ಮುಂಡರಗಿ: ಕೊಡಗು ಜಿಲ್ಲೆಯ ಶುಂಠಿ ವ್ಯಾಪಾರಿಯೊಬ್ಬನಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಆದ್ರೆ ಆತನ ಟ್ರಾವೆಲ್ ಹಿಸ್ಟರಿ ನೋಡಿದಾಗ ದೂರದ ಕೊಡಗಿನ ವ್ಯಾಪಾರಿ ಸೋಂಕು ಗದಗ ಜಿಲ್ಲೆಯ ಮುಂಡರಗಿ ಪೊಲೀಸ್ ಠಾಣೆಗೂ ಸಂಕಟ ತಂದಿದೆ.

ಹೌದು, ಪಿ-9215 ಕೇಸ್ ಕೊಡಗು ಜಿಲ್ಲೆಯ ಶನಿವಾರ ಸಂತೆ ನಿವಾಸಿಯ ಟ್ರಾವೆಲ್ ಹಿಸ್ಟರಿ ದೂರದ ಕೊಡಗಿನಿಂದ ಮುಂಡರಗಿ ಪೊಲೀಸ್ ಠಾಣೆವರೆಗೆ ವ್ಯಾಪಿಸಿದೆ. 17-06-2020 ರಂದು ಸೋಂಕಿತ ಪಿ-9315 ಪರಿಚಿತರ ವಿಚಾರಣೆ ಸಂಬಂಧ ಮುಂಡರಗಿ ಠಾಣೆಗೆ ಸ್ನೇಹಿತರೊಂದಿಗೆ ಬಂದಿದ್ದರು. 17-06-2020 ಇಲ್ಲಿನ ಪೊಲೀಸ್ ಠಾಣೆಗೆ ಬಂದು 18-06-2020 ರಂದು ತಮ್ಮೂರಿಗೆ ಮರಳಿದ್ದಾರೆ.
ಇಲ್ಲಿಂದ ಮರಳಿದ ಮೇಲೆ ಸೋಂಕು ದೃಢಪಟ್ಟಿದ್ದು ಇದರಿಂದ ಮುಂಡರಗಿ ಠಾಣೆಗೆ ಕೊರೊನಾ ಕಂಟಕ ಎದುರಾಗಿದೆ. ಈ ಸಂಬಂಧ ಮುಂಜಾಗೃತ ಕ್ರಮವಾಗಿ ಮುಂಡರಗಿ ಪೊಲೀಸ್ ಠಾಣೆಯ ಕೆಲ ಸಿಬ್ಬಂದಿಗಳನ್ನು ಪರೀಕ್ಷೆಗೊಳಪಡಿಸಲಾಗಿದೆ.
ಈ ಘಟನೆಯಿಂದ ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳಲ್ಲಿ ಸಾರ್ವಜನಿಕ ಪ್ರವೇಶ ನಿಷೇಧಿಸಲಾಗಿದೆ. ಜಿಲ್ಲೆಯ 15 ಪೊಲೀಸ್ ಠಾಣೆಯಲ್ಲಿ ಮುಂಜಾಗೃತ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಜೊತೆಗೆ ಪೊಲೀಸ್ ಠಾಣೆಯನ್ನು ಸಾನಿಟೈಸ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.

1 comment
Leave a Reply

Your email address will not be published. Required fields are marked *

You May Also Like

ಗದಗ – ಬೇಟಗೆರಿ ನಗರಸಭೆಯಲ್ಲಿ ಯಾರಿಗೆ ಎಷ್ಟು ಮತದಾನದ ಪಟ್ಟಿ ಪ್ರಕಟ

ಉತ್ತರಪ್ರಭ ಗದಗ: ಇಂದು ಗದಗ-ಬೇಟಗೆರಿ ಮತ ಏಣಿಕೆಯಲ್ಲಿ ಮುಗಿದಿದ್ದು, ಯಾವ ಅಭ್ಯರ್ಥಿಗೆ ಎಷ್ಟು ಮತ ಎಂದು…

ಗದಗ, ರೋಣ, ಮುಂಡರಗಿ, ತಾಲೂಕಿನ ಕೆಲವು ಕಡೆ ಕಂಟೇನ್ಮೆಂಟ್ ಘೋಷಣೆ

ಗದಗ: ಜಿಲ್ಲೆಯ ಕೆಲವು ತಾಲೂಕಿನ ಪ್ರದೇಶಗಳನ್ನು ಕಂಟೇನ್ಮೆಂಟ್ ಪ್ರದೇಶವೆಂದು ಘೋಷಣೆ ಮಾಡಲಾಗಿದೆ. ಅದರ ವಿವರ ಈ…