ನವದೆಹಲಿ : ಕೊರೊನಾ ವೈರಸ್ ನ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ ಡೌನ್ ಹೇರಲಾಗಿದೆ. ಹೀಗಾಗಿ ಕಂಪನಿ ನೌಕರಸ್ಥರು ಇನ್ನೂ ವರ್ಕ್ ಫ್ರಮ್ ಹೋಮ್ ಮಾಡುತ್ತಿದ್ದಾರೆ. ಹಲವರು ಈಗಾಗಲೇ ವರ್ಕ್ ಫ್ರಮ್ ಹೋಮ್ ಮುಗಿಸಿದ್ದಾರೆ. ಆದರೆ, ವರ್ಕ್ ಫ್ರಮ್ ಹೋಮ್ ನಿಂದಾಗಿ ಯಾವ ಯಾವ ರೋಗಗಳು ಬರುತ್ತವೆ ಗೊತ್ತಾ?
ವರ್ಕ್ ಫ್ರಮ್ ಹೋಮ್ ನಿಂದಾಗಿ ನಿದ್ರಾ ಹೀನತೆ, ಬೆನ್ನುನೋವು, ಒತ್ತಡ, ಖಿನ್ನತೆ ಮತ್ತಿತರ ಅಡ್ಡ ಪರಿಣಾಮಗಳನ್ನು ಹಲವು ನೌಕರಸ್ಥರು ಎದುರಿಸಿದ್ದಾರೆ. ಇನ್ನೂ ಹಲವರು ಈಗಾಗಲೇ ಎದುರಿಸುತ್ತಿದ್ದಾರೆ.
ವರ್ಕ್ ಫ್ರಮ್ ಹೋಮ್ ನಲ್ಲಿರುವ ಬಹುತೇಕ ನೌಕರಸ್ಥರು, ಲ್ಯಾಪ್ ಟಾಪ್ ಪರದೆ ಅಥವಾ ಮೊಬೈಲ್ ಫೋನ್ ಮುಂಭಾಗ ಕಳೆದಿದ್ದಾರೆ ಹಾಗೂ ಹಲವರು ಕಳೆಯುತ್ತಿದ್ದಾರೆ. ಸದ್ಯ ಇವರ ಎಲ್ಲ ಕೆಲಸವೂ ಆನ್ ಲೈನ್ ಆಗಿದೆ. ಆಗಾಗ್ಗೆ ತಲೆನೋವು ಮತ್ತು ಬೆನ್ನುನೋವು ಬರುತ್ತದೆ ಎಂದು ವರ್ಕ್ ಫ್ರಮ್ ಹೋಮ್ ನಲ್ಲಿದ್ದವರು ಹೇಳುತ್ತಿದ್ದಾರೆ.
ವರ್ಕ್ ಫ್ರಮ್ ಹೋಮ್ ನಿಂದ ವೈಯಕ್ತಿಕ ಮತ್ತು ವೃತ್ತಿಜೀವನದ ಹಾದಿಯನ್ನು ಮಂಕಾಗಿಸುವುದರ ಜೊತೆಗೆ ನಿದ್ರಾಹೀನತೆಯನ್ನುಂಟು ಮಾಡಿದೆ ಎಂದು ಹಲವರು ಹೇಳುತ್ತಿದ್ದಾರೆ. ತಿನ್ನುವುದು ಸಮಯ ಮೀರಿದ್ದರಿಂದಾಗಿ ಹಾಗೂ ಆಗಾಗ ತಿಂದಿದ್ದ ಪರಿಣಾಮ ನಡೆಯುವುದನ್ನು ಕೂಡ ಹಲವರು ನಿಲ್ಲಿಸಿದ್ದಾರೆ. ಹೀಗಾಗಿ ಹಲವರು ದಪ್ಪವಾಗಿದ್ದಾರೆ. ಆದರೆ, ರಾತ್ರಿ ಹೊತ್ತು ನಿದ್ದೆ ಬರುತ್ತಿಲ್ಲ ಎಂದು ಹಲವರು ಹೇಳಿದ್ದಾರೆ.
ಅನೇಕ ದೊಡ್ಡ ಐಟಿ ಕಂಪನಿಗಳು ಸೇರಿದಂತೆ ಅಂದಾಜು 90ರಿಂದ 95 ರಷ್ಟು ಐಟಿ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಮನಸ್ಸು ಹಾಗೂ ದೇಹವನ್ನು ಸಮತೋಲನದಲ್ಲಿ ಇಡಲು ವ್ಯಾಯಾಮ, ಧ್ಯಾನ ಮಾಡುವಂತೆ ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ. ಆದರೆ, ಬಹುತೇಕರು ಇದನ್ನು ಮಾಡಿಲ್ಲ.
ದೈಹಿಕ ಚಟುವಟಿಕೆಗಳನ್ನು ಹೆಚ್ಚಾಗಿ ಮಾಡದ ಹಿನ್ನೆಲೆಯಲ್ಲಿ ಇಂತಹ ಅನುಭವವಾಗುತ್ತಿರುತ್ತದೆ. ಉದ್ಯೋಗ ಭದ್ರತೆಯ ಆತಂಕದಿಂದ ಕೆಲವರಿಗೆ ನಿದ್ರಾ ಹೀನತೆ ಉಂಟಾಗುತ್ತಿದೆ.
ವರ್ಕ್ ಫ್ರಮ್ ಹೋಮ್ ನಿಂದ ದೇಹದ ಆಕಾರವೇ ಬದಲಾಗಿದೆ. ತೀವ್ರ ಬೆನ್ನುನೋವು, ಭೀತಿ, ವಿರಾಮವೇ ಇಲ್ಲದಂತಾಗಿದೆ ಎಂದು ಬಹು ಗುರಗಾಂವ್ ಮೂಲದ ಐಟಿ ಉದ್ಯೋಗಿ ರಾಹುಲ್ ಕುಮಾರ್ ಹೇಳುತ್ತಾರೆ. ಕೊರೋನಾವೈರಸ್ ಸಾಂಕ್ರಾಮಿಕ ರೋಗದ ಉಪದ್ರವಕಾರಿ ಸುದ್ದಿ ಕೂಡಾ ಜನರ ಮಾನಸಿಕ ಆರೋಗ್ಯದ ಮೇಲೆ ಹಾನಿಯನ್ನುಂಟು ಮಾಡುತ್ತಿದೆ ಎಂದು ಕೆಲ ಆರೋಗ್ಯ ತಜ್ಞರು ಹೇಳುತ್ತಾರೆ.

