ಮೆಸಾಚ್ಯುಸೆಟ್ಸ್: ಅಮೆರಿಕದ ಮೆಸಾಚ್ಯುಸೆಟ್ಸ್ ನಲ್ಲಿ 103ರ ವೃದ್ಧೆ ಸ್ಟೆಂಜಾ ಕೊರೊನಾ ವಿರುದ್ಧದ ಹೋರಾಟದಲ್ಲಿ ಯಶಸ್ವಿಯಾಗಿದ್ದಾರೆ. ಕೊರೊನಾ ವಿರುದ್ಧ ಹೋರಾಡಿ ಗೆದ್ದ ವೃದ್ಧೆಗೆ ಆಸ್ಪತ್ರೆ ಸಿಬ್ಬಂದಿ ಗೌರವಿಸಿ ಬೀಳ್ಕೊಟ್ಟಿದ್ದಾರೆ ಎಂದು ಸ್ಥಳೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಕೆಲವು ದಿನಗಳ ಹಿಂದೆ ಸ್ಟೆಂಜಾ ಜ್ವರದ ಕಾರಣಕ್ಕಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿತ್ತು. ಅವರಿಗೆ ಕೊರೊನಾ ಇರುವ ಸಂಗತಿ ತಿಳಿದ ನಂತರ ಕುಟುಂಬಸ್ಥರು ಇವರ ಆಸೆಯನ್ನೇ ಕೈಬಿಟ್ಟಿದ್ದರು. ಅವರಿಗೆ ವಿದಾಯ ಹೇಳಲು ಎಲ್ಲ ಸಿದ್ಧತೆಗಳನ್ನೂ ಮಾಡಿಕೊಂಡಿದ್ದರು. ಆದರೆ, ಅವರು ಅಚ್ಚರಿಯ ರೀತಿಯಲ್ಲಿ ಚಿಕಿತ್ಸೆಗೆ ಸ್ಪಂದಿಸಿ, ಇದೀಗ ಬಿಡುಗಡೆಯಾಗಿದ್ದಾರೆ. ವಿಶೇಷವೆಂದರೆ ತಮಗೆ ಕೊರೊನಾ ಎಂಬ ರೋಗಕ್ಕೆ ಚಿಕಿತ್ಸೆ ನೀಡಲಾಗಿದೆ ಎಂಬ ಸಂಗತಿ ಕೂಡ ಅವರಿಗೆ ತಿಳಿದಿಲ್ಲ.

Leave a Reply

Your email address will not be published. Required fields are marked *

You May Also Like

ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಗಿಯುವವರೆಗೂ ಲಾಕ್ ಡೌನ್ ಇಲ್ಲ!

ಬೆಂಗಳೂರು : ಲಾಕ್ ಡೌನ್ ತೆರವುಗೊಂಡ ನಂತರ ರಾಜ್ಯ ಸೇರಿದಂತೆ ದೇಶದಲ್ಲಿ ಕೊರೊನಾ ಸ್ಪೋಟಗೊಂಡಿದೆ. ಹೀಗಾಗಿ…

ಹೆಲ್ತ್ ರಿಜಿಸ್ಟರ್ ಗೆ ಸರ್ಕಾರದ ಮುನ್ನುಡಿ: ತಜ್ಞರ ಜತೆ ಸಚಿವ ಸುಧಾಕರ್ ಸಮಾಲೋಚನೆ

ಆರೋಗ್ಯ ಕರ್ನಾಟಕ’ಕ್ಕೆ ವೇದಿಕೆ ಕಲ್ಪಿಸಲಿರುವ “ಹೆಲ್ತ್ ರಿಜಿಸ್ಟರ್’ ಯೋಜನೆ ಅನುಷ್ಠಾನಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮುನ್ನುಡಿ ಬರೆದರು.

ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ರಾಜ್ಯಕ್ಕೆ ಎಷ್ಟನೇ ಸ್ಥಾನ ಗೊತ್ತಾ..?

ನಿನ್ನೆ ಮಧ್ಯಾಹ್ನದವರೆಗೂ ಕರ್ನಾಟಕ ರಾಜ್ಯವು 12ನೇ ಸ್ಥಾನದಲ್ಲಿತ್ತು, ಆದರೆ, ಪ್ರತಿ ದಿನ ರಾಜ್ಯದಲ್ಲಿ 200ಕ್ಕೂ ಅಧಿಕ ಪ್ರಕರಣಗಳು ದಾಖಲಾಗುತ್ತಿರುವುದರಿಂದಾಗಿ ಒಂದು ಸ್ಥಾನ ಮೇಲೆ ಏರಿದೆ.

ಧಾರವಾಡದ ಸೋಂಕಿತ ವ್ಯಕ್ತಿಯಿಂದ ವೈದ್ಯರಿಗೂ ಶುರುವಾಗಿದೆ ಸಂಕಷ್ಟ!

ಹೊಸಯಲ್ಲಾಪುರ ಬಳಿಯ ಕೋಳಿಕೆರೆ ಪ್ರದೇಶದಲ್ಲಿನ ವ್ಯಕ್ತಿಗೆ ಕೊರೊನಾ ಸೋಂಕು ನಿನ್ನೆ ಕಂಡು ಬಂದಿದ್ದು, ಜಿಲ್ಲಾಡಳಿತ ಆ ವ್ಯಕ್ತಿಯ ಟ್ರಾವೆಲ್ ಹಿಸ್ಟರಿ ಕಲೆ ಹಾಕಿದೆ.