ಬೆಂಗಳೂರು: ತ್ವರಿತವಾಗಿ ಮತ್ತು ಹೆಚ್ಚಿನ ಸಂಖ್ಯೆಯ ಕೋವಿಡ್ ಮಾದರಿ ಪರೀಕ್ಷೆ ನಡೆಸಲು ಅನುವಾಗುವಂತೆ ವಿಶಿಷ್ಟ ವಿನ್ಯಾಸದ ಸ್ವಾಬ್ ಕಲೆಕ್ಟಿಂಗ್ ಬೂತ್ ಗೆ ಇಂದು ಬೆಂಗಳೂರಿನಲ್ಲಿ ಚಾಲನೆ ನೀಡಲಾಗಿದೆ.
ಗ್ಲೋವ್ ಬಾಕ್ಸ್ ಟೆಸ್ಟಿಂಗ್ ಬೂತ್ ಹೆಸರಿನ ಈ ವಿಶಿಷ್ಟ ವಿನ್ಯಾಸದ ಬೂತ್ಗ್ಳನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಉದ್ಘಾಟಿಸಿ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಇದೊಂದು ವಿಶೇಷ ರೀತಿಯ ಮೊಬೈಲ್ ಸ್ವಾಬ್ ಸ್ವೀಕೃತಿ ಬೂತ್ ಆಗಿದ್ದು ಪರೀಕ್ಷಿಸುವವರಿಗೆ ಹಾಗೂ ಪರೀಕ್ಷೆಗೆ ಒಳಗಾಗುವವರಿಗೆ ಸೋಂಕು ತಗುಲುವ ಯಾವುದೇ ಅಪಾಯವಿಲ್ಲದೆ ಸುಲಭವಾಗಿ ಮತ್ತು ಸುರಕ್ಷಿತವಾಗಿ ಕಾರ್ಯನಿರ್ವಹಿಸಬಹುದೆಂದು ತಿಳಿಸಿದರು.
ಗ್ಲಾಸ್ ಬಾಕ್ಸ್ ಒಳಗಿನಿಂದ ಮಾದರಿಗಳನ್ನು ಸ್ವೀಕರಿಸುವ ವಿನ್ಯಾಸ ಹೊಂದಿರುವ ಈ ಬೂತ್ಗುಳಲ್ಲಿ, ಪರೀಕ್ಷಾ ಮಾದರಿ ನೀಡುವ ವ್ಯಕ್ತಿಯು ಹೊರಗಿನಿಂದಲೇ ಸ್ಯಾಂಪಲ್ ನೀಡಬಹುದಗಿದೆ. ಇದರಿಂದ ನೇರ ಸಂಪರ್ಕವಿಲ್ಲದೆ ಶಂಕಿತರ ರಕ್ತಮಾದರಿಗಳನ್ನು ಪಡೆಯಬಹುದು. ಅದರಿಂದ ಉಭಯ ಕಡೆಯಲ್ಲಿ ಸೋಂಕು ತಗುಲುವ ಸಾಧ್ಯತೆಗಳು ಅತ್ಯಂತ ವಿರಳವಾಗಿವೆ ಎಂದು ಸುಧಾಕರ್ ತಿಳಿಸಿದರು.
ಪಿಪಿಇ ಕಿಟ್ ಅವಶ್ಯಕತೆ ಇಲ್ಲದೆ ಕಡಿಮೆ ಸಿಬ್ಬಂದಿಯಿಂದಲೇ ಕಾರ್ಯನಿರ್ವಹಿಸಬಹುದಾದ ಈ ಬೂತ್‌ಗಳು ಪರೀಕ್ಷಾ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡಲಿವೆ. ಕೋವಿಡ್ ವಿರುದ್ಧದ ಸಮರದಲ್ಲಿ ಇದು ಮಹತ್ವದ ಪಾತ್ರ ವಹಿಸಲಿವೆ ಎಂದು ತಿಳಿಸಿದರು.
ಕೊರೋನ ವಿರುದ್ಧದ ಹೋರಾಟದಲ್ಲಿ ಆರಂಭದಿಂದಲೂ ಟೆಸ್ಟಿಂಗ್ಗೆ್ ಹೆಚ್ಚಿನ ಒತ್ತು ನೀಡುತ್ತಿರುವ ಕರ್ನಾಟಕ ಸೋಂಕಿತರ ಮರಣ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಗಮನಾರ್ಹ ಯಶಸ್ಸು ಸಾಧಿಸಿದೆ. ಈ ನಿಟ್ಟಿನಲ್ಲಿ ಇಂತಹ ವಿಶಿಷ್ಟ ವಿನ್ಯಾಸದ ಬೂತ್ ಸಿದ್ಧಪಡಿಸಿರುವುದಕ್ಕಾಗಿ ಲ್ಯಾಮ್ ರಿಸರ್ಚ್ ಪ್ರೈವೇಟ್ ಲಿಮಿಟೆಡ್ನ ಇಂಜಿನಿಯರ್ಗಳು ಮತ್ತು ವಿವಿಧ ತಜ್ಞ ವೈದ್ಯರುಗಳನ್ನು ಅಭಿನಂದಿಸಿರುವ ಸಚಿವ ಸುಧಾಕರ್, ಈ ಬೂತ್ ಗಳನ್ನು ಗಡಿಭಾಗದ ಚೆಕ್ ಪೋಸ್ಟ್ ಗಳಲ್ಲಿ ಮತ್ತು ಸೋಂಕು ಹೆಚ್ಚಿರುವ ಹಾಟ್ ಸ್ಪಾಟ್‌ಗಳಲ್ಲಿ ಪರಿಣಾಮಕಾರಿಯಾಗಿ ಬಳಸಬಹುದು ಎಂದು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಸಚಿವರು ಮಿಂಟೋ ಕಣ್ಣಿನ ಆಸ್ಪತ್ರೆ ಹಾಗೂ ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಗ್ಯಾಸ್ಟ್ರೋ ಎಂಟೆರಾಲಜಿಯ ಕಟ್ಟಡದ ಪರಿವೀಕ್ಷಣೆ ನಡೆಸಿದರು.

Leave a Reply

Your email address will not be published. Required fields are marked *

You May Also Like

ಪ್ರಕಾಶ ಗೊಂಗಡಿ ದಂಪತಿಗೆ ಆತ್ಮೀಯ ಸನ್ಮಾನ

ಆಲಮಟ್ಟಿ : ವಿಜಯಪುರ ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆ ಅಧೀಕ್ಷಕ ಪ್ರಕಾಶ ಗೊಂಗಡಿ ಅವರಿಗೆ…

ಎರಡನೇ ಹಂತದ ಕೋವಿಡ್ ಪರಿಹಾರ ಪ್ಯಾಕೇಜ್ ಘೋಷಣೆ ಯಾವಾಗ?: ಸಿಎಂ ಹೇಳಿದ್ದೇನು?

ಬೆಂಗಳೂರು: ಈಗಾಗಲೇ ಕೋವಿಡ್ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಿರುವ ಸಿಎಂ ಬಿ.ಎಸ್.ಯಡಿಯೂರಪ್ಪ, ಎರಡನೇ ಹಂತದ ಪರಿಹಾರ ಪ್ಯಾಕೇಜ್ ಘೋಷಣೆ ಮಾಡುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಮೊದಲ ಹಂತದ ಪ್ಯಾಕೇಜ್ ಕುರಿತು ಸಾಕಷ್ಟು ಮನವಿಗಳು ಹಾಗೂ ಬೇಡಿಕೆಗಳು ವ್ಯಕ್ತವಾದ ಹಿನ್ನೆಲೆ ಎಲ್ಲರಿಗೂ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಎರಡನೇ ಹಂತದ ಪ್ಯಾಕೇಜನ್ನು ಸಿಎಂ ಘೋಷಣೆ ಮಾಡಲಿದ್ದಾರೆ.

ನಾಳೆ ಕಾಂಗ್ರೆಸ್ ನಿಂದ ಶಿವಮೊಗ್ಗ ಚಲೋ ಆರಂಭ

ಕಾಂಗ್ರೆಸ್ ನಾಯಕರ ಮೇಲೆ ಬಿಜೆಪಿ ನೀಡುತ್ತಿರುವ ಕಿರುಕುಳವನ್ನು ಖಂಡಿಸಿ ಮಾ.13 ರಂದು ಮದ್ಯಾಹ್ನ 1ಕ್ಕೆ ಶಿವಮೊಗ್ಗ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ನಾಯಕ ಡಿ.ಕೆ ಶಿವಕುಮಾರ ಅವರು ತಮ್ಮ ಟ್ವಿಟರ್ ಮೂಲಕ ತಿಳಿಸಿದ್ದಾರೆ.

ಬೆಂಗಳೂರು : ಮಹಾಮಾರಿ ನಿಯಂತ್ರಿಸುವ ನಿಟ್ಟಿನಲ್ಲಿ

ವೈದ್ಯಕೀಯ ಸಲಕರಣೆ ಖರೀದಿಯಲ್ಲಿ ಅವ್ಯವಹಾರವಾಗಿಲ್ಲ ಎನ್ನುವುದಾದರೆ ಸೂಕ್ತ ದಾಖಲೆ ಬಿಡುಗಡೆ ಮಾಡಿ ಎಂದು ಮಾಜಿ ಸಿಎಂ…