ನಿಜಾಮುದ್ಧೀನ್ ಪ್ರಕರಣ – 34 ರಾಷ್ಟ್ರಗಳ 376 ಜನರ ಮೇಲೆ ಪ್ರಕರಣ!

ನವದೆಹಲಿ: ನಗರದ ನಿಜಾಮುದ್ಧೀನ್ ಮರ್ಕಜ್ ನಲ್ಲಿ ನಡೆದ ಸಮಾವೇಶದಲ್ಲಿ ಪಾಲ್ಗೊಂಡಿದ್ದ 34 ರಾಷ್ಟ್ರಗಳ 376 ವಿದೇಶಿ ಪ್ರಜೆಗಳ ಮೇಲೆ 35 ವಿವಿಧ ಚಾರ್ಜ್ ಶೀಟ್ ಗಳನ್ನು ದೆಹಲಿ ಪೊಲೀಸರು ದಾಖಲಿಸಿದ್ದಾರೆ.
20 ರಾಷ್ಟ್ರಗಳ 82 ವಿದೇಶಿ ಪ್ರಜೆಗಳ ಮೇಲೆ 20 ಚಾರ್ಜ್ ಶೀಟ್ ದಾಖಲಿಸಿದ್ದ ಪೊಲೀಸರು ಬುಧವಾರ 14 ರಾಷ್ಟ್ರಗಳ 294 ವಿದೇಶಿಗರ ಮೇಲೆ 15 ಜಾರ್ಜ್ ಶೀಟ್ ದಾಖಲಿಸಿದ್ದಾರೆ.

ವೀಸಾ ನಿಯಮ ಉಲ್ಲಂಘನೆ, ಕೋವಿಡ್-19 ನಿಟ್ಟಿನಲ್ಲಿ ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳ ಉಲ್ಲಂಘನೆ ಮತ್ತು ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆ, ವಿಪತ್ತು ನಿರ್ವಹಣಾ ಕಾಯ್ದೆ ಮತ್ತು ಸೆಕ್ಷನ್ 144ರ ಅಡಿಯಲ್ಲಿನ ನಿಷೇಧ ಆದೇಶ ಉಲ್ಲಂಘನೆ ಹಿನ್ನೆಲೆಯಲ್ಲಿ ಎಲ್ಲಾ ವಿದೇಶಿ ಪ್ರಜೆಗಳ ಮೇಲೆ ಚಾರ್ಚ್ ಶೀಟ್ ದಾಖಲಿಸಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

294 ಪ್ರಜೆಗಳು ಮಲೇಷ್ಯಾ, ಥೈಲ್ಯಾಂಡ್, ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ ಮತ್ತು ಆಫ್ರಿಕನ್ ರಾಷ್ಟ್ರಗಳಿಗೆ ಸೇರಿದವರಾಗಿದ್ದಾರೆ. ಮಂಗಳವಾರ ಚಾರ್ಜ್ ಶೀಟ್ ದಾಖಲಿಸಿರುವ 82 ವಿದೇಶಿಗರ ಪೈಕಿಯಲ್ಲಿ ನಾಲ್ವರು ಆರೋಪಿಗಳು ಅಪ್ಘಾನಿಸ್ತಾನ, ತಲಾ ಏಳು ಮಂದಿ ಬ್ರಜಿಲ್ ಮತ್ತು ಚೀನಾದವರು. ಐವರು ಅಮೆರಿಕಾ, ಇಬ್ಬರು ಆಸ್ಟ್ರೇಲಿಯಾ, ಕಜಾಕಿಸ್ತಾನ, ಮೊರಕ್ಕೊ, ಇಂಗ್ಲೆಂಡ್ ದೇಶದವರಾಗಿದ್ದಾರೆ. ಉಕ್ರೇನ್, ಈಜಿಪ್ಟ್, ರಷ್ಯಾ, ಜೋರ್ಡನ್, ಟ್ಯೂನಿಷಿಯಾ, ಬೆಲ್ಜಿಯಂ ನಿಂದ ತಲಾ ಒಬ್ಬೊಬ್ಬರು ಬಂದಿದ್ದು, 10 ಸೌದಿ ಅರಬೀಯಾ, 14 ಫಿಜಿ ಮತ್ತು ಆರು ಮಂದಿ ಸುಡಾನ್ ಮತ್ತು ಫಿಲಿಫೈನ್ಸ್ ನವರಾಗಿದ್ದಾರೆ.

Exit mobile version