ಬೆಂಗಳೂರು: ಆನ್ ಲೈನ್ ನಲ್ಲಿ ಹಣ ವಂಚನೆ, ನಕಲಿ ಐಡಿ ಬಳಸಿ ವಂಚನೆ ಇತ್ಯಾದಿ ಸುದ್ದಿಗಳಿಗೇನು ಬರವಿಲ್ಲ. ಆದರೆ, ಕೆಲವರು ಸರ್ಕಾರದ ಪರವಾಗಿ ಜನಾಭಿಪ್ರಾಯ ರೂಪಿಸಲು ಇಂತಹ ಸುಳ್ಳು ಸುದ್ದಿಗಳನ್ನು ಹರಡುತ್ತಾರೆ. ಇವುಗಳ ಪೈಕಿ ಇದೀಗ Rs.5,000 ಪರಿಹಾರ ನಿಧಿ ಹೆಸರಲ್ಲಿ ಒಂದು ಸಂದೇಶ ವಾಟ್ಸ್ ಅಪ್ನಲ್ಲಿ ವೈರಲ್ ಆಗಿದೆ.

ಕರ್ನಾಟಕದಲ್ಲಿ ಕನ್ನಡದಲ್ಲೇ ಈ ಸಂದೇಶವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈಗ ಬಹುತೇಕ ಹಂಚಿಕೆಯಾಗಿರುವ ಸಂದೇಶದಲ್ಲಿ “FG ಅಂತಿಮವಾಗಿ  ಪ್ರತಿ ನಾಗರಿಕರಿಗೆ ಉಚಿತ Rs.5,000 ಪರಿಹಾರ ನಿಧಿಗಳನ್ನು ನೀಡಲು ಪ್ರಾರಂಭಿಸಿದೆ. ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ ನಿಮ್ಮ ಹಣವನ್ನು ಪಡೆಯಿರಿ ನನಗೆ ಈಗಾಗಲೆ ಬಂದಾಗಿದೆ”ಎಂದು ಹೇಳಲಾಗಿದ್ದು, ಇದರಲ್ಲಿ ಈ ಕೆಳಗಿನ ಲಿಂಕ್ ಅನ್ನು ನೀಡಲಾಗಿದೆ.

https://bit.ly/free-funds-for-indian ಈ ಲಿಂಕ್ ಅನ್ನು ಓಪನ್ ಮಾಡಿದರೆ, ಹತ್ತು ಟೆಂಪ್ಲೇಟ್ ಗಳು ಓಪನ್ ಆಗುತ್ತವೆ. ಇದರಲ್ಲಿ ವ್ಯಕ್ತಿಯ ಕುರಿತು ಕೆಲವು ಮಾಹಿತಿಗಳನ್ನು ಸಂಗ್ರಹಿಸಿ, ಕಡೆಗೆ ವ್ಯಕ್ತಿಗೆ ಕೊರೊನಾ ಇದೆಯೋ ಇಲ್ಲವೋ ಎಂದು ಹೇಳಲಾಗುತ್ತದೆ. ಇದೊಂದು ಕೊರೊನಾ ಕುರಿತು ಮಾಹಿತಿಯನ್ನು ನೀಡುವ ಕೆಲಸವನ್ನು ಮಾತ್ರ ಮಾಡುವ ವೆಬ್ ಸೈಟ್.

ಆದರೆ, ಇದನ್ನು ಸೆಂಡ್ ಮಾಡುತ್ತಿರುವ ವ್ಯಕ್ತಿಗಳ ಸಂದೇಶದಲ್ಲಿ “Note: ನೀವು ಒಮ್ಮೆ ಮಾತ್ರ ಕ್ಲೈಮ್ ಮಾಡಬಹುದು ಮತ್ತು ಕ್ರೆಡಿಟ್ ಪಡೆಯಬಹುದು ಮತ್ತು ಇದು ಸೀಮಿತವಾಗಿದೆ ಆದ್ದರಿಂದ ನಿಮ್ಮ ಈಗಿನ ತ್ವರಿತತೆಯನ್ನು ಪಡೆಯಿರಿ” ಎಂದು ಹೇಳಲಾಗಿದೆ. ಆದರೆ, ಇದರಿಂದ ಯಾರಿಗೂ ಹಣ ಬಂದಿಲ್ಲ. ಆದರೂ ಈ ಸಂದೇಶವನ್ನು ರಾಜ್ಯದಲ್ಲಿ ವ್ಯಾಪಕವಾಗಿ ಹಂಚಿಕೆಯಾಗುತ್ತಿದೆ.

Leave a Reply

Your email address will not be published. Required fields are marked *

You May Also Like

ಮೋಹನ್ ಲಿಂಬಿಕಾಯಿ ಅವ್ರಿಗೆ ಆಸಕ್ತಿ ಇದ್ರೆ ಕಾರಕೂನಕಿ ಜವಾಬ್ದಾರಿ ಕೊಡ್ತಾರಂತೆ ದಿಂಗಾಲೇಶ್ವರ ಶ್ರೀಗಳು!

ಹುಬ್ಬಳ್ಳಿ: ಮೂರು ಸಾವಿರ ಮಠದ ಸರ್ವನಾಶಕ್ಕೆ ಉನ್ನತ ಮಟ್ಟದ ಸಮಿತಿ ಸಿದ್ಧವಾಗಿದೆ. ದಿಂಗಾಲೇಶ್ವರ ಶ್ರೀಗಳಿಗೆ ಯಾವತ್ತು…

ತ್ವರಿತ ಕೋವಿಡ್ ಪರೀಕ್ಷೆಗೆ ಸ್ವಾಬ್ ಕಲೆಕ್ಷನ್ ಬೂತ್‌ಗಳಿಗೆ ಚಾಲನೆ

ತ್ವರಿತವಾಗಿ ಮತ್ತು ಹೆಚ್ಚಿನ ಸಂಖ್ಯೆಯ ಕೋವಿಡ್ ಮಾದರಿ ಪರೀಕ್ಷೆ ನಡೆಸಲು ಅನುವಾಗುವಂತೆ ವಿಶಿಷ್ಟ ವಿನ್ಯಾಸದ ಸ್ವಾಬ್ ಕಲೆಕ್ಟಿಂಗ್ ಬೂತ್ ಗೆ ಇಂದು ಬೆಂಗಳೂರಿನಲ್ಲಿ ಚಾಲನೆ ನೀಡಲಾಗಿದೆ.

ಕಂಟೈನ್ಮೆಂಟ್ ಪ್ರದೇಶ ಹೊರತು ಪಡಿಸಿ ಉಳಿದ ಜಿಲ್ಲೆಗಳಲ್ಲಿ ಆರ್ಥಿಕ ಚಟುವಟಿಕೆ

ಬೆಂಗಳೂರು : ಸತತವಾಗಿ ಮುಂದುವರೆದ ಲಾಕ್ ಡೌನ್ ನಿಂದಾಗಿ ರಾಜ್ಯದ ಬೊಕ್ಕಸ ಬರಿದಾಗಿದೆ. ಕಂಟೈನ್ಮೆಂಟ್ ಪ್ರದೇಶಗಳನ್ನು…