ನವದೆಹಲಿ: ಭಾರತದ ಬ್ಯಾಂಕ್ಗಲಳಿಂದ 9 ಸಾವಿರ ಕೋಟಿ ರೂ. ಸಾಲ ಪಡೆದು ವಿದೇಶದಲ್ಲಿ ತಲೆಮರಿಸಿಕೊಂಡಿರುವ ಮದ್ಯ ಉದ್ಯಮಿ ವಿಜಯ್ ಮಲ್ಯ ಅವರನ್ನು ಶೀಘ್ರದಲ್ಲೇ ಭಾರತಕ್ಕೆ ಕರೆತರಲಾಗುವುದು.
ರಾಜತಾಂತ್ರಿಕ ರಂಗದಲ್ಲಿ ಭಾರತಕ್ಕೆ ಯಶಸ್ಸು ಸಿಕ್ಕಿದ್ದು, ವಿಜಯ್ ಮಲ್ಯ ಅವರನ್ನು ಹಸ್ತಾಂತರಿಸುವ ಬಗ್ಗೆ ಬ್ರಿಟಿಷ್ ನ್ಯಾಯಾಲಯ ಈಗಾಗಲೇ ಮುದ್ರೆ ಹಾಕಿದೆ. ವಿಜಯ್ ಮಲ್ಯ ಬ್ಯಾಂಕ್ ವಂಚನೆ ಮತ್ತು ಮನಿ ಲಾಂಡರಿಂಗ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.
ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಅವರನ್ನು ಬಂಧಿಸಿ ವಿಶೇಷ ವಿಮಾನದಲ್ಲಿ ಕರೆ ತರಲಾಗುವುದು. ಅವರು ಹಗಲು ಹೊತ್ತಿನಲ್ಲಿ ದೇಶಕ್ಕೆ ಬಂದರೆ ನೇರವಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ರಾತ್ರಿ ಹೊತ್ತು ಬಂದರೆ, ಸಿಬಿಐ ಕಚೇರಿಯಲ್ಲಿ ಇರಿಸಿ, ಮಾರನೆ ದಿನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.
ವಿಜಯ್ ಮಲ್ಯ ಅವರನ್ನು ಆರ್ಥರ್ ರಸ್ತೆಯಲ್ಲಿರುವ ಜೈಲಿನಲ್ಲಿ ಇಡಲಾಗುತ್ತದೆ ಎಂದು ಬ್ರಿಟನ್ ನ್ಯಾಯಾಲಯಕ್ಕೆ ಭಾರತೀಯ ಸಂಸ್ಥೆಯು ತಿಳಿಸಿದೆ. ಈಗಾಗಲೇ ಬ್ಯಾಂಕ್ ಗಳು ವಿಜಯ್ ಮಲ್ಯ ಅವರನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಘೋಷಿಸಿವೆ.

Leave a Reply

Your email address will not be published. Required fields are marked *

You May Also Like

ವಿದ್ಯುತ್ ಕಾಯ್ದೆ ತಿದ್ದುಪಡಿಗೆ ಡಿಕೆಶಿ ವಿರೋಧ

ಬೆಂಗಳೂರು: 2003ರ ವಿದ್ಯುತ್ ಕಾಯ್ದೆ ತಿದ್ದುಪಡಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರೋಧ ವ್ಯಕ್ತಪಡಿಸಿದ್ದಾರೆ.ಈ ಕುರಿತು ಟ್ವೀಟ್…

ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಯಿಂದ ಮನವಿ

ಲಕ್ಷ್ಮೇಶ್ವರ: ನಗರದ ತಹಸೀಲ್ದಾರ್ ಕಚೇರಿಯಲ್ಲಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಯಿಂದ ಮನವಿ…

ಕಪ್ಪತ್ತಗುಡ್ಡದ ಸಭೆ ಕಗ್ಗಂಟು: ಪ್ರಶ್ನೆಗಳು ನೂರೆಂಟು..!

ನಿನ್ನೆಯಷ್ಟೆ ನಿಮ್ಮ ಉತ್ತರಪ್ರಭ ಕಪ್ಪತ್ತಗುಡ್ಡದ ಬಗ್ಗೆ ಸದ್ಯದ ಬೆಳವಣಿಗೆ ಹಾಗೂ ಒಳಗೊಳಗೆ ಹುನ್ನಾರ ನಡೆಯುತ್ತಿದೆಯಾ? ಎನ್ನುವ ಕುರಿತು ವಿಶೇಷ ವರದಿಯನ್ನು ನೀಡಿತ್ತು. ಇದರ ಬೆನ್ನಲ್ಲೆ ನಿನ್ನೆ ವಿಧಾನಸೌಧದಲ್ಲಿ ಕಪ್ಪತ್ತಗುಡ್ಡ ವನ್ಯಧಾಮಕ್ಕೆ ಸಂಬಂಧ ಪಟ್ಟಂತೆ ಸಭೆ ಕೂಡ ನಡೆದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.