ವಾಷಿಂಗ್ಟನ್: ಮೇ 25ರಂದು ಆಫ್ರಿಕನ್-ಅಮೆರಿಕನ್ ಜಾರ್ಜ್ ಫ್ಲಾಯ್ಡ್ ಅಮೆರಿಕದ ಮಿನ್ನೆಸೊಟಾದಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಬಲಿಯಾಗಿದ್ದರು. ಫ್ಲಾಯ್ಡ್ ಬಲಿಯಾದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ವೈರಲ್ ಆಗಿತ್ತು. ಅದರಲ್ಲಿ ಪೊಲೀಸ್ ಅಧಿಕಾರಿ ಡೆರೆಕ್ ಚೌವಿನ್, ಫ್ಲಾಯ್ಡ್ ಅವರ ಕುತ್ತಿಗೆಯ ಮೇಲೆ ಮೊಣಕಾಲನ್ನು ಇಟ್ಟು, ನೆಲಕ್ಕೆ ಒತ್ತಿದ್ದರು. ಈ ವಿಡಿಯೋದಲ್ಲಿ ಫ್ಲಾಯ್ಡ್ “I can’t breathe” ಎಂದು ನಿರಂತರವಾಗಿ ಅವಲತ್ತುಕೊಂಡಿದ್ದರು. ಈ ವಿಡಿಯೋವನ್ನು ಯೂಟ್ಯೂಬ್ ಸೇರಿದಂತೆ ವಿವಿಧ ಜಾಲತಾಣಗಳಲ್ಲಿ ಕೋಟ್ಯಂತರ ಜನ ನೋಡಿದ್ದಾರೆ.
ಈ ವಿಡಿಯೋ ಜನರಲ್ಲಿ ಆಕ್ರೋಶ ಹುಟ್ಟಲು ಕಾರಣವಾಗಿದ್ದು, ಕೊರೊನಾ ನಡುವೆ ಕೂಡ ಜಗತ್ತಿನಾದ್ಯಂತ ಪ್ರತಿಭಟನೆ ನಡೆಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಘಟನೆಯನ್ನು ವ್ಯಾಪಕವಾಗಿ ಖಂಡಿಸಲಾಗಿದೆ. ಕಪ್ಪುಜನರ ವಿರುದ್ಧದ ಹಿಂಸಾಚಾರವನ್ನು ಎಲ್ಲೆಡೆ ವಿರೋಧಿಸಲಾಗಿದೆ.
ಮಿನ್ನೆಪೊಲಿಸ್-ಸೇಂಟ್ ಪಾಲ್ ಪ್ರಾಂತ್ಯದಲ್ಲಿ ಆರಂಭದಲ್ಲಿ ಪ್ರತಿಭಟನೆ ಶಾಂತಿಯುತವಾಗಿತ್ತು. ಅನಂತರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಸಾರ್ವಜನಿಕ ಮತ್ತು ಖಾಸಗಿ ವಾಹನ, ಕಟ್ಟಡಗಳನ್ನು ಧ್ವಂಸಗೊಳಿಸಲಾಗಿದೆ. ಪೊಲೀಸರು ಮತ್ತು ಸಾರ್ವಜನಿಕರ ನಡುವೆ ಕೂಡ ಪರಸ್ಪರ ಕೈಮಿಲಾಯಿಸಿದ ಪ್ರಸಂಗಗಳು ನಡೆದಿವೆ. ಅಮೆರಿಕದ ನ್ಯೂಯಾರ್ಕ್ ಮತ್ತು ವಾಷಿಂಗ್ಟನ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ.

Leave a Reply

Your email address will not be published. Required fields are marked *

You May Also Like

ನಾಪತ್ತೆಯಾಗಿದ್ದ ಸೋಂಕಿತ ವ್ಯಕ್ತಿ ಪತ್ತೆಯಾಗಿದ್ದು ಎಲ್ಲಿ ಗೊತ್ತಾ?

ಕೋಲಾರ : ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 6ಕ್ಕೇರಿದೆ. ಸೋಂಕಿತ ಕೋರ್ಟ್ ಉದ್ಯೋಗಿಯ ಟ್ರಾವಲ್ ಹಿಸ್ಟರಿ ಮೂರು…

ಖಾಸಗಿ ಶಾಲಾ ಶಿಕ್ಷಕ ಆತ್ಮಹತ್ಯಗೆ ಯತ್ನ

ತಾಲೂಕಿನ ಡಿ ಪೌಲ್ ಅಕ್ಯಾಡಮಿ ಶಾಲೆಯ ಶಿಕ್ಷಕನರ‍್ವ ಕೆಲಸದಿಂದ ವಜಾಗೊಳಿಸಿದ ಕಾರಣ ಮನನೊಂದು ಆತ್ಮ ಹತ್ಯೆಕ್ಕೆ ಯತ್ನಿಸಿದ ಘಟನೆ ನಡೆದಿದೆ.

ಪಾಕ್ ನ ಉಪಟಳ – ಯೋಧ ಹುತಾತ್ಮ!

ಶ್ರೀನಗರ : ಲಡಾಖ್ ನಲ್ಲಿ ಚೀನಾ ಸಂಘರ್ಷ ನಡೆಸುತ್ತಿದ್ದರೆ, ಇನ್ನೊಂದೆಡೆ ಪಾಕ್ ತನ್ನ ಉಪಟಳ ಮುಂದುವರೆಸಿದೆ. ಗಡಿ ಉಲ್ಲಂಘಿಸಿ ಬಂದ ಪಾಕಿಸ್ತಾನ ಸೇನಾ ಯೋಧರು ನಡೆಸಿದ ದಾಳಿಯಲ್ಲಿ ಭಾರತೀಯ ಸೇನೆಯ ಯೋಧರೊಬ್ಬರು ಹುತಾತ್ಮರಾಗಿದ್ದಾರೆ.

ದೇಶದ ಜನರಿಗೆ ಉಚಿತ ಲಸಿಕೆ, ಆಹಾರಧಾನ್ಯ ವಿತರಣೆ : ನರೇಂದ್ರ ಮೋದಿ ಘೋಷಣೆ

ಜೂನ್ 21ರಿಂದ ಎಲ್ಲರಿಗೂ ಉಚಿತ ಕೊರೊನಾ ಲಸಿಕೆ. 18 ವರ್ಷ ಮೇಲ್ಪಟ್ಟವರಿಗೆ ಕೇಂದ್ರ ಸರ್ಕಾರವೇ ಲಸಿಕೆ ವಿತರಣೆ ಮಾಡಲಿದೆ