ಬೆಂಗಳೂರು: ರಾಜ್ಯದಿಂದ ನಾಲ್ಕು ಕ್ಷೇತ್ರಗಳಿಗೆ ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್ ನಿಂದ ಮಲ್ಲಿಕಾರ್ಜುನ ಖರ್ಗೆ ಹೆಸರು ಬಹುತೇಕ ಅಂತಿಮವಾಗಿದೆ.

ಜೂ.9ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಜೂ.10ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಜೂನ್ 12 ರಂದು ನಾಮಪತ್ರ ಹಿಂಪಡೆಯಲು ಅವಕಾಶ ನೀಡಲಾಗಿದೆ. ರಾಜ್ಯದಲ್ಲಿ ಪ್ರಭಾಕರ ಕೋರೆ, ಬಿ.ಕೆ.ಹರಿಪ್ರಸಾದ್, ಕುಪೇಂದ್ರರಡ್ಡಿ, ರಾಜಿವ್ ಗೌಡ ನಿವೃತ್ತಿ ಹೊಂದಲಿದ್ದು ಅವರಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.

ಹೀಗಾಗಿ ಈಗಾಗಲೇ ಕಾಂಗ್ರೆಸ್-ಬಿಜೆಪಿ-ಜೆಡಿಎಸ್ ಮೂರು ಪಕ್ಷಗಳಲ್ಲಿ ಆಕಾಂಕ್ಷಿಗಳು ಲಾಭಿ ನಡೆಸಿದ್ದಾರೆ. ಸದ್ಯ ಸದಸ್ಯ ಬಲ ಹೆಚ್ಚಿರುವ ಬಿಜೆಪಿಯಲ್ಲಿ ಮಾತ್ರ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಆದರೆ ಕಾಂಗ್ರೆಸ್ ನಲ್ಲೂ ಕೂಡ ಆಕಾಂಕ್ಷಿಗಳು ಇದ್ದಾಗ್ಯೂ ಮಲ್ಲಿಕಾರ್ಜುನ ಖರ್ಗೆ ಹೆಸರೆ ಅಂತಿಮವಾಗುವ ಸಾಧ್ಯತೆ ಹೆಚ್ಚಿದೆ.   

Leave a Reply

Your email address will not be published. Required fields are marked *

You May Also Like

ಗ್ರಾಮ ಪಂಚಾಯತಿಗಳಿಗೆ ನೇಮಕವಾದ ಆಡಳಿತಾಧಿಕಾರಿಗಳ ಕರ್ತವ್ಯಗಳೇನು..?

ನೇಮಕಗೊಂಡ ಆಡಳಿತಾಧಿಕಾರಿಗಳ ಕರ್ತವ್ಯಗಳ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾ ಮಹದೇವನ್ ಆದೇಶ ಹೊರಡಿಸಿದ್ದಾರೆ.

ಫೇಸ್ ಬುಕ್ ಗೆಳೆಯನೊಂದಿಗೆ ಓಡಿ ಹೋದ ರಾಜಕೀಯ ಮುಖಂಡನ ಪತ್ನಿ!

ಲಕ್ನೋ : ರಾಜಕೀಯ ಮುಖಂಡರೊಬ್ಬರ ಪತ್ನಿ ಫೇಸ್‍ ಬುಕ್ ಗೆಳೆಯನ ಜೊತೆ ಓಡಿ ಹೋಗಿರುವ ಘಟನೆ ಉತ್ತರ ಪ್ರದೇಶದ ಅಮ್ರೋಹ ನಗರದ ಕೊತವಾಲಿಯಲ್ಲಿ ನಡೆದಿದೆ.

ಪಶುವೈದ್ಯಕೀಯ ಕಾಲೇಜಿಗೆ ನೀರು ಕೊಡಿ

ಪಶುವೈದ್ಯಕೀಯ ಕಾಲೇಜಿಗೆ ನೀರು ಒದಗಿಸಿ ಎಂದು ಒತ್ತಾಯಿಸಿ ಪಶುವೈದ್ಯಕೀಯ ವಿದ್ಯಾರ್ಥಿಗಳು ಕಾರ್ಯಪಾಲಕ ಅಭಿಯಂತರ ಸಹಾಯಕ ಕಾರ್ಯಪಾಲಕ ಅಭಿಯಂತರ ಹಾಗೂ ಲೋಕೋಪಯೋಗಿ ಇಲಾಖೆ ಉಪ ವಿಭಾಗದ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.