ಲಕ್ನೋ: ಪ್ರತಿಷ್ಠಿತ ಸೈಕಲ್ ತಯಾರಿಕಾ ಕಂಪನಿ ವಿಶ್ವ ಬೈಸಿಕಲ್ ದಿನಾಚರಣೆಯ ದಿನದಂದೇ ಸ್ಥಗಿತಗೊಂಡಿದೆ. ಉದ್ಯೋಗಿಗಳಿಗೆ ಯಾವುದೇ ಸೂಚನೆ ನೀಡದೆ ಕಂಪನಿಯನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ನೌಕರಸ್ಥರು ಬೀದಿಗೆ ಬಂದಿದ್ದಾರೆ.
ಉತ್ತರ ಪ್ರದೇಶದ ಘಾಝಿಯಾಬಾದ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಟ್ಲಾಸ್ ಕಂಪನಿಯನ್ನು ನಷ್ಟದ ಕಾರಣ ಹೇಳಿ ಸ್ಥಗಿತಗೊಳಿಸಲಾಗಿದೆ. ಈ ಮೂಲಕ ಭಾರತದ ಸೈಕಲ್ ತಯಾರಿಕಾ ಕಂಪೆನಿಯ ಬಹುದೊಡ್ಡ ಸಂಸ್ಥೆ ಮುಚ್ಚಿದಂತಾಗಿದೆ.
ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳು ಕಾಲ ಕಂಪನಿಯನ್ನು ಬಂದ್ ಮಾಡಲಾಗಿತ್ತು. ಆದರೆ, ಜೂ. 1 ರಂದು ಕಂಪನಿಯನ್ನು ಮರಳಿ ಓಪನ್ ಮಾಡಲಾಗಿತ್ತು. ಎರಡು ದಿನಗಳ ಕಾಲ ನೌಕರಸ್ಥರು ಖುಷಿಯಿಂದಲೇ ಕೆಲಸ ಮಾಡಿದ್ದರು. ಆದರೆ, ನಿನ್ನೆ ಏಕಾಏಕಿ ಕಂಪನಿಯ ಬಾಗಿಲು ಮುಂದೆ, ಸಂಸ್ಥೆ ಮುಚ್ಚಿರುವ ಬಗ್ಗೆ ನೊಟೀಸ್ ಹಾಕಲಾಗಿತ್ತು. ಇದನ್ನು ಕಂಡ ನೌಕರಸ್ಥರು ಶಾಕ್ ಆಗಿದ್ದಾರೆ. ಈ ಮೂಲಕ ಸಾವಿರಾರು ನೌಕರಸ್ಥರು ಬೀದಿಗೆ ಬಂದಿದ್ದಾರೆ.
ಈ ಹಿಂದೆಯೂ ಸೈಕಲ್ ತಯಾರಿಕಾ ಕಂಪನಿಗಳು ಬಾಗಿಲು ಹಾಕಿಕೊಂಡಿದ್ದವು. ಅಟ್ಲಾಸ್ ಕಂಪನಿಯಲ್ಲಿ ಪ್ರತಿ ತಿಂಗಳು 2 ಲಕ್ಷಕ್ಕೂ ಅಧಿಕ ಸೈಕಲ್ ಗಳನ್ನು ತಯಾರಿಸಲಾಗುತ್ತಿತ್ತು. ಕಂಪನಿಯ ನಿರ್ಧಾರದಿಂದಾಗಿ ನೌಕರಸ್ಥರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಹಲವರು ಕೋರ್ಟ್ ಮೊರೆ ಹೋಗಲು ನಿರ್ಧರಿಸಿದ್ದಾರೆ.