ನವದೆಹಲಿ: ಲಡಾಕ್ ಗಡಿಯಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ.
ಚೀನಾ ದೇಶದ ಸೇನೆಯೊಂದಿಗೆ ಗಡಿಯಲ್ಲಿ ಸೇನೆಯ ನಿಲುಗಡೆ ಮತ್ತು ಅಲ್ಲಿನ ಪರಿಸ್ಥಿತಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.
ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ರಕ್ಷಣಾ ಪಡೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಭಾರತೀಯ ಸೇನೆ ಮೂರು ಪಡೆಗಳ ಮುಖ್ಯಸ್ಥರು ಭಾಗವಹಿಸಿದ್ದರು.

ಇದಕ್ಕೂ ಮುನ್ನ ಮೋದಿಯವರು ವಿದೇಶಾಂಗ ಸಚಿವರ ಜೊತೆ ಮಾತುಕತೆ ನಡೆಸಿದ್ದರು. ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮೂರೂ ಪಡೆಗಳ ಮುಖ್ಯಸ್ಥರು ಭೇಟಿ ಮಾಡಿ ಚರ್ಚೆ ನಡೆಸಿದ್ದರು ಎಂದು ತಿಳಿದುಬಂದಿದೆ.
ಸಿಕ್ಕಿಮ್ ಮತ್ತು ಲಡಾಕ್ ನಲ್ಲಿ ಸೇನೆಯ ನಿಯೋಜನೆ ಸಮಯದಲ್ಲಿ ಈ ಮಾತುಕತೆ ನಡೆದಿದ್ದು ಮಹತ್ವ ಪಡೆದಿದೆ. ಸ್ಯಾಟಲೈಟ್ ಚಿತ್ರದಲ್ಲಿ ಚೀನಾ ಲಡಾಕ್ ಬಳಿ ವಾಯುನೆಲೆ ವಿಸ್ತರಿಸುತ್ತಿರುವುದು ಕಂಡುಬಂದಿದೆ.

ಲಡಾಕ್ ನ ವಿವಾದಿತ ಪ್ರದೇಶದಲ್ಲಿ ಚೀನಾದ ಹೆಲಿಕಾಪ್ಟರ್ ಗಸ್ತು ತಿರುಗುತ್ತಿರುವುದು ಕಂಡುಬಂದಿದೆ ಎಂದು ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಆರ್ ಕೆ ಭದೌರಿಯಾ ಹೇಳುತ್ತಿದ್ದಾರೆ.

Leave a Reply

Your email address will not be published. Required fields are marked *

You May Also Like

ನಿಗಮ-ಮಂಡಳಿ: ಉತ್ತರ ಕರ್ನಾಟಕಕ್ಕೆ ಸಿಂಹಪಾಲು

ಬೆಂಗಳೂರು, ಮೈಸೂರು, ರಾಮನಗರಕ್ಕೆ ಸೊನ್ನೆ ರಾಜ್ಯ ಸರ್ಕಾರಕ್ಕೆ ಒಂದು ವರ್ಷ ತುಂಬಿದ ಈ ಸಂದರ್ಭದಲ್ಲಿ ಸಚಿವ ಸ್ಥಾನ ಆಕಾಂಕ್ಷಿಗಳಿಗೆ ಸಂತೈಸುವ ಭಾಗವಾಗಿ 24 ಶಾಸಕರಿಗೆ ನಿಗಮ-ಮಂಡಳಿ ಗಿಫ್ಟ್ ನೀಡಲಾಗಿದೆ. ಯಾವುದೇ ಮುನ್ಸೂಚನೆ ಇಲ್ಲದೇ ಮುಖ್ಯಮಂತ್ರಿ ಯಡಿಯೂರಪ್ಪ 24 ನಿಗಮ-ಮಂಡಳಿಗಳಿಗೆ ಶಾಸಕರನ್ನು ಅಧ್ಯಕ್ಷರನ್ನಾಗಿ ಮಾಡುವ ಮೂಲಕ ಚಕಿತಗೊಳಿಸಿದ್ದಾರೆ.

ಕೆಸಿಸಿ ಬ್ಯಾಂಕ್ ಗೆ ಪುಲಕೇಶಿ ಉಪನಾಳ ನಾಮನಿರ್ದೇಶನ

ಲಕ್ಷ್ಮೇಶ್ವರ: ಇಲ್ಲಿನ ಶ್ರೀ ಸೋಮೇಶ್ವರ ರೈತರ ಸಹಕಾರಿ ನೂಲಿನ ಗಿರಣಿ ಅಧ್ಯಕ್ಷರಾದ ಪುಲಿಕೇಶಿ ಗೂಳಪ್ಪ ಉಪನಾಳ…

‘ಪುಷ್ಪ’ ಜಾತಿ ಬಿರುಗಾಳಿಯಲ್ಲಿ

ಹೈದರಾಬಾದ್: ರಾಜಕೀಯ ಮತ್ತು ಸಿನಿಮಾಗಳನ್ನು  ಅತಿ ಹೆಚ್ಚು ಪೋಸಿಸುವ  ರಾಜ್ಯಗಳಲ್ಲಿ ಆಂಧ್ರ ಪ್ರದೇಶಒಂದಾಗಿದೆ.  ಹಿಂದಿನಿಂದಲೂ ಈ…

ನಟ ಶಾರೂಖ್ ಖಾನ್ ಹಾಡಿರುವ ಕ್ವಾರಂಟೈನ್ ಹಾಡು ಹೇಗಿದೆ ನೀವೂ ಕೇಳಿ

ಮೊದಲ ಬಾರಿಗೆ ಹಾಡೊಂದಕ್ಕೆ ಬಾಲಿವುಡ್ ನಟ ಶಾರೂಕ್ ಖಾನ್ ಧ್ವನಿಗೂಡಿಸಿದರೆ ಅವರ ಮಗ ನಟಿಸಿದ್ದಾರೆ. ಕ್ವಾರೈಂಟೇನ್ ಹಾಡೊಂದಕ್ಕೆ ಶಾರೂಕ್ ನೀಡಿದ ಧ್ವನಿ ಹೇಗಿದೆ ಮೋಡಿ.