಕಾರಿಗಳ ನಡೆ ಕುರಿತು 6 ಸರಣಿ ಲೇಖನವನ್ನು ಪ್ರಕಟಿಸಿದೆ.

ಹ್ಯಾಂಡ್ ಸಾನಿಟೈಸರ್ ಸ್ಪೋಟವಾಗುವುದು ನಿಜನಾ..?

ಆಲ್ಕೋಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಸರ್ ಸ್ವಯಂಪ್ರೇರಿತ ದಹನಕ್ಕೆ ಸಮರ್ಥವಾಗಿರುವುದಿಲ್ಲ ಎಂದು ತಿಳಿದುಬಂದಿದೆ.

ರಾಜ್ಯದಲ್ಲಿಂದು 187 ಕೊರೊನಾ ಪಾಸಿಟಿವ್: ಯಾವ ಜಿಲ್ಲೆಯಲ್ಲಿ ಎಷ್ಟು..?

ರಾಜ್ಯದಲ್ಲಿಂದು ಕೊರೊನಾ ಪಾಸಿಟಿವ್ 187 ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 3408ಕ್ಕೆ ಏರಿಕೆಯಾದಂತಾಗಿದೆ.

ಕೊಪ್ಪಳದಲ್ಲಿ ಇಂದು ವಿದ್ಯುತ್ ಶಾರ್ಟ್ ಸರ್ಕ್ಯೂಟ್

ಕೊಪ್ಪಳ: ಕೊಪ್ಪಳದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಅಂಗಡಿ ಸುಟ್ಟು ಹೊಗಿರುವ ಘಟನೆ ಇಂದು ಬೆಳಿಗ್ಗೆ…