ಮಸ್ಕಿ: ಪಟ್ಟಣದ ಬ್ಯಾಂಕಿನ ಉದ್ಯೋಗಿಗೆ ಕೊರೊನಾ ಪಾಸಿಟಿವ್ ದೃಡ ಪಟ್ಟಿರುವ ಹಿನ್ನಲ್ಲೆಯಲ್ಲಿ ಬ್ಯಾಂಕ್ ವನ್ನು ಸಿಲ್ ಡೌನ್ ಮಾಡಲಾಗಿದೆ. ಬ್ಯಾಂಕಿನ ಸಿಬ್ಬಂದಿ ಮೂಲತಃ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕೆಸರೂ ಗ್ರಾಮದವರು. ಕೊಪ್ಳಳ ಜಿಲ್ಲೆಯಲ್ಲಿ ಕ್ವಾರೆಂಟೈನ್ ಗೆ ಹಾಕಲಾಗಿದ್ದರು, ಅಲ್ಲಿ ಗಂಟಲು ದ್ರವ ಪರೀಕ್ಷೆ ಮಾಡಿರುವುದರಿಂದ ಕೊರೊನಾ ಪಾಸಿಟಿವ್ ಇರುವುದು ದೃಢ ಪಟ್ಟಿದೆ. ಇದರಿಂದ ಜನರಲ್ಲಿ ಆತಂಕ ಮನೆ ಮಾಡಿದೆ. ವಿಷಯ ತಿಳಿದ ತಕ್ಷಣ ಲಿಂಗಸ್ಗೂರಿನ ಸಹಾಯಕ ಆಯುಕ್ತ ರಾಜಶೇಖರ ಡಂಬಳ ಅವರು ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸಹಾಯದೊಂದಿಗೆ ಬ್ಯಾಂಕಿಗೆ ಆಗಮಿಸಿ ಬ್ಯಾಂಕ್ ನ್ನು ಸೀಲ್‌ಡೌನ್‌ ಮಾಡಿದರು.
ಬಳಿಕ ರಾಯಚೂರಿನ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಥಳಕ್ಕೆ‌ಆಗಮಿಸಿ ಪರಿಶೀಲಿಸಿದರು. ತಾಲೂಕ ಮಟ್ಟದ ಅಧಿಕಾರಿಗಳ ತುರ್ತು ಸಭೆ ನಡೆಸಿದರು.‌ ಈ ಸಂದರ್ಭದಲ್ಲಿ ತಹಶೀಲ್ದಾರ್ ಬಲರಾಮ‌ ಕಟ್ಟಿಮನಿ. ಸಿಪಿಐ ದೀಪಕ್‌ ಬೂಸರೆಡ್ಡಿ. ಪಿಎಸ್ಐ ಸಣ್ಣ ಈರೇಶ, ಆರೋಗ್ಯ ಅಧಿಕಾರಿ ನಂದಕುಮಾರ ಸೇರಿದಂತೆ ಇನ್ನಿತರಿದ್ದರು.

Leave a Reply

Your email address will not be published. Required fields are marked *

You May Also Like

ಗುತ್ತಿಗೆ ದಾರನಿಂದ ಕಳಪೆ ಕಾಮಗಾರಿ-ಗ್ರಾಮಸ್ಥರ ಆಕ್ರೋಶ

ಲಕ್ಷ್ಮೇಶ್ವರ: ಉತ್ತಮ ರಸ್ತೆ ನಿರ್ಮಾಣಕ್ಕೆಂದು ಸರಕಾರ ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆ ಮಾಡುತ್ತೇ. ಆದ್ರೆ, ಗುತ್ತಿಗೆದಾರರು…

ಇನ್ಮುಂದೆ ಸಂಡೇ ಕರ್ಫ್ಯೂ ಇಲ್ಲ

ಬೆಂಗಳೂರು:ನಾಳೆ ದಿನಾಂಕ 31.05.2020 ಭಾನುವಾರದಂದು ಕಂಪ್ಲೀಟ್‌ ಲಾಕ್ ಡೌನ್ ಇರುವುದಿಲ್ಲ. ಆದ್ದರಿಂದ ದೈನಂದಿನ ಚಟುವಟಿಕೆಗಳು ಎಂದಿನಂತೆ…

Актуальное работающее зеркало БК Леон Рабочее зеркало официального сайта букмекерской конторы Леон

Актуальное работающее зеркало БК Леон Рабочее зеркало официального сайта букмекерской конторы Леон…

ಹೆಚ್ಚಿನ ಬಸ್ ಓಡಾಟಕ್ಕೆ ಒತ್ತಾಯಿಸಿ ಮನವಿ

ಹುಬ್ಬಳ್ಳಿ ಹಾಗು ಗದಗ ಮತ್ತು ಗ್ರಾಮೀಣ ಪ್ರದೇಶಗಳಿಗೆ ಸಮರ್ಪಕ ಬಸ್ಸು ಓಡಿಸುವಂತೆ ಆಗ್ರಹಿಸಿ ಶನಿವಾರ ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಘಟಕ ವ್ಯವಸ್ಥಾಪಕ ಶೇಖರ ನಾಯಕ ಅವರಿಗೆ ಮನವಿ ಸಲ್ಲಿಸಿದರು.