ಗದಗ: ಕೋವಿಡ್-19 ಸೋಂಕು ನಿಯಂತ್ರಣ ಕ್ರಮವಾಗಿ ಜುಲೈ 31 ರವರೆಗೆ ನಿಷೇದಾಜ್ಞೆಯ ಅವಧಿಯನ್ನು ವಿಸ್ತರಿಸಿ ರಾಜ್ಯ ಸರ್ಕಾರವು ಉಲ್ಲೇಖಿತ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಪ್ರತಿ ದಿನ ರಾತ್ರಿ 8:00 ರಿಂದ ಬೆಳಿಗ್ಗೆ 5:00 ಗಂಟೆಯವರೆಗೆ ಅವಶ್ಯಕ ಕಾರಣಗಳಲ್ಲದ ಹೊರತು ಎಲ್ಲ ವ್ಯಕ್ತಿಗಳ ಸಂಚಾರವನ್ನು ನಿಷೇಧಿಸಿದೆ. ಜುಲೈ 5 ಆಗಸ್ಟ 2ರವರೆಗೆ ಅನ್ವಯವಾಗುವಂತೆ ಪ್ರತಿ ರವಿವಾರದ ಪೂರ್ತಿ ದಿನದಂದು ಎಲ್ಲ ಪ್ರದೇಶಗಳಲ್ಲಿ ಸಂಪೂರ್ಣ ಲಾಕ್‌ಡೌನ್ ದಿನವೆಂದು ಘೋಷಿಸಿ ಅನಿವಾರ್ಯ ಕಾರಣಗಳಲ್ಲದ ಹೊರತು ಎಲ್ಲ ವ್ಯಕ್ತಿಗಳ ಸಂಚಾರವನ್ನು ನಿಷೇಧಿಸಲಾಗಿರುತ್ತದೆ. ಸಂಪೂರ್ಣ ಲಾಕ್‌ಡೌನ್ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಗದಗ ಜಿಲ್ಲೆಯಾದ್ಯಂತ ಜುಲೈ5, 12, 19, 26 ಮತ್ತು ಆಗಸ್ಟ್ 2ರಂದು ಇರುವ ಭಾನುವಾರಗಳಂದು ಮದ್ಯ ಮಾರಾಟ ಹಾಗೂ ಮದ್ಯ ಸಾಗಾಟವನ್ನು ನಿಷೇಧಿಸಿ ಗದಗ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಆದೇಶ ಹೊರಡಿಸಿದ್ದಾರೆ. ಅಬಕಾರಿ ಉಪ-ಆಯುಕ್ತರು, ಗದಗ ಇವರು ತಮ್ಮ ವ್ಯಾಪ್ತಿಯಲ್ಲಿ ಆದೇಶವನ್ನು ಪರಿಣಾಮಕಾರಿಯಾಗಿ ಜಾರಿಗೆ ಬರುವಂತೆ ಕ್ರಮ ಕೈಕೊಳ್ಳತಕ್ಕದ್ದು.
ಮದ್ಯ ಸಾಗಾಟ ಮತ್ತು ಮಾರಾಟವನ್ನು ನಿಷೇಧಿಸಿದ ಭಾನುವಾರಗಳ ಹಿಂದಿನ ದಿನ ಅಂದರೆ ಶನಿವಾರ ರಾತ್ರಿ 08-00 ಗಂಟೆಯಿಂದ ಸೋಮವಾರ ಬೆಳಿಗ್ಗೆ 5-00 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

You May Also Like

ಸಂಘಟನಾ ಶಕ್ತಿಯಿಂದ ಬೇಡಿಕೆಗಳನ್ನು ಈಡೇರಿಸಿಕೊಳ್ಳಬಹುದಾಗಿದೆ

ಒಗ್ಗಟ್ಟು ಮತ್ತು ಸಂಘಟನಾ ಶಕ್ತಿಯಿಂದ ಧೈರ್ಯ, ಆತ್ಮವಿಶ್ವಾಸ ಹೆಚ್ಚಿ ನ್ಯಾಯ ಸಮ್ಮತವಾದ ಬೇಡಿಕೆಗಳನ್ನು ಈಡೇರಿಸಿಕೊಳ್ಳಬಹುದಾಗಿದೆ ಎಂದು ಮಾಜಿ ಶಾಸಕ ಎಸ್.ಎನ್.ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.

ರೋಣದ ವಿವಿಧ ಹಳ್ಳಿಗಳಲ್ಲಿ ವಿದ್ಯುತ್ ವ್ಯತ್ಯಯ

ಉತ್ತರಪ್ರಭ ಸುದ್ದಿಗದಗ: 110/33/11 ಕೆವ್ಹಿ ರೋಣ, ವಿದ್ಯುತ್ ವಿತರಣಾ ಉಪ-ಕೇಂದ್ರದ 10 MVA ಪರಿವರ್ತಕದ ನಿರ್ವಹಣಾ…

ಇಂದು ಸಾರಿಗೆ ಸಚಿವರ ಗದಗ ಜಿಲ್ಲಾ ಪ್ರವಾಸ

ಉತ್ತರಪ್ರಭಗದಗ: ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರಾದ ಬಿ. ಶ್ರೀರಾಮುಲು ಅವರು ಗದಗ ಜಿಲ್ಲಾ…

ಪ್ರಾಣಿ ಪ್ರೇಮ ತೋರಿದ ಡಿಬಾಸ್

ಡಿಬಾಸ್ ದರ್ಶನ್ ಇದೀಗ ಪ್ರಾಣಿ ಪ್ರೇಮ ಮೆರೆಯುವ ಮೂಲಕ ಸುದ್ದಿಯಾಗಿದ್ದಾರೆ. ಎತ್ತೊಂದರ ಚಿಕಿತ್ಸೆಗೆ ನೆರವಾಗುವ ಮೂಲಕ ತಮ್ಮಲ್ಲಿರುವ ಪ್ರಾಣಿಗಳ ಬಗೆಗಿರುವ ಕಾಳಜಿಯನ್ನು ತೋರಿಸಿದ್ದಾರೆ.