Leave a Reply

Your email address will not be published. Required fields are marked *

You May Also Like

ಅಪ್ರಾಪ್ತೆ ಅಪಹರಿಸಿದ್ದವನಿಗೂ ಬಂತು ಕೊರೊನಾ – ಪೊಲೀಸರು ಕ್ವಾರಂಟೈನ್!

ಮಂಗಳೂರು : ಅಪ್ರಾಪ್ತೆಯನ್ನು ಅಪಹರಿಸಿ ಮದುವೆಯಾದ ಆರೋಪಿಗೆ ಕೊರೊನಾ ಸೋಂಕು ತಗುಲಿದ ಘಟನೆ ದಕ್ಷಿಣ ಕನ್ನಡ…

ನಿರೂಪಕಿ ಅನುಶ್ರೀ ವಿರುದ್ಧ ಸಿಸಿಬಿ ಫುಲ್ ಗರಂ

ಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗದ ನಿರೂಪಕಿ ಅನುಶ್ರೀ ವಿರುದ್ಧ ಸಿಸಿಬಿ ಅಧಿಕಾರಿಗಳು ಗರಂ ಆಗಿದ್ದಾರೆ.

ರಾಜ್ಯದಲ್ಲಿಂದು ಸೋಂಕಿತರ ಸಂಖ್ಯೆಯಲ್ಲಿ ಪಲ್ಲಟ: 2313 ಪಾಸಿಟಿವ್ ಯಾವ ಜಿಲ್ಲೆಯಲ್ಲಿ ಎಷ್ಟು?

ರಾಜ್ಯದಲ್ಲಿ ಈಗಾಗಲೇ ಹಲವು ದಿನಗಳಿಂದ ಕೊರೊನಾ ಸೋಂಕಿತರ ಸಂಖ್ಯೆ 2000 ಗಡಿ ದಾಟುತ್ತಿರುವುದು ಬೆಂಗಳೂರು ನಗರ ಸೇರಿದಂತೆ ರಾಜ್ಯದ ಜನರಲ್ಲಿ ಆತಂಕ ಸೃಷ್ಟಿಸಿದೆ.

ಇಂಧನ ದರ ಏರಿಕೆ ವಿರೋಧಿಸಿ ಸೈಕಲ್ ಏರಿ ಕಾಂಗ್ರೆಸ್ ನಾಯಕರ ಪ್ರತಿಭಟನೆ

ಬೆಂಗಳೂರು: ಕಳೆದ 15 ದಿನಗಳಿಂದ ನಿರಂತರವಾಗಿ ದೇಶಾದ್ಯಂತ ಇಂಧನ ಬೆಲೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ…