ಲಕ್ಷ್ಮೇಶ್ವರ: ಇಲ್ಲಿನ ಶ್ರೀ ಸೋಮೇಶ್ವರ ರೈತರ ಸಹಕಾರಿ ನೂಲಿನ ಗಿರಣಿ ಅಧ್ಯಕ್ಷರಾದ ಪುಲಿಕೇಶಿ ಗೂಳಪ್ಪ ಉಪನಾಳ ಇವರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಧಾರವಾಡ (ಕೆಸಿಸಿ ಬ್ಯಾಂಕ್) ಇದಕ್ಕೆ ಸರ್ಕಾರದ ಪ್ರತಿನಿಧಿಯಾಗಿ ಅಧಿಕಾರೇತರ ಸದಸ್ಯರಾಗಿ ನಾಮ ನಿರ್ದೇಶನಗೊಂಡಿದ್ದಾರೆ. ಈ ಕುರಿತು ಸಹಕಾರ ಇಲಾಖೆ ಅಧಿಸೂಚನೆ ಹೊರಡಿಸಿದೆ.