ನರೇಗಲ್ಲ: ಹೋಬಳಿ ವ್ಯಾಪ್ತಿಯಯಲ್ಲಿ ಮೊದಲೇ ಹಾಳಾಗಿದ್ದ ರಸ್ತೆಗಳು ಈಗ ಆರಂಭವಾಗಿರುವ ಮುಂಗಾರು ಮಳೆಗೆ ಮತ್ತಷ್ಟು ಹಾಳಾಗಿ ಅಪಘಾತಗಳಿಗೆ ಅಹ್ವಾನ ನೀಡುತ್ತಿವೆ. ನರೆಗಲ್ಲ ಪಟ್ಟಣದಿಂದ ಯಲಬುರ್ಗಾ ತಾಲ್ಲೂಕಿನ ಗ್ರಾಮಗಳಿಗೆ ತೆರಳುವ ರಸ್ತೆಯು ಸಂಪೂರ್ಣವಾಗಿ ಕಿತ್ತು ಹೋಗಿದೆ.

ಜನಪ್ರತಿನಿಧಿಗಳ ನಿರ್ಲಕ್ಷ್ಯ..

ನರೇಗಲ್ ನಿಂದ ಗದಗ ಜಿಲ್ಲಾ ವ್ಯಾಪ್ತಿಯ ರಸ್ತೆಯು 10 ಕಿಮೀ ದೂರದ ವರೆಗಿನ ರಸ್ತೆ ಕೆಸರುಗದ್ದೆಯಂತಾಗಿದೆ. ಮುಂದೆ ಕೊಪ್ಪಳ ಜಿಲ್ಲೆಯ ಜನಪ್ರತಿನಿಧಿಗಳು ತಮ್ಮ ಸರಹದ್ದಿನ ತನಕ ರಸ್ತೆಯು ಅಭಿವೃದ್ಧಿ ಮಾಡಿದ್ದಾರೆ. ತೆಗ್ಗು ಗುಂಡಿಯಲ್ಲಿ ಬಿಳುವ ವಾಹನ ಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಹದಗೆಟ್ಟಿರುವ ರಸ್ತೆಗಳಲ್ಲಿ ಸಂಚರಿಸುವ ಸವಾರರು ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ಇದೇ ಮಾರ್ಗವನ್ನು ಬಳಕೆ ಮಾಡಿಕೊಂಡು ಪ್ರಯಾಣಿಸುವ ಯಲಬುರ್ಗಾ, ತೊಂಡಿಹಾಳ, ಬಂಡಿಹಾಳ, ದ್ಯಾಂಪುರ, ಕುಕನೂರ ಗ್ರಾಮಗಳ ಜನರಿಗೆ ಹಾಗೂ ನರೇಗಲ್ ಸರಹದ್ದಿನ ಹೊಲಕ್ಕೆ ಹೋಗುವ ರೈತರಿಗೆ ತುಂಬಾ ತೊಂದರೆ ಆಗುತ್ತಿದೆ. ಪಟ್ಟಣದ ಆಸ್ಪತ್ರೆಗೆ ನಿತ್ಯವೂ ನೂರಾರು ಜನ ಬರುತ್ತಾರೆ. ವೃದ್ಧರ ಹಾಗೂ ಆಸ್ಪತ್ರೆಗೆ ಬರುವ ಗರ್ಭಿಣಿ ಮಹಿಳೆಯರ ಪರಿಸ್ಥಿತಿಯಂತೂ ಹೇಳ ತಿರದು. ಅನೇಕ ದಿನಗಳಿಂದಲೂ ಇಷ್ಟೆಲ್ಲಾ ಸಮಸ್ಯೆ ಇದ್ದರೂ ಸಂಬಂಧ ಪಟ್ಟ ಜನಪ್ರತಿನಿಧಿಗಳು ತಮಗೂ ಇದಕ್ಕೂ ಸಂಬಂಧ ಇಲ್ಲದಂತೆ ಜಾಣಕುರುಡುತನ ಪ್ರದರ್ಶಿಸುತ್ತಿದ್ದಾರೆ. ಹಾಗೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ವಿವಿಧ ಗ್ರಾಮಗಳ ಜನರ ಆರೋಪವಾಗಿದೆ.

ಸಾವು ನೋವು ಸಂಭವಿಸಿದ ಉದಾಹರಣೆಗಳು ಇವೆ

ಇದೇ ಮಾರ್ಗದ ರಸ್ತೆಯಲ್ಲಿ ರಸ್ತೆ ಅಪಘಾತದಿಂದ ನಾಲ್ಕು ಸಾವುಗಳು ಸಂಭವಿಸಿವೆ. ಗರ್ಭಿಣಿಯೊಬ್ಬಳನ್ನು ಕರೆದುಕೊಂಡು ಆಸ್ಪತ್ರೆಗೆ ಬರುತ್ತಿದ್ದ ಕಾರು ರಸ್ತೆಯ ಗುಂಡಿಯಲ್ಲಿ ಸಿಲುಕಿ ತೊಂದರೆ ಅನುಭವಿಸಿದಾಗ 108 ವಾಹನವನ್ನು ಕರೆಯಿಸಿ, ಕಳುಹಿಸಲಾಗಿದೆ. ಅಂದು ನಡೆದ ಆ ಘಟನೆಯಿಂದಾಗಿ ಈ ಭಾಗದಲ್ಲಿ ಓಡಾಡುವ ರೈತರೇ ತಮ್ಮ ಸ್ವಂತ ಹಣದಲ್ಲಿ ಆಳವಾದ ತೆಗ್ಗಿಗೆ ಟ್ರಾಕ್ಟರ್ ಮೂಲಕ ಮಣ್ಣು ಹಾಕಿಸಿದ್ದರು ಆದರೆ ಅಧಿಕಾರಿಗಳು ಮಾತ್ರ ಇದಕ್ಕೆ ನಮಗೆ ಸಂಬಂಧ ಇಲ್ಲದಂತೆ ವರ್ತಿಸುತ್ತಿದ್ದಾರೆ ಎಂದು ಮಾಜಿ ಸೇನಾಧಿಕಾರಿ ರಾಮಣ್ಣ ಸಕ್ರೋಜಿ ಆಕ್ರೋಶ ವ್ಯಕ್ತ ಪಡಿಸಿದರು.

ಹದಗೆಟ್ಟ ರಸ್ತೆ

ಕಳೆದ ವರ್ಷ ಇಲ್ಲಿನ ತೆಗ್ಗಿಗೆ ಸಿಲುಕಿದ್ದ ಮೇವಿನ ಬಣವೆಯ ಟ್ರಾಕ್ಟರ್ ವಿದ್ಯುತ್ ಕಂಬಕ್ಕೆ ಉರುಳಿ ಬಿದ್ದು ಮೇವು ಸುಟ್ಟು ಸ್ವಲ್ಪದರಲ್ಲಿ ಟ್ರಾಕ್ಟರ್ ಚಾಲಕ ಹಾಗೂ ಕೃಷಿ ಕಾರ್ಮಿಕರು ಬದುಕುಳಿದಿದ್ದಾರೆ ಎಂದು ಫಕೀರಗೌಡ ಪಾಯಪ್ಪಗೌಡ್ರ, ವಸಂತ ಅಣ್ಣಿಗೇರಿಮಠ, ಅಂದಾನಯ್ಯ ಸಂಗನಾಳಮಠ, ವೀರೇಶ ಬಾರಕೆರ ತಿಳಿಸಿದರ

ಶಾಸಕರ ಭರವಸೆ ಹುಸಿಯಾಯಿತು?

ರೈತರು, ಮುಖಂಡರು ಸೇರಿ ಈ ರಸ್ತೆಯನ್ನು ಅಭಿವೃದ್ಧಿ ಪಡಿಸುವಂತೆ ಖುದ್ದು ಶಾಸಕರ ಮನೆಗೆ ಒಂದು ಕ್ರೂಸರ್ ಜನ ಅವರಲ್ಲಿ ಮನವಿ ಮಾಡಿಕೊಂಡು ಬಂದಿದ್ದೇವೆ. ಒಂದೇ ತಿಂಗಳಲ್ಲಿ ಅಭಿವೃದ್ಧಿ ಪಡಿಸುವ ಭರವಸೆಯನ್ನು ನೀಡಿದ್ದ ಶಾಸಕರು ವರ್ಷಗಳು ಉರುಳಿದರು ಈ ಕಡೆ ಗಮನ ಹರಿಸಿಲ್ಲ ಎಂದು ಹಾಲಪ್ಪ ಹಲಗೇರಿ, ಎಂ.ಎಂ. ಮಲ್ಲನಗೌಡ್ರ ಹೇಳಿದರು.
ರಸ್ತೆಗಳ ಅಭಿವೃದ್ಧಿ ಕೈಗೊಳ್ಳಬೇಕಾದ ಜಿಲ್ಲಾ ಪಂಚಾಯ್ತಿ, ರಾಜ್ಯ ರಸ್ತೆ ಅಭಿವೃದ್ಧಿ ನಿಗಮ, ಲೋಕೋಪಯೋಗಿ ಇಲಾಖೆ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ, ರಾಷ್ಟ್ರೀಯ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶಿಸುತ್ತಿವೆ. ರಸ್ತೆಗಳ ನಿರ್ವಹಣೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಾಕಷ್ಟು ಹಣ ಬಿಡುಗಡೆ ಮಾಡುತ್ತಿದ್ದರೂ ರಸ್ತೆ ದುಸ್ಥಿತಿಯನ್ನು ಕಂಡೂ ಕಾಣದಂತಿದ್ದಾರೆ. ಸಂಸದರ, ಶಾಸಕರ ಇಚ್ಛಾಶಕ್ತಿ ಕೊರತೆಯಿಂದಾಗಿ ರಸ್ತೆ ಕಾಮಗಾರಿ ಪ್ರಾರಂಭವಾಗಿಲ್ಲ. ಈ ಧೋರಣೆ ಹೀಗೆ ಮುಂದುವರೆದರೆ ಇಲ್ಲಿ ನಡೆಯುವ ಸಾವುನೋವುಗಳಿಗೆ ಶಾಸಕರು, ಅಧಿಕಾರಿಗಳು ನೇರ ಹೊಣೆಗಾರರಾಗುತ್ತಾರೆ ಹಾಗೂ ರಸ್ತೆ ಅಭಿವೃದ್ಧಿಗಾಗಿ ಉಗ್ರವಾದ ಹೋರಾಟವನ್ನು ಕೈಗೊಳ್ಳಬೇಕಾಗುತ್ತದೆ ಎಂದು ಶರಣಪ್ಪ ಮಡಿವಾಳರ, ಅನಿಲ್ ಗೂಡಚಪ್ಪನವರ,ಶರಣಪ್ಪ ಮಾರನಬಸರಿ, ವಿನಾಯಕ ಹೊಸಮನಿ, ಗಂಗಪ್ಪ ಮಾಳಗೌಡ್ರ, ಶರಣಪ್ಪ ಗಡಾದ, ಆನಂದ ಮಾವಿನಕಾಯಿ ಎಚ್ಚರಿಸಿದರು.

ಅಯ್ಯೋ ಶಿವಾ ಎಂತ ರಸ್ತೆ…..
Leave a Reply

Your email address will not be published. Required fields are marked *

You May Also Like

ಜಿಲ್ಲಾ ಜೆಡಿಎಸ್ ನಿಂದ ಬಂಡೆಪ್ಪ ಕಾಶಂಪೂರ 57ನೇ ಹುಟ್ಟುಹಬ್ಬ ಆಚರಣೆ

ಬಂಡೆಪ್ಪ ಕಾಶಂಪೂರ ಅವರು ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರದಲ್ಲಿ ಕೃಷಿ ಸಚಿವರಾಗಿ ಅನೇಕ ರೈತಪರ, ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದರು. ಕುಮಾರಸ್ವಾಮಿ ಮಂತ್ರಿಮಂಡಲದಲ್ಲಿ ಉತ್ಸಾಹಿ ಯುವ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದು ಶ್ಲಾಘನೀಯ

ಕೊರೋನಾ ಸಮಯ: ನಾವು ಸೇವಿಸುವ ಆಹಾರದ ಬಗ್ಗೆ ನಮಗೆ ಗೊತ್ತಿರಲೇಬೇಕಾದ ಸಂಗತಿಗಳು

ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆ ಕೊರೋನಾ ಸಂದರ್ಭದಲ್ಲಿ ನಮ್ಮ ಆಹಾರ ಪದ್ಧತಿ ಹೇಗಿರಬೇಕು ಎಂದು ಟಿಪ್ಸ್…

ಡ್ರಗ್ಸ್ ರಾಣಿಯರಿಗೆ ಬೇಲ್ ನೀಡದಿದ್ದರೆ ಬಾಂಬ್ ಬೆದರಿಕೆ – ನಾಲ್ವರ ಬಂಧನ!

ಬೆಂಗಳೂರು : ಡ್ರಗ್ಸ್ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟಿ ರಾಗಿಣಿ ಹಾಗೂ ಸಂಜನಾಗೆ ಬೇಲ್ ಕೊಡದಿದ್ದರೆ, ಬಾಂಬ್ ಹಾಕುತ್ತೇವೆ ಎಂದು ಪತ್ರ ಬರೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಲೇಖಕರಾದ ಶ್ರೀಮತಿ ಸುಧಾ ಹುಚ್ಚಣ್ಣವರ ಗೆ ‘ಕದಳಿಶ್ರೀ’ ಪ್ರಶಸ್ತಿ

ಉತ್ತರಪ್ರಭ ಶಿರಹಟ್ಟಿ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ…