ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿಯ ಈರಣ್ಣ ಕಡಾಡಿ, ಅಶೋಕ್ ಗಸ್ತಿ ರಾಜ್ಯಸಭೆಗೆ ಅವಿರೋಧ ಆಯ್ಕೆಯಾಗಿದ್ದಾರೆ.
ವಿಧಾನ ಸಭೆ ಕಾರ್ಯದರ್ಶಿ ಹಾಗೂ ರಾಜ್ಯಸಭಾ ಚುನಾವಣಾಧಿಕಾರಿ ಎಂ.ಕೆ.ವಿಶಾಲಾಕ್ಷಿ ಈ ವಿಷಯವನ್ನು ಘೋಷಿಸಿದರು. ಜೆಡಿಎಸ್ ನಿಂದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಕಾಂಗ್ರೆಸ್ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿಯಿಂದ ಅಶೋಕ್ ಗಸ್ತಿ, ಈರಣ್ಣ ಕಡಾಡಿ ಈ ಬಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಾಮಪತ್ರ ವಾಪಸ್ ಗೆ ಇಂದು ಕಡೆಯ ದಿನವಾಗಿತ್ತು. ಒಬ್ಬರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆದರೆ, ಅವರಿಗೆ ಸೂಚಕರ ಸಹಿ ಇರಲಿಲ್ಲ. ಆದ್ದರಿಂದ ಕಣದಲ್ಲಿ ಉಳಿದ ನಾಲ್ವರನ್ನೂ ಆಯ್ಕೆಯಾಗಿದ್ದಾರೆ ಎಂದು ಘೋಷಿಸಲಾಗಿದೆ.

Leave a Reply

Your email address will not be published. Required fields are marked *

You May Also Like

ಜನರ ಮನೆ ಬಾಗಿಲಿಗೆ ಜಿಲ್ಲಾಡಳಿತ

“ಜನರ ಮನೆ ಬಾಗಿಲಿಗೆ ಜಿಲ್ಲಾಡಳಿತ” ಎಂಬ ಘೋಷವಾಕ್ಯದೊಂದಿಗೆ ಮೊದಲ ಗ್ರಾಮವಾಸ್ತವ್ಯವನ್ನ ಗದಗ ಉಪವಿಭಾಗಧಿಕಾರಿ ರಾಯಪ್ಪ ಹುಣಸಿಗಿ ಅವರ ಅಧ್ಯಕ್ಷತೆಯಲ್ಲಿ ಗದಗ ತಾಲೂಕಿನ ಅಂತೂರ ಬೆಂತೂರ ಗ್ರಾಮದಲ್ಲಿ ಶನಿವಾರ ಬೆಳಿಗ್ಗೆ ಆರಂಭವಾಯಿತು.

ಗದಗ ಜಿಲ್ಲೆಯಲ್ಲಿ 2 ಸಾವಿರ ತೋಟ ನಿರ್ಮಾಣ ಗುರಿ: ಜಿ.ಪಂ ಅಧ್ಯಕ್ಷ ರಾಜೂಗೌಡ

ಗದಗ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 2 ಸಾವಿರ ಹೊಸ ತೋಟಗಳನ್ನು ನಿರ್ಮಿಸಲು ತೋಟಗಾರಿಕೆ ಅಧಿಕಾರಿಗಳು ಶ್ರಮಿಸಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾಜೂಗೌಡ ಕೆಂಚನಗೌಡ್ರ ಸೂಚಿಸಿದರು.

ಗದಗ ಜಿಲ್ಲೆ ರೈತರಿಗೆ ಬೆಳೆವಿಮೆ ಮಾಹಿತಿ : ಯಾವ ಊರಿಗೆ, ಯಾವ ಬೆಳೆಗೆ, ಎಷ್ಟು ವಿಮೆ ಸಿಗಲಿದೆ..?

ಗದಗ: ಕರ್ನಾಟಕ ಸರ್ಕಾರವು 2020-21 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭಿಮಾ(ವಿಮಾ) ಯೋಜನೆಯನ್ನು ಅನುಷ್ಟಾನಗೊಳಿಸಲು ಮಂಜೂರಾತಿ ನೀಡಿರುತ್ತದೆ. ಈ ಯೋಜನೆಯ ರೂಪರೇಷೆ ಮತ್ತು ವಿವರಗಳನ್ನು ಇಲ್ಲಿ ನೀಡಲಾಗಿದೆ.

ವಿಶ್ವ ಬ್ಯಾಂಕ್ ನಿಂದ ದೇಶಕ್ಕೆ 1 ಬಿಲಿಯನ್ ಯುಎಸ್ಡಿ ಡಾಲರ್ ನೆರವು

ಭಾರತ ಸರ್ಕಾರದ ಹಲವು ಯೋಜನೆಗಳನ್ನು ಪರಾಮರ್ಶಿಸಿ ಕೊರೋನಾ ಸಂಕಷ್ಟ ಕಾಲದಲ್ಲಿ ಇದೀಗ ವಿಶ್ವ ಬ್ಯಾಂಕ್ ಭಾರತದ ನೆರವಿಗೆ ಧಾವಿಸಿದೆ.