ಎಸ್.ಪಿ.ಬಿ. ಜನ್ಮದಿನ: ಟ್ವೀಟರ್ ನಲ್ಲಿ ಶುಭಾಶಯಗಳ ಸುರಿಮಳೆ

ಬೆಂಗಳೂರು: ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಸುಮಾರು 40,000ಕ್ಕೂ ಹೆಚ್ಚು ಚಿತ್ರಗೀತೆಗಳನ್ನು ಹಾಡಿರುವ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಮ್ ಅವರಿಗೆ ಇಂದು 73ನೇ ಜನ್ಮದಿನದ ಸಂಭ್ರಮ.
ಸಂಗೀತ ನಿರ್ದೇಶಕ ಮತ್ತು ಗಾಯಕನಿಗೆ ಟ್ವೀಟರ್ ನಲ್ಲಿ #SPBalasubrahmanyam ಹ್ಯಾಷ್ ಟ್ಯಾಗ್ ಟ್ರೆಂಡ್ ಆಗಿದೆ. ಹಿಂದಿಯ ರೋಜಾ, ಸದ್ಮಾ, ಏಕ್ ದೂಜೇಕೆ ಲಿಯೆ, ಹಮ್ ಆಪ್ ಕೆ ಹೈ ಕೌನ್ ಸೇರಿದಂತೆ ಎಸ್.ಪಿ.ಬಿ. ಬಹುಭಾಷೆಯ ಚಲನಚಿತ್ರಗಳಿಗೆ ದನಿ ನೀಡಿದ್ದಾರೆ. ಜೊತೆಗೆ ಸಂಗೀತ ನಿರ್ದೇಶನದಲ್ಲೂ ಕೈಯಾಡಿಸಿ ಸೈ ಎನಿಸಿಕೊಂಡಿದ್ದಾರೆ.
ಕನ್ನಡದಲ್ಲಿ ಕರುನಾಡ ತಾಯಿ, ತಾಳಿ ಕಟ್ಟುವ ಶುಭವೇಳೆ, ಸುಂದರಿ ಸುಂದರಿ, ಓ ಚೆಲುವೆ ನಾಟ್ಯದ ಸರಿ ನವಿಲೇಯಂತಹ ವಿಶಿಷ್ಟ ಗೀತೆಗಳು, ವಚನಗಳು, ಭಕ್ತಿಗೀತೆಗಳು, ಭಾವಗೀತೆಗಳು ಅವರ ಕಂಠಸಿರಿಯಿಂದ ಮೂಡಿಬಂದು ಕನ್ನಡಿಗರನ್ನು ರಂಜಿಸಿವೆ.
ಎಸ್.ಪಿ.ಬಾಲಸುಬ್ರಹ್ಮಣ್ಯ ಅವರ ವಿಶೇಷತೆ ಎಂದರೆ, ವಿಷ್ಣುವರ್ಧನ್, ಅಂಬರೀಷ್, ಶಿವರಾಜ್ ಕುಮಾರ್, ರವಿಚಂದ್ರನ್ ಮೊದಲಾದ ನಟರಿಗೆ ವಿವಿಧ ರೀತಿಯಲ್ಲಿ ದನಿ ನೀಡಿದ್ದಾರೆ. ಪ್ರತಿಯೊಬ್ಬ ನಾಯಕರಿಗೂ ವಿಭಿನ್ನ ರೀತಿಯ ದನಿ ನೀಡಿರುವ ವಿಶಿಷ್ಟ ದಾಖಲೆ ಎಸ್.ಪಿ.ಬಿ. ಅವರದು.

Exit mobile version