ನವದೆಹಲಿ: ನಗರದ ನಿಜಾಮುದ್ಧೀನ್ ಮರ್ಕಜ್ ನಲ್ಲಿ ನಡೆದ ಸಮಾವೇಶದಲ್ಲಿ ಪಾಲ್ಗೊಂಡಿದ್ದ 34 ರಾಷ್ಟ್ರಗಳ 376 ವಿದೇಶಿ ಪ್ರಜೆಗಳ ಮೇಲೆ 35 ವಿವಿಧ ಚಾರ್ಜ್ ಶೀಟ್ ಗಳನ್ನು ದೆಹಲಿ ಪೊಲೀಸರು ದಾಖಲಿಸಿದ್ದಾರೆ.
20 ರಾಷ್ಟ್ರಗಳ 82 ವಿದೇಶಿ ಪ್ರಜೆಗಳ ಮೇಲೆ 20 ಚಾರ್ಜ್ ಶೀಟ್ ದಾಖಲಿಸಿದ್ದ ಪೊಲೀಸರು ಬುಧವಾರ 14 ರಾಷ್ಟ್ರಗಳ 294 ವಿದೇಶಿಗರ ಮೇಲೆ 15 ಜಾರ್ಜ್ ಶೀಟ್ ದಾಖಲಿಸಿದ್ದಾರೆ.

ವೀಸಾ ನಿಯಮ ಉಲ್ಲಂಘನೆ, ಕೋವಿಡ್-19 ನಿಟ್ಟಿನಲ್ಲಿ ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳ ಉಲ್ಲಂಘನೆ ಮತ್ತು ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆ, ವಿಪತ್ತು ನಿರ್ವಹಣಾ ಕಾಯ್ದೆ ಮತ್ತು ಸೆಕ್ಷನ್ 144ರ ಅಡಿಯಲ್ಲಿನ ನಿಷೇಧ ಆದೇಶ ಉಲ್ಲಂಘನೆ ಹಿನ್ನೆಲೆಯಲ್ಲಿ ಎಲ್ಲಾ ವಿದೇಶಿ ಪ್ರಜೆಗಳ ಮೇಲೆ ಚಾರ್ಚ್ ಶೀಟ್ ದಾಖಲಿಸಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

294 ಪ್ರಜೆಗಳು ಮಲೇಷ್ಯಾ, ಥೈಲ್ಯಾಂಡ್, ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ ಮತ್ತು ಆಫ್ರಿಕನ್ ರಾಷ್ಟ್ರಗಳಿಗೆ ಸೇರಿದವರಾಗಿದ್ದಾರೆ. ಮಂಗಳವಾರ ಚಾರ್ಜ್ ಶೀಟ್ ದಾಖಲಿಸಿರುವ 82 ವಿದೇಶಿಗರ ಪೈಕಿಯಲ್ಲಿ ನಾಲ್ವರು ಆರೋಪಿಗಳು ಅಪ್ಘಾನಿಸ್ತಾನ, ತಲಾ ಏಳು ಮಂದಿ ಬ್ರಜಿಲ್ ಮತ್ತು ಚೀನಾದವರು. ಐವರು ಅಮೆರಿಕಾ, ಇಬ್ಬರು ಆಸ್ಟ್ರೇಲಿಯಾ, ಕಜಾಕಿಸ್ತಾನ, ಮೊರಕ್ಕೊ, ಇಂಗ್ಲೆಂಡ್ ದೇಶದವರಾಗಿದ್ದಾರೆ. ಉಕ್ರೇನ್, ಈಜಿಪ್ಟ್, ರಷ್ಯಾ, ಜೋರ್ಡನ್, ಟ್ಯೂನಿಷಿಯಾ, ಬೆಲ್ಜಿಯಂ ನಿಂದ ತಲಾ ಒಬ್ಬೊಬ್ಬರು ಬಂದಿದ್ದು, 10 ಸೌದಿ ಅರಬೀಯಾ, 14 ಫಿಜಿ ಮತ್ತು ಆರು ಮಂದಿ ಸುಡಾನ್ ಮತ್ತು ಫಿಲಿಫೈನ್ಸ್ ನವರಾಗಿದ್ದಾರೆ.

Leave a Reply

Your email address will not be published. Required fields are marked *

You May Also Like

I can't breathe: ಜಗತ್ತಿನಾದ್ಯಂತ ಕಪ್ಪುಜನರಿಗೆ ಮಿಡಿತ

ಫ್ಲಾಯ್ಡ್ ಅವರ ಕುತ್ತಿಗೆಯ ಮೇಲೆ ಮೊಣಕಾಲನ್ನು ಇಟ್ಟು, ನೆಲಕ್ಕೆ ಒತ್ತಿದ್ದರು. ಈ ವಿಡಿಯೋದಲ್ಲಿ ಫ್ಲಾಯ್ಡ್ “I can’t breathe” ಎಂದು ನಿರಂತರವಾಗಿ ಅವಲತ್ತುಕೊಂಡಿದ್ದರು. ಈ ವಿಡಿಯೋವನ್ನು ಯೂಟ್ಯೂಬ್ ಸೇರಿದಂತೆ ವಿವಿಧ ಜಾಲತಾಣಗಳಲ್ಲಿ ಕೋಟ್ಯಂತರ ಜನ ನೋಡಿದ್ದಾರೆ.

ಕೊರೊನಾ ಲಸಿಕೆ ಹಾಕಿಸಿಕೊಳ್ಳಾಕ ಹೆಣ್ಮಕ್ಳು ಮುದುಕಿಯರಾದ್ರಂತ!

ಕೊರೊನಾ ಕಾಟ ಯಾರಿಗ್ ಆಗಿಲ್ಲ ಹೇಳ್ರಿ. ಕೊರೊನಾದಿಂದ ಬೇಸತ್ ಮಂದಿಗೆ ಕೊರೊನಾ ಲಸಿಕೆ ಸ್ವಲ್ಪ ಸಮಾಧಾನ ತಂದೈತೆ. ಆದ್ರೆ ಸದ್ಯಕ್ ವಯಸ್ಸಾದವ್ರಿಗಷ್ಟ ಕೊರೊನಾ ಲಸಿಕೆ ಹಾಕಾಕತ್ತಿದ್ದಕ್ ಹರೆದ ಹೆಣ್ಮಕ್ಳಿಬ್ರು ಮುದುಕಿ ವೇಷದಾಗ ಬಂದು ಸಿಕ್ ಬಿದ್ ಸುದ್ದೊಯಾಗ್ಯಾರ.

ನರೆಗಲ್ ಗಾರ್ಡನ್ ಕಥೆ: ಲಕ್ಷ ಖರ್ಚು ಮಾಡಿದರು ಅಭಿವೃದ್ಧಿಗೆ ಅಧಿಕಾರಿಗಳ ನಿರ್ಲಕ್ಷ್ಯ..?

ಗದಗ: ಜಿಲ್ಲೆಯ ನರೇಗಲ್ ಪಟ್ಟಣದ 17ನೇ ವಾರ್ಡ್‌ನಲ್ಲಿ ಶ್ರೀ ಅನ್ನದಾನೇಶ್ವರ ಕಾಲೆಜು ಪಕ್ಕದಲ್ಲಿ ನಾಲ್ಕು ವರ್ಷಗಳ…

ಹೊಸ ದಾಖಲೆ ಬರೆದ ಕ್ರಿಸ್ ಗೇಲ್!

ಕ್ರಿಕೆಟ್: ವೆಸ್ಟ್ ಇಂಡೀಸ್ ಆಟಗಾರ ಕ್ರಿಸ್ ಗೇಲ್ ಕೆರೆಬಿಯನ್ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್…