ನವದೆಹಲಿ : ಕೇಂದ್ರ ಸರ್ಕಾರದ ಸೂಚನೆಯಂತೆ ಜೂ. 8ರಿಂದ ಎಲ್ಲ ಧಾರ್ಮಿಕ ಕೇಂದ್ರಗಳು ಮರಳಿ ಓಪನ್ ಆಗಲಿವೆ. ಇದಕ್ಕಾಗಿ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ.
ಕೇಂದ್ರದ ಮಾರ್ಗಸೂಚಿಯಂತೆ ಧಾರ್ಮಿಕ ಕ್ಷೇತಗಳಲ್ಲಿ ಪ್ರಸಾದ, ತೀರ್ಥ ನೀಡುವಂತಿಲ್ಲ ಎಂದು ತಿಳಿಸಿದ್ದು, 65 ವರ್ಷ ಮೇಲ್ಪಟ್ಟ ಹಾಗೂ 10 ವರ್ಷದೊಳಗಿನ ಮಕ್ಕಳನ್ನು ಧಾರ್ಮಿಕ ಕೇಂದ್ರಗಳಿಗೆ ಪ್ರವೇಶ ನಿಷೇಧಿಸಲಾಗಿದೆ.
ದೇವಸ್ಥಾನಕ್ಕೆ ಬರುವವರು ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ. ಸಾಮೂಹಿಕ ಪ್ರಾರ್ಥನೆ ಬದಲಾಗಿ, ವೈಯಕ್ತಿಕ ಪೂಜೆಗಳಿಗೆ ಆದ್ಯತೆ ನೀಡಬೇಕು ಎಂದು ತಿಳಿಸಿದೆ. ನಿಯಮಿತವಾಗಿ ಕೈ ಸ್ಯಾನಿಟೈಸ್ ಅಥವಾ ಸಾಬೂನಿಂದ ಕೈ ತೊಳೆದುಕೊಳ್ಳಲು ತಿಳಿಸಿದೆ. ಕೆಮ್ಮುವಾಗ ಸೀನುವಾಗ ಟಿಶು, ಕರವಸ್ತ್ರ ಬಳಸಿದ ಬಳಿಕ ಸೂಕ್ತವಾಗಿ ವಿಲೇವಾರಿ ಮಾಡಬೇಕು. ಧಾರ್ಮಿಕ ಕೇಂದ್ರ ಪ್ರವೇಶಕ್ಕೂ ಮುನ್ನ ಥರ್ಮಲ್ ಸ್ಕ್ರೀನಿಂಗ್ ಮತ್ತು ಕೈ ಸ್ವಚ್ಛ ಮಾಡಿಕೊಳ್ಳುವುದು ಕಡ್ಡಾಯ ಮಾಡಲಾಗಿದೆ.
ಧಾರ್ಮಿಕ ಕೇಂದ್ರಗಳಲ್ಲಿ ಪ್ರವೇಶವನ್ನು ನಿಯಂತ್ರಿಸಣ, ಸಮಯದ ಆಧಾರದಲ್ಲಿ ಶಿಫ್ಟ್ ಗಳನ್ನು ಮಾಡಲು ತಿಳಿಸಿದೆ. ಅಲ್ಲದೇ ಶೂ ಚಪ್ಪಲಿಗಳನ್ನು ಭಕ್ತರು ವಾಹನದಲ್ಲಿ ಇಟ್ಟುಕೊಳ್ಳಬೇಕು, ಧಾರ್ಮಿಕ ಕ್ಷೇತ್ರದ ಒಳ ತರುವಂತಿಲ್ಲ, ಅನಿವಾರ್ಯವಾದರೆ ಚಪ್ಪಲಿಗಳನ್ನು ಪ್ರತ್ಯೇಕಿಸಿ ಇಡಬೇಕು ಎಂದು ಸೂಚಿಸಿದೆ.
[6/5, 3:50 PM