I can't breathe: ಜಗತ್ತಿನಾದ್ಯಂತ ಕಪ್ಪುಜನರಿಗೆ ಮಿಡಿತ

ವಾಷಿಂಗ್ಟನ್: ಮೇ 25ರಂದು ಆಫ್ರಿಕನ್-ಅಮೆರಿಕನ್ ಜಾರ್ಜ್ ಫ್ಲಾಯ್ಡ್ ಅಮೆರಿಕದ ಮಿನ್ನೆಸೊಟಾದಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಬಲಿಯಾಗಿದ್ದರು. ಫ್ಲಾಯ್ಡ್ ಬಲಿಯಾದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ವೈರಲ್ ಆಗಿತ್ತು. ಅದರಲ್ಲಿ ಪೊಲೀಸ್ ಅಧಿಕಾರಿ ಡೆರೆಕ್ ಚೌವಿನ್, ಫ್ಲಾಯ್ಡ್ ಅವರ ಕುತ್ತಿಗೆಯ ಮೇಲೆ ಮೊಣಕಾಲನ್ನು ಇಟ್ಟು, ನೆಲಕ್ಕೆ ಒತ್ತಿದ್ದರು. ಈ ವಿಡಿಯೋದಲ್ಲಿ ಫ್ಲಾಯ್ಡ್ “I can’t breathe” ಎಂದು ನಿರಂತರವಾಗಿ ಅವಲತ್ತುಕೊಂಡಿದ್ದರು. ಈ ವಿಡಿಯೋವನ್ನು ಯೂಟ್ಯೂಬ್ ಸೇರಿದಂತೆ ವಿವಿಧ ಜಾಲತಾಣಗಳಲ್ಲಿ ಕೋಟ್ಯಂತರ ಜನ ನೋಡಿದ್ದಾರೆ.
ಈ ವಿಡಿಯೋ ಜನರಲ್ಲಿ ಆಕ್ರೋಶ ಹುಟ್ಟಲು ಕಾರಣವಾಗಿದ್ದು, ಕೊರೊನಾ ನಡುವೆ ಕೂಡ ಜಗತ್ತಿನಾದ್ಯಂತ ಪ್ರತಿಭಟನೆ ನಡೆಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಘಟನೆಯನ್ನು ವ್ಯಾಪಕವಾಗಿ ಖಂಡಿಸಲಾಗಿದೆ. ಕಪ್ಪುಜನರ ವಿರುದ್ಧದ ಹಿಂಸಾಚಾರವನ್ನು ಎಲ್ಲೆಡೆ ವಿರೋಧಿಸಲಾಗಿದೆ.
ಮಿನ್ನೆಪೊಲಿಸ್-ಸೇಂಟ್ ಪಾಲ್ ಪ್ರಾಂತ್ಯದಲ್ಲಿ ಆರಂಭದಲ್ಲಿ ಪ್ರತಿಭಟನೆ ಶಾಂತಿಯುತವಾಗಿತ್ತು. ಅನಂತರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಸಾರ್ವಜನಿಕ ಮತ್ತು ಖಾಸಗಿ ವಾಹನ, ಕಟ್ಟಡಗಳನ್ನು ಧ್ವಂಸಗೊಳಿಸಲಾಗಿದೆ. ಪೊಲೀಸರು ಮತ್ತು ಸಾರ್ವಜನಿಕರ ನಡುವೆ ಕೂಡ ಪರಸ್ಪರ ಕೈಮಿಲಾಯಿಸಿದ ಪ್ರಸಂಗಗಳು ನಡೆದಿವೆ. ಅಮೆರಿಕದ ನ್ಯೂಯಾರ್ಕ್ ಮತ್ತು ವಾಷಿಂಗ್ಟನ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ.

Exit mobile version