ಬೆಂಗಳೂರು:ನಾಳೆ ದಿನಾಂಕ 31.05.2020 ಭಾನುವಾರದಂದು ಕಂಪ್ಲೀಟ್ ಲಾಕ್ ಡೌನ್ ಇರುವುದಿಲ್ಲ. ಆದ್ದರಿಂದ ದೈನಂದಿನ ಚಟುವಟಿಕೆಗಳು ಎಂದಿನಂತೆ ಇರುತ್ತವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಈ ಕುರಿತು ಅಧಿಕೃತ ಆದೇಶ ಸರ್ಕಾರದಿಂದ ಹೊರಬಿದ್ದಿದೆ. ಇದರಿಂದ ವಿಕೇಂಡ್ ನಲ್ಲಿ ಮನೆಯಲ್ಲೆ ಇರಬೇಕಾ ಎಂದು ಗೊಣಗಿಕೊಂಡವರಿಗೆ ಸರ್ಕಾರದ ಈ ನಿರ್ಧಾರ ಕೊಂಚ ರಿಲ್ಯಾಕ್ಸ್ ಮೂಡಿಸಿದೆ.
ಲಾಕ್‌ಡೌನ್ 4.0 ದಲ್ಲಿ ರಾಜ್ಯದಲ್ಲಿ ಪ್ರತಿ ಭಾನುವಾರದಂದು ಸಂಪೂರ್ಣ ಕರ್ಫ್ಯೂ ಜಾರಿಗೊಳಿಸಲಾಗಿತ್ತು. ಲಾಕ್‌ಡೌನ್ 4.0 ದಲ್ಲಿ ಭಾನುವಾರ ಮಾತ್ರ ಲಾಕ್ಡೌನ್ 1 ಮತ್ತು 2 ರ ನಿಯಮಗಳನ್ನು ಹೇರಲಾಗಿತ್ತು. ಅದರಂತೆ ಅಗತ್ಯ ವಸ್ತುಗಳ ಹೊರತುಪಡಿಸಿ ಉಳಿದ ಇನ್ನೆಲ್ಲಾ ವ್ಯಾಪಾರ ವಹಿವಾಟುಗಳನ್ನು ನಿರ್ಬಂಧಿಸಲಾಗಿತ್ತು. ಆದರೆ ಇದೀಗ ಬೇರೆ ದಿನಗಳಲ್ಲಿ ಇರುವಂತೆ ಬೆಳಿಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೂ ಇರುವ ನಿಬಂಧನೆಗಳೇ ಭಾನುವಾರಕ್ಕೂ ಅನ್ವಯವಾಗಲಿದೆ.
