ಬೆಂಗಳೂರು: ನಟ ಪ್ರಕಾಶ್‌ ರೈಗೆ ದೇಶದ ಬಹುತೇಕ ಭಾಷೆಗಳ ಅಭಿಮಾನಿಗಳಿದ್ದಾರೆ. ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಯ ಪ್ರೇಕ್ಷಕರಿಗೂ ಪರಿಚಿತರು. ಸದ್ಯ ಇಂತಹ ನಟ ಧನುಷ್ ಅವರಿಗೆ ಕಂಗ್ರಾಟ್ಸ್ ಹೇಳಿದ್ದಾರೆ.

ತಮಿಳಿನಲ್ಲಿ ಪ್ರಕಾಶ್ ರೈ ನಿರೂಪಣೆಯಲ್ಲಿ ಮೂಡಿಬಂದಿದ್ದ ವೈಲ್ಡ್ ಕರ್ನಾಟಕ ಡಾಕ್ಯುಮೆಂಟರಿ ನೋಡಿ, ಖುಷಿಯಾದ ಧನುಷ್‌ ಅವರು ಪ್ರಕಾಶ್‌ಗೆ ಕಂಗ್ರಾಟ್ಸ್ ಹೇಳಿದ್ದಾರೆ. ಕರ್ನಾಟಕ ಅರಣ್ಯ ಇಲಾಖೆಯ ಆಶ್ರಯದಲ್ಲಿ ಅಮೋಘವರ್ಷ ಮತ್ತು ಕಲ್ಯಾಣ್‌ ವರ್ಮ ವೈಲ್ಡ್ ಕರ್ನಾಟಕ ಸಾಕ್ಷ್ಯಚಿತ್ರವನ್ನು ನಿರ್ಮಿಸಿದ್ದರು. ಹಲವು ವರ್ಷಗಳ ಶ್ರಮದಿಂದ ಈ ವೈಲ್ಡ್ ಕರ್ನಾಟಕ ಡಾಕ್ಯುಮೆಂಟರಿ ನಿರ್ಮಾಣಗೊಂಡಿತ್ತು. ಈ ಡಾಕ್ಯುಮೆಂಟರಿಗೆ ಆಯಾ ಭಾಷೆಗಳಿಂದ ಒಬ್ಬೊಬ್ಬ ಕಲಾವಿದರಿಂದ ನಿರೂಪಣೆ ಮಾಡಿಸಲಾಗಿತ್ತು.

ಈಗ ತಮಿಳಿನಲ್ಲಿ ನೋಡಿರುವ ಧನುಷ್, ಕರ್ನಾಟಕದ ಜೀವವೈವಿಧ್ಯತೆ ಬಗ್ಗೆ ಪ್ರಾದೇಶಿಕ ಭಾಷೆಗಳಾದ ತೆಲುಗು, ತಮಿಳಿನಲ್ಲಿ ನಿರೂಪಣೆ ಮಾಡಿದ್ದಕ್ಕೆ ನಿಮಗೆ ಕಂಗ್ರಾಟ್ಸ್ ಪ್ರಕಾಶ್ ರೈ ಸರ್.. ಎಂದು ಧನುಷ್ ಟ್ವೀಟ್ ಮಾಡಿದ್ದಾರೆ.

Leave a Reply

Your email address will not be published. Required fields are marked *

You May Also Like

ಜಾಲಿ ಮೂಡಲ್ಲಿರುವ ದಿಗಂತ್, ಐಂದ್ರಿತಾ!

ಬೆಂಗಳೂರು : ಚಂದನವನದ ಕ್ಯೂಟ್ ಕಪಲ್ ದೂದ್ ಪೇಡಾ ದಿಗಂತ್ ಮತ್ತು ನಟಿ ಐಂದ್ರಿತಾ ರೇ…

ನಾನು ಅಂದೇ ಹೇಳಿದ್ದೆ ಚಿರು ಮತ್ತೆ ಬರುತ್ತಾನೆಂದು – ತಾರಾ!

ಬೆಂಗಳೂರು : ಚಿರಂಜೀವಿ ಸರ್ಜಾಗೆ ಗಂಡು ಮಗು ಜನಿಸಿದ್ದಕ್ಕೆ ಹಿರಿಯ ನಟಿ ತಾರಾ ಸಂತಸ ವ್ಯಕ್ತಪಡಿಸಿದ್ದಾರೆ.

ಅನಾರೋಗ್ಯ ಹಿನ್ನೆಲೆ ಬಾಲಿವುಡ್ ನಟ ರಿಷಿ ಕಪೂರ್ ಆಸ್ಪತ್ರೆಗೆ ದಾಖಲು

ಅನಾರೋಗ್ಯದ ಹಿನ್ನೆಲೆಯಲ್ಲಿ ಬಾಲಿವುಡ್ ನ ಹಿರಿಯ ನಟ ರಿಷಿ ಕಪೂರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ.ಈ ಕುರಿತು ರಿಷಿ ಅವರ ಸಹೋದರ ರಣಧೀರ್ ಕಪೂರ್ ತಿಳಿಸಿದ್ದಾರೆ.

ಅಂದು ”ಅದೇ ಕಣ್ಣು”… ಇಂದು ”ಅದೇ ಮುಖ”….!: ಅದೇ ಮುಖದೊಂದಿಗೆ ಪ್ರೇಕ್ಷಕರಿಗೆ ಲಗ್ಗೆ ಇಡಲು ಸಜ್ಜಾಗಿದ್ದಾರೆ ಸಂದೇಶ

‘ಅದೇ ಮುಖ” ಎಂಬ ಸಿನಿಮಾದ ಟೈಟಲ್. ಗಾಂಧಿನಗರದಲ್ಲಿ ಈ ಚಿತ್ರ ಹೇಗಿರಬಹುದು ಎಂಬ ಕುತೂಹಲ ಗರಿಗೆದರುವಂತೆ ಮಾಡಿದೆ